ತೂಕ ಇಳಿಸಿಕೊಳ್ಳಲು ಇಂದೇ ʼಪಾನಿಪುರಿʼ ತಿನ್ನಲು ಪ್ರಾರಂಭಿಸಿ..! ಇದನ್ನು ನೆನಪಿನಲ್ಲಿಡಿ

Panipuri for weight loss : ಪಾನಿಪುರಿ ಎಂದೂ ಕರೆಯುವ ಗೋಲ್ಗಪ್ಪಾ ರುಚಿ ಯಾರಿಗೆ ತಾನೇ ಇಷ್ಟವಿಲ್ಲ. ಇದು ನಮ್ಮ ದೇಶದ ಅತ್ಯಂತ ನೆಚ್ಚಿನ ಸ್ಟೀಟ್‌ ಫುಡ್‌ಗಳಲ್ಲಿ ಒಂದಾಗಿದೆ. ಆದರೆ ಡಯಟ್ ಪ್ಲಾನ್ ಸರ್ಕಲ್ ನಲ್ಲಿ ಪಾನಿಪುರಿ ತಿನ್ನಲು ಸಾವಿರ ಸಲ ಯೋಚಿಸುವವರೇ ಹೆಚ್ಚು.

Written by - Krishna N K | Last Updated : Aug 3, 2023, 09:26 PM IST
  • ಗೋಲ್ಗಪ್ಪಾ ನಮ್ಮ ದೇಶದ ಅತ್ಯಂತ ನೆಚ್ಚಿನ ಸ್ಟೀಟ್‌ ಫುಡ್‌ಗಳಲ್ಲಿ ಒಂದಾಗಿದೆ.
  • ಡಯಟ್ ಮಾಡುವವರು ಪಾನಿಪುರಿ ತಿನ್ನಲು ಸಾವಿರ ಸಲ ಯೋಚಿಸುವವರೇ ಹೆಚ್ಚು.
  • ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಪಾನಿಪುರಿ ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಇಂದೇ ʼಪಾನಿಪುರಿʼ ತಿನ್ನಲು ಪ್ರಾರಂಭಿಸಿ..! ಇದನ್ನು ನೆನಪಿನಲ್ಲಿಡಿ title=

Weight loss tips : ಪಾನಿಪುರಿ ನಮ್ಮ ದೇಶದ ಅತ್ಯಂತ ನೆಚ್ಚಿನ ಸ್ಟ್ರೀಟ್‌ ಫುಡ್‌ ಆಹಾರಗಳಲ್ಲಿ ಒಂದಾಗಿದೆ. ಆದರೆ ಈ ತಿಂಡಿಯನ್ನು ಡಯಟ್ ಮಾಡುವವರು ತಿನ್ನಬಾರದು ಅಂತ ಹೇಳಲಾಗುತ್ತದೆ. ಅಲ್ಲದೆ ಪಾನಿಪುರಿ ತಿನ್ನಲು ಸಾವಿರ ಸಲ ಯೋಚಿಸುವವರೇ ಹೆಚ್ಚು. ಆದರೆ ಪಾನಿಪುರಿ ತಿಂದರೆ ತೂಕ ಕಡಿಮೆಯಾಗುತ್ತದೆ ಎಂದು ಹೇಳಿದರೆ ನೀವು ನಂಬುತ್ತೀರಾ...? ಆದರೆ ಇದು ನಿಜ. ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಪಾನಿಪುರಿ ಬಹಳಷ್ಟು ಸಹಾಯ ಮಾಡುತ್ತದೆ. ಬನ್ನಿ ವಿವರವಾಗಿ ತಿಳಿಯಿರಿ. 

ಆರೋಗ್ಯಕರ ಆಯ್ಕೆಯಾಗಿ ನೀವು ಡಯೇಟ್‌ನಲ್ಲಿದ್ದರೆ ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಬಯಸಿದರೆ ಕೇವಲ 6 ಪಾನಿ ಪೂರಿಗಳನ್ನು ತಿನ್ನುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಗೋಲ್ಗಪ್ಪಾ ನೀರು ಎಷ್ಟು ತೀಕ್ಷ್ಣ ಮತ್ತು ಕಟುವಾಗಿದೆ ಎಂಬುದು ನಿಮಗೆ ತಿಳಿದಿರಬೇಕು. ಹಾಗಾಗಿ ಪಾನಿಪುರಿ ತಿಂದ ಗಂಟೆಗಟ್ಟಲೆ ಹಸಿವಾಗುವುದಿಲ್ಲ. ಇದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ: ಈ ಕಾಯಿಲೆ ಇರುವವರು ಮೊಮೊಸ್ ತಿನ್ನುವ ಮುನ್ನ ಯೋಚಿಸಿ!

ಮನೆಯಲ್ಲಿ ತಯಾರಿಸಿದ ಪಾನಿಪುರಿ ತಿನ್ನಿರಿ : ಮನೆಯಲ್ಲಿಯೇ ಮಾಡಿದ ಪಾನಿಪುರಿ ಮಾತ್ರ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅನೇಕ ಆಹಾರ ತಜ್ಞರು ಶಿಫಾರಸು ಮಾಡುತ್ತಾರೆ. ಗೋಧಿ ಪೂರಿಗಳನ್ನು ತಯಾರಿಸಿ, ಅವುಗಳನ್ನು ಸ್ವಲ್ಪ ಎಣ್ಣೆಯಲ್ಲಿ ಫ್ರೈ ಮಾಡಬಹುದು. ಇದರೊಂದಿಗೆ ಸಿಹಿ ನೀರಿಗೆ ಬದಲಾಗಿ ಜೀರಾ ಅಥವಾ ಜಲ್ಜೀರಾ ನೀರನ್ನು ಬಳಸಬಹುದು. 

ಪಾನಿಪುರಿ ನೀರು ಅನೇಕ ಪ್ರಯೋಜನಗಳನ್ನು ಹೊಂದಿದೆ. ಪುದೀನಾ, ಜೀರಿಗೆ ಮತ್ತು ಇಂಗು ಹಾಕಿ ನೀರನ್ನು ತಯಾರಿಸಿದರೆ ಅದು ನಿಮ್ಮ ಜೀರ್ಣಕ್ರಿಯೆಗೆ ಒಳ್ಳೆಯದು. ನೀವು ಕೊತ್ತಂಬರಿ ಸೊಪ್ಪನ್ನು ಸಹ ಬಳಸಬಹುದು, ಇದು ದೇಹದಲ್ಲಿ ಉರಿಯೂತವನ್ನು ತಡೆಯುತ್ತದೆ. ಇಂಗು ಮಹಿಳೆಯರಲ್ಲಿ ಮುಟ್ಟಿನ ನೋವನ್ನು ನಿವಾರಿಸುತ್ತದೆ. ಜೀರಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪಾನಿಪುರಿ ನೀರು ಅನೇಕ ಜೀರ್ಣಕಾರಿ ಗುಣಗಳನ್ನು ಹೊಂದಿದೆ. 

ಇದನ್ನೂ ಓದಿ: ಬಾದಾಮಿಯ ಅದ್ಭುತ ಆರೋಗ್ಯ ಪ್ರಯೋಜನಗಳು

ಪಾನಿ ಪುರಿಯಲ್ಲಿ ಸಿಹಿ ಚಟ್ನಿಯನ್ನು ತಪ್ಪಿಸಿ, ಏಕೆಂದರೆ ಇದು ಬೊಜ್ಜನ್ನು ಹೆಚ್ಚಿಸುವ ಗುಣ ಹೊಂದಿದೆ. ನೀವು ಡಯಟ್ ಪ್ಲಾನ್‌ನಲ್ಲಿದ್ದರೆ, ಸಕ್ಕರೆ ಅಂಶವಿರುವ ಯಾವುದೇ ಪದಾರ್ಥವನ್ನು ತಿನ್ನಬೇಡಿ. ಆದ್ದರಿಂದ ಪಾನಿಪುರಿಯಲ್ಲಿ ಸಿಹಿ ನೀರಿನ ಬದಲು ಹುಳಿ ಅಥವಾ ಪುದೀನಾ ನೀರನ್ನು ಸೇರಿಸಿ ತಿನ್ನಲು ಪ್ರಯತ್ನಿಸಿ. ರವೆ ಗೊಲ್ಗಪ್ಪಾದಿಂದ ದೂರವಿರಲು ಪ್ರಯತ್ನಿಸಿ ಮತ್ತು ಗೋಧಿ ಹಿಟ್ಟು ಗೊಲ್ಗಪ್ಪಾ ತಿನ್ನಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News