ಈ ಕಾಯಿಲೆ ಇರುವವರು ಮೊಮೊಸ್ ತಿನ್ನುವ ಮುನ್ನ ಯೋಚಿಸಿ!

ಈ ಖಾದ್ಯ ತಿನ್ನಲು ಬಲು ರುಚಿ. ಈ ರುಚಿಯ ಕಾರಣದಿಂದಲೇ ಇದನ್ನು ಎಷ್ಟು ತಿಂದರೂ ಕಡಿಮೆ ಎಂದೆನಿಸುತ್ತದೆ.   ಮತ್ತೆ ಮತ್ತೆ ತಿನ್ನುತ್ತಲೇ ಇರಬೇಕು ಅನ್ನಿಸುತ್ತದೆ. ಆದರೆ ಈ ಖಾದ್ಯ ಸಾವಿಗೂ ಕಾರಣವಾಗಬಹುದು.

Written by - Ranjitha R K | Last Updated : Aug 3, 2023, 11:04 AM IST
  • 600 ವರ್ಷಗಳಷ್ಟು ಹಳೆಯದಾದ ಖಾದ್ಯ ಈ ಮೊಮೊಸ್
  • ಅಧಿಕ ಪ್ರಮಾಣದಲ್ಲಿರುವ ಪ್ರೋಟೀನ್
  • ಮೊಮೊಸ್ ತಿನ್ನುವುದರಿಂದ ಆಗುವ ಅನನುಕೂಲಗಳು ಇವು
ಈ ಕಾಯಿಲೆ ಇರುವವರು ಮೊಮೊಸ್ ತಿನ್ನುವ ಮುನ್ನ ಯೋಚಿಸಿ!  title=

Momos health effects : ಭಾರತದ ವಿವಿಧ ಭಾಗಗಳಲ್ಲಿ ಮೊಮೊಸ್ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ನೇಪಾಳದಿಂದ ಆರಂಭವಾದ ಈ ಖಾದ್ಯ ದೇಶದ ಮೂಳೆ ಮೂಲೆಗಳಿಗೂ ಹಬ್ಬಿದೆ. ಸಂಜೆಯಾಗುತ್ತಿದ್ದಂತೆಯೇ ರಸ್ತೆ ಬದಿಗಳಲ್ಲಿ ಮೊಮೊಸ್ ಸ್ಟಾಲ್‌ಗಳು  ಎದ್ದು ನಿಲ್ಲುತ್ತವೆ. ಈ ಖಾದ್ಯ ತಿನ್ನಲು ಬಲು ರುಚಿ. ಈ ರುಚಿಯ ಕಾರಣದಿಂದಲೇ ಇದನ್ನು ಎಷ್ಟು ತಿಂದರೂ ಕಡಿಮೆ ಎಂದೆನಿಸುತ್ತದೆ.   ಮತ್ತೆ ಮತ್ತೆ ತಿನ್ನುತ್ತಲೇ ಇರಬೇಕು ಅನ್ನಿಸುತ್ತದೆ. ಆದರೆ ಈ ಖಾದ್ಯ ಸಾವಿಗೂ ಕಾರಣವಾಗಬಹುದು. ಬಿಹಾರದ ಗೋಪಾಲ್ ಗಂಜ್ ನಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ. ಅತಿಯಾಗಿ ಮೊಮೊಸ್  ಸೇವಿಸಿರುವುದೇ ಈ ಯುವಕನ ಸಾವಿಗೆ ಕಾರಣ ಎನ್ನುವುದನ್ನು ಇಲ್ಲಿ   ವೈದ್ಯರು ಕೂಡಾ ಸ್ಪಷ್ಟಪಡಿಸಿದ್ದಾರೆ. 

600 ವರ್ಷಗಳಷ್ಟು ಹಳೆಯದಾದ ಖಾದ್ಯ ಈ ಮೊಮೊಸ್ : 
ಮೊಮೊಸ್‌ 600 ವರ್ಷಗಳಷ್ಟು ಹಳೆಯದಾದ ಖಾದ್ಯ. ಇದು ಅರುಣಾಚಲ ಪ್ರದೇಶದ ಮೊನ್ಪಾ ಮತ್ತು ಶೆರ್ಡುಕ್ಪೆನ್ ಬುಡಕಟ್ಟುಗಳ ಆಹಾರದ ಪ್ರಮುಖ ಭಾಗವಾಗಿದೆ. ಈ ಸ್ಥಳವು ನೇಪಾಳ ಮತ್ತು ಟಿಬೆಟ್ ಗಡಿಗೆ ಬಹಳ ಹತ್ತಿರದಲ್ಲಿದೆ. ಇಲ್ಲಿನ ಜನರು ತಮ್ಮ ತಮ್ಮ ಪ್ರಕಾರವೇ ಮೊಮೊಸ್ ಖಾದ್ಯವನ್ನು ತಯಾರಿಸುತ್ತಾರೆ. ಸಾಂಪ್ರದಾಯಿಕವಾಗಿ, ಮೊಮೊವನ್ನು   ಕೀಮಾ, ಆಲೂಗಡ್ಡೆ ಹಾಕಿ ತಯಾರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ,  ಸ್ಟಫಿಂಗ್  ಹೆಚ್ಚು ವಿಸ್ತಾರವಾಗಿದೆ. ಜನರು ತಮಗೆ ಇಷ್ಟವಾಗುವ  ಸ್ಟಫಿಂಗ್ ಅನ್ನು ಬಳಸುತ್ತಾರೆ.  ಕೀಮಾ, ತರಕಾರಿಗಳು, ತೋಫು, ಅಣಬೆಗಳು, ಪನೀರ್ ಚೀಸ್, ಚಿಕನ್ ಅಥವಾ ಮಟನ್‌ನಿಂದ ತಯಾರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಖಾದ್ಯದ ಜನಪ್ರಿಯತೆ ಹೆಚ್ಚುತಿದೆ. ಯುವಕರು, ಮಕ್ಕಳು ಮೊಮೊಸ್ ಎಂದರೆ ಮುಗಿ ಬಿದ್ದು ತಿನ್ನುತ್ತಾರೆ. 

ಇದನ್ನೂ ಓದಿ : Health Benefits of Almonds: ಬಾದಾಮಿಯ ಅದ್ಭುತ ಆರೋಗ್ಯ ಪ್ರಯೋಜನಗಳು

ಅಧಿಕ ಪ್ರಮಾಣದಲ್ಲಿರುವ ಪ್ರೋಟೀನ್  :
ಮೊಮೊಸ್ ನಲ್ಲಿ 1.6 ಗ್ರಾಂ ಪ್ರೋಟೀನ್ , 9.6 ಗ್ರಾಂ ಕಾರ್ಬೋಹೈಡ್ರೇಟ್,   0.9 ಗ್ರಾಂ ಫೈಬರ್, ಮತ್ತು  2.4 ಗ್ರಾಂ. ಕೊಬ್ಬು ಇರುತ್ತದೆ. 

ಮೊಮೊಸ್ ತಿನ್ನುವುದರಿಂದ ಆಗುವ ಅನಾನುಕೂಲಗಳು ಇವು : 
ಮೊಮೊಸ್ ಫಾಸ್ಟ್ ಫುಡ್ ಇಷ್ಟಪಡುವವರ ಮೊದಲ ಆಯ್ಕೆಯಾಗಿದೆ. ಮೊಮೊಸ್ ತಯಾರಿಸಲು ಮೈದಾವನ್ನು ಬಳಸಲಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇದು ಮೇದೋಜೀರಕ ಗ್ರಂಥಿಗೆ ಹಾನಿಕಾರಕ, ಮಧುಮೇಹಕ್ಕೆ ಅಪಾಯ, ಮಾತ್ರವಲ್ಲ ಪೈಲ್ಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇದು ದೇಹದೊಳಗೆ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ.

ಗೋಪಾಲ್ ಗಂಜ್ ನಲ್ಲಿ ಮೊಮೊಸ್ ತಿಂದ ಯುವಕ ಸಾವು : 
ಬಿಹಾರದ ಗೋಪಾಲ್ ಗಂಜ್ ನಲ್ಲಿ ಮೊಮೊಸ್ ತಿನ್ನುವ ಸಂಬಂಧ ಸ್ನೇಹಿತರ ನಡುವೆ ಬೆಟ್ ಕಟ್ಟಲಾಗಿತ್ತು. ಯುವಕ ಇಲ್ಲಿ  150 ಮೊಮೊಗಳನ್ನು ತಿನ್ನಬೇಕಾಗಿತ್ತು.  ಹೀಗೆ ಯುವಕ ಮೊಮೊಸ್ ತಿನ್ನುತ್ತಲೇ ಪ್ರಜ್ಞೆತಪ್ಪಿ ರಸ್ತೆಯ ಮೇಲೆ ಬಿದ್ದಿದ್ದಾನೆ. ನಂತರ ಯುವಕನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಏನೂ ಪ್ರಯೋಜನವಾಗಲಿಲ್ಲ. ಅತಿಯಾದ ಮೈದಾದಿಂದ ಯುವಕನ ಗಂಟಲು ಕಟ್ಟಿ  ಉಸಿರುಕಟ್ಟಿ ಯುವಕ ಪ್ರಾಣ ಕಳೆದುಕೊಳ್ಳಬೇಕಾಯಿತು ಎನ್ನುವುದನ್ನು ವೈದ್ಯರು ತಿಳಿಸಿದ್ದಾರೆ.  ಒಂದು  ಮಿತಿಗಿಂತ ಹೆಚ್ಚು ಮೊಮೊಸ್ ತಿನ್ನುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಎನ್ನುವುದು ವೈದ್ಯರ ಅಭಿಪ್ರಾಯ ಕೂಡಾ. 

ಇದನ್ನೂ ಓದಿ : Orange: ಕಿತ್ತಳೆ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು

 

( ಸೂಚನೆ :  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News