Herbal Body Wash: ಚರ್ಮ ಸುಂದರವಾಗಿರಲು ಸಾಬೂನಿಂದಲ್ಲ ಈ ವಸ್ತುವನ್ನು ಬಳಸಿ ಸ್ನಾನ ಮಾಡಿ

ಮಾರುಕಟ್ಟೆಯಲ್ಲಿ ಲಭ್ಯವಿರುವ ಸೋಪಿನ ಬದಲಾಗಿ ಹರ್ಬಲ್ ಬಾಡಿ ವಾಶ್ ಬಳಸುವುದು ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Sep 1, 2021, 11:43 AM IST
  • ಸ್ನಾನ ಮಾಡಲು ನಾವು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ತರಾವರಿ ಸೋಪುಗಳನ್ನು ಬಳಸುತ್ತೇವೆ
  • ಆದರೆ ಸೋಪ್ ಬದಲಿಗೆ ಗಿಡಮೂಲಿಕೆಗಳ ಅಂದರೆ ಹರ್ಬಲ್ ಬಾಡಿ ವಾಶ್ ಬಳಸುವುದು ಉತ್ತಮವಾಗಿದೆ
  • ನೀವು ಈ ಮೂಲಿಕೆ ಬಾಡಿ ವಾಶ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು
Herbal Body Wash: ಚರ್ಮ ಸುಂದರವಾಗಿರಲು ಸಾಬೂನಿಂದಲ್ಲ ಈ ವಸ್ತುವನ್ನು ಬಳಸಿ ಸ್ನಾನ ಮಾಡಿ title=
Herbal Body Wash Benefits

ಬೆಂಗಳೂರು: ಚರ್ಮವನ್ನು ಸುಂದರವಾಗಿಡಲು, ಆರೋಗ್ಯವಾಗಿರುವುದು ಬಹಳ ಮುಖ್ಯ. ಇದರ ಜೊತೆಗೆ ಸ್ವಚ್ಚತೆಯೂ ಅತೀ ಅಗತ್ಯ. ಹಾಗಾಗಿ ನಿತ್ಯ ಸ್ನಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಸ್ನಾನ ಮಾಡಲು ನಾವು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ತರಾವರಿ ಸೋಪುಗಳನ್ನು ಬಳಸುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಸಾಬೂನುಗಳಲ್ಲಿ ರಾಸಾಯನಿಕಗಳು ಮತ್ತು ಹಾನಿಕಾರಕ ಪದಾರ್ಥಗಳಿರುತ್ತವೆ. ಅದು ಚರ್ಮವನ್ನು ಒಣಗಿಸುತ್ತದೆ. ಆದರೆ ನೀವು ಸೋಪ್ ಬದಲಿಗೆ ಗಿಡಮೂಲಿಕೆಗಳ ಅಂದರೆ ಹರ್ಬಲ್ ಬಾಡಿ ವಾಶ್ (Herbal Body Wash) ಬಳಸುವುದು ಉತ್ತಮವಾಗಿದೆ. ನೀವು ಈ ಮೂಲಿಕೆ ಬಾಡಿ ವಾಶ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಹರ್ಬಲ್ ಬಾಡಿ ವಾಶ್ ನಿಮ್ಮ ಚರ್ಮವನ್ನು ಪೋಷಿಸುತ್ತದೆ (Skin Care) ಮತ್ತು ಅದು ನಿಮ್ಮ ಚರ್ಮವು ಒಣಗುವುದನ್ನು ತಡೆಯುತ್ತದೆ.

ಹರ್ಬಲ್ ಬಾಡಿ ವಾಶ್ ತಯಾರಿಸುವುದು ಹೇಗೆ? (how to make herbal body wash at home)
ಹರ್ಬಲ್ ಬಾಡಿ ವಾಶ್ (Herbal Body Wash) ತಯಾರಿಸಲು ಬೇಕಾಗುವ ಪದಾರ್ಥಗಳು:

* 1/3 ಕಪ್ ಶುದ್ಧ ಜೇನುತುಪ್ಪ
* 1/3 ಕಪ್ ಆಲಿವ್ ಎಣ್ಣೆ
* 1/3 ಕಪ್ ಅಲೋವೆರಾ ಜೆಲ್
* 1/3 ಕಪ್ ಕ್ಯಾಸ್ಟೈಲ್ ಸೋಪ್
* 50-60 ಹನಿಗಳು ಸಾರಭೂತ ತೈಲ

ಇದನ್ನೂ ಓದಿ- Skin Care: ಕೇವಲ 2 ಚಮಚ ಮೊಸರನ್ನು ಮುಖಕ್ಕೆ ಹಚ್ಚಿ ಚರ್ಮದ ಸಮಸ್ಯೆಗಳಿಗೆ ಹೇಳಿ ಬೈ! ಬೈ!

ಹರ್ಬಲ್ ಬಾಡಿ ವಾಶ್ ತಯಾರಿಸುವ ವಿಧಾನ  (How to prepare herbal body wash):
>> ಮೊದಲಿಗೆ ಒಂದು ಬಾಟಲಿಯನ್ನು ತೆಗೆದುಕೊಂಡು ಅದರಲ್ಲಿ ಸಾರಭೂತ ತೈಲವನ್ನು ಹೊರತುಪಡಿಸಿ ಮೇಲೆ ತಿಳಿಸಿದ ಬೇರೆಲ್ಲಾ ಪದಾರ್ಥಗಳನ್ನೂ ಹಾಕಿ.
>>  ಬಾಟಲಿಯನ್ನು ಚೆನ್ನಾಗಿ ಅಲ್ಲಾಡಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನಂತರ ಅದಕ್ಕೆ ಸಾರಭೂತ ತೈಲವನ್ನು ಸೇರಿಸಿ ಅದನ್ನು ಮಿಕ್ಸ್ ಮಾಡಿ.
>> ಇದರ ನಂತರ, ಈ ಮಿಶ್ರಣವನ್ನು ಮತ್ತೊಮ್ಮೆ ಅಲ್ಲಾಡಿಸಿ ಮತ್ತು ಅದನ್ನು ತಂಪಾದ ಮತ್ತು ಒಣ ಸ್ಥಳದಲ್ಲಿ ಸಂಗ್ರಹಿಸಿ.
>> ಸ್ನಾನಕ್ಕಾಗಿ ನೀವು ಈ ಮೂಲಿಕೆ ಬಾಡಿ ವಾಶ್ (Body Wash) ಅನ್ನು ಒಂದು ವರ್ಷ ಬಳಸಬಹುದು.

ಇದನ್ನೂ ಓದಿ- Beauty Tips: 20 ರಿಂದ 30ನೇ ವಯಸ್ಸಿನಲ್ಲಿ ಈ ಸಲಹೆಗಳನ್ನು ಅನುಸರಿಸಿ, ಲೈಫ್ ಲಾಂಗ್ ಯಂಗ್ ಆಗಿರಿ

ಹರ್ಬಲ್ ಬಾಡಿ ವಾಶ್ ಪ್ರಯೋಜನಗಳು (Herbal body wash benefits):
*  ಹರ್ಬಲ್ ಬಾಡಿ ವಾಶ್ ನಲ್ಲಿ ಇರುವ ಆಲಿವ್ ಎಣ್ಣೆ ಮತ್ತು ಅಲೋವೆರಾ ಜೆಲ್ ಚರ್ಮಕ್ಕೆ ಸಾಕಷ್ಟು ತೇವಾಂಶವನ್ನು ಒದಗಿಸುತ್ತದೆ. ಈ ಕಾರಣದಿಂದಾಗಿ ಚರ್ಮವು ಒಣಗದಂತೆ ರಕ್ಷಿಸುತ್ತದೆ.
* ಸಾರಭೂತ ತೈಲಗಳು ಚರ್ಮಕ್ಕೆ ಪ್ರಯೋಜನವನ್ನು ನೀಡುತ್ತವೆ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
* ಯಾವುದೇ ರೀತಿಯ ಚರ್ಮ ಹೊಂದಿರುವ ಜನರು ಈ ಹರ್ಬಲ್ ಬಾಡಿ ವಾಶ್ ಅನ್ನು ಬಳಸಬಹುದು.

ಹಕ್ಕು ತ್ಯಾಗ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.  ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News