ನೀವೂ ಸಹ ಪ್ರತಿ 5 ನಿಮಿಷಕ್ಕೊಮ್ಮೆ ಮೊಬೈಲ್ ನೋಡ್ತೀರಾ? ಹಾಗಿದ್ದರೆ ಎಚ್ಚರ!

ವಿಶ್ವದಲ್ಲೇ ಅತಿ ಕಡಿಮೆ ನಿದ್ರೆ ಮತ್ತು 74% ಬಳಕೆದಾರರು ಫೋನ್ ಅನ್ನು ಜೊತೆಯಲ್ಲೇ ಹಿಡಿದು ಮಲಗುತ್ತಾರೆ.

Last Updated : Sep 26, 2018, 04:00 PM IST
ನೀವೂ ಸಹ ಪ್ರತಿ 5 ನಿಮಿಷಕ್ಕೊಮ್ಮೆ ಮೊಬೈಲ್ ನೋಡ್ತೀರಾ? ಹಾಗಿದ್ದರೆ ಎಚ್ಚರ! title=

ನವದೆಹಲಿ: ಮೊಬೈಲ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬ ಅಭ್ಯಾಸವು ವಿಶ್ವದ ಅತಿದೊಡ್ಡ ಸಾಂಕ್ರಾಮಿಕ ರೋಗವಾಗಿದೆ ಎಂಬುದನ್ನು ತಿಳಿಯಲು ನಿಮಗೆ ಆಶ್ಚರ್ಯವಾಗುತ್ತದೆಯೇ? ಈ ರೋಗದ ಹೆಸರು ನೋಮೊಫೋಬಿಯಾ(NomoPhobia) ಅಂದರೆ ಮೊಬೈಲ್ ಫೋನ್ ಕೈಯಲ್ಲಿಲ್ಲದಿದ್ದರೆ ಏನೋ ಕಳೆದುಕೊಂಡಂತೆ ಇರುವುದು ಅಥವಾ ಫೋನ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬ ಮನಸ್ಥಿತಿ, ಯಾವುದೇ ಅನಿವಾರ್ಯ ಸಂದರ್ಭಗಳಲ್ಲಿ ಮೊಬೈಲ್ ಆಫ್ ಮಾಡಬೇಕಾಗಿ ಬಂದಲ್ಲಿ ಅಥವಾ ಮೊಬೈಲ್ ಚಾರ್ಜ್ ಖಾಲಿಯಾಗಿ ಮೊಬೈಲ್ ಸ್ವಿಚ್ ಆಫ್ ಆಗುವಂತಿದ್ದರೆ. ಇಲ್ಲವೇ ಸಿಗ್ನಲ್ ಸಿಗದೆ ಇರುವ ಜಾಗಗಳಿಗೆ ಹೋದಾಗ ನಿಮಗರಿಯದೆ ಆತಂಕ ಹೆಚ್ಚಾಗುವುದು ಇವುಗಳನ್ನು ನೋಮೋಫೋಬಿಯಾ ಎನ್ನುತ್ತಾರೆ.

ಹೌದು, ನೀವು ನಿರಂತರವಾಗಿ ನಿಮ್ಮ ಫೋನ್ನಲ್ಲಿ ಸಂದೇಶಗಳು ಮತ್ತು ನೋಟಿಫಿಕೇಶನ್ ಗಳನ್ನೂ ಪರಿಶೀಲಿಸುತ್ತೀರಿ. ಇಂಟರ್ನೆಟ್ ಸರಿಯಾಗಿ ಕನೆಕ್ಟ್ ಆಗದಿದ್ದರೆ ನೀವು ಸಿಟ್ಟಾಗುತ್ತೀರಿ ಎಂದಾದರೆ ನೀವೂ ಕೂಡಾ ನೋಮೋಫೋಬಿಯಾಕ್ಕೆ ಒಳಗಾಗಿದ್ದೀರಿ ಎನ್ನಬಹುದು. ವಿಶ್ವದಾದ್ಯಂತದ ಹೆಚ್ಚಿನ ಈ ನೋಮೋಫೋಬಿಯಾಕ್ಕೆ ಒಳಗಾಗಿದ್ದಾರೆ ಎಂಬುದು ಕಳವಳದ ವಿಷಯವಾಗಿದೆ. ನಾವು ಭಾರತೀಯರು ಪ್ರತಿ 4 ರಿಂದ 6 ನಿಮಿಷಗಳಿಗೊಮ್ಮೆ ಮೊಬೈಲ್ ಪರಿಶೀಲಿಸುತ್ತೇವೆ ಎಂದು ಸಂಶೋಧನೆಯೊಂದು ಬಹಿರಂಗ ಪಡಿಸಿದೆ. ವಿಶ್ವದಲ್ಲೇ ಅತಿ ಕಡಿಮೆ ನಿದ್ರೆ ಮತ್ತು 74% ಬಳಕೆದಾರರು ಫೋನ್ ಅನ್ನು ಜೊತೆಯಲ್ಲೇ ಹಿಡಿದು ಮಲಗುತ್ತಾರೆ ಎಂದು ಹೇಳಲಾಗಿದೆ. ಅಲ್ಲದೆ ದಿನಕ್ಕೆ 150 ಬಾರಿ ಫೋನ್ ಬಳಸುತ್ತಾರೆ ಎಂದೂ ಸಹ ಹೇಳಲಾಗಿದೆ.

ನಿಮ್ಮನ್ನೂ ಮೊಬೈಲ್ ಗೀಳು ಕಾಡುತ್ತಿದೆಯೇ? ನೀವು ಅದನ್ನು ತೊಡೆದುಹಾಕಲು ಬಯಸಿದರೆ ಗಾಬರಿಯಾಗಬೇಡಿ. ನೋಮೋಫೋಬಿಯಾಗೆ ಭಾರತೀಯರು ವೇಗವಾಗಿ ಬಲಿಯಾಗುತ್ತಿದ್ದಾರೆ. ಇದೊಂದು ಅನಾರೋಗ್ಯಕರ ಸಂಗತಿಯಾಗಿದ್ದು ಫೋನ್ ಇಲ್ಲದೆ ಚಡಪಡಿಸುವುದು ನಿಜವಾಗಿಯೂ ಆತಂಕಕಾರಿ ವಿಷಯವಾಗಿದೆ. 

ದೆಹಲಿಯ ಬೀದಿಗಳಲ್ಲಿ ನೊಮೊ ಫೋಬಿಯಾದ ಸಂತ್ರಸ್ತರನ್ನು ಗುರುತಿಸಲು ಝೀ ನ್ಯೂಸ್ ಪ್ರಯತ್ನಿಸಿದಾಗ, ಹೆಚ್ಚಿನ ಜನರು ನೊಮೊ ಫೋಬಿಯಾದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ದುರದೃಷ್ಟಕರ ಸಂಗತಿಯೆಂದರೆ ತಾವು ನೋಮೋಫೋಬಿಯಾಗೆ ಒಳಗಾಗಿರುವುದು ಅವರಿಗೇ ತಿಳಿದಿಲ್ಲ. ನಾವು ದೆಹಲಿಯ ಖಾತ್ರಿ ಕುಟುಂಬದೊಂದಿಗೆ ಮಾತನಾಡಿದ್ದೇವೆ. ಕುಟುಂಬದಲ್ಲಿ ಪೋಷಕರು ಮತ್ತು ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ನಾಲ್ವರು ಸದಸ್ಯರಿದ್ದಾರೆ. ಆದರೆ ಅವರೆಲ್ಲರೂ ನಾಮೋಫೋಬಿಯಾಗೆ ಹತ್ತಿರದಲ್ಲಿದ್ದಾರೆ. ಚಿಕ್ಕವರಿಂದ ಹಿಡಿದು ದೊಡ್ಡವರೆಗಿನ ಎಲ್ಲರಿಗೂ ಮೊಬೈಲ್ ಫೋನ್ಗಳು ಗೀಳು ರೂಢಿಯಲ್ಲಿವೆ ಎಂಬುದನ್ನು ಕುಟುಂಬದ ಸದಸ್ಯರು ಸ್ವತಃ ಒಪ್ಪುತ್ತಾರೆ.

ವಿಜ್ಞಾನಿಗಳ ಪ್ರಕಾರ, ದೀರ್ಘಕಾಲದವರೆಗೆ ಪರದೆಯನ್ನು(ಮೊಬೈಲ್ ಸ್ಕ್ರೀನ್) ನೋಡುವುದರಿಂದ ಮಾನವ ಮೆದುಳಿನ ಮುಂಭಾಗದ ಹಾಲೆ(Front lobe) ಮೇಲೆ ಪರಿಣಾಮ ಬೀರುತ್ತದೆ. ಮುಂಭಾಗದ ಹಾಲೆಯ ಮೋಟರ್ ಏವಿಯೇಷನ್ ಕಾರ್ಯ, ಭಾಷೆ, ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಾಮಾಜಿಕ ನಡವಳಿಕೆಯ ಮೇಲೆ ಇದರ ಪರಿಣಾಮ ಬೀರುತ್ತದೆ.

ನಿಮಗಿದಿಯೇ ನೋಮೋಫೋಬಿಯ..? ಎಚ್ಚರ

Trending News