Is it safe to drink tea and coffee : ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು, ICMR (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್) ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಚಹಾ ಮತ್ತು ಕಾಫಿಯನ್ನು ಸೇವಿಸುವ ಜನರಿಗೆ ಈ ಮಾರ್ಗಸೂಚಿ ಬಹಳ ಮುಖ್ಯವಾಗಿದೆ.ಏಕೆಂದರೆ ಕೆಫೀನ್‌ನ ಅತಿಯಾದ ಸೇವನೆಯು ಅನೇಕ ಆರೋಗ್ಯ ಅಪಾಯಗಳಿಗೆ ಕಾರಣವಾಗುತ್ತದೆ.
ICMR ಸಂಶೋಧಕರ ಪ್ರಕಾರ, ಚಹಾ ಮತ್ತು ಕಾಫಿಯಲ್ಲಿ ಕೆಫೀನ್ ಇರುತ್ತದೆ. ಇದು ಕೇಂದ್ರ ನರಮಂಡಲವನ್ನು ಉತ್ತೇಜಿಸುವ ಸಂಯುಕ್ತವಾಗಿದೆ. ಆದರೆ ಮಾರ್ಗಸೂಚಿಗಳ ಪ್ರಕಾರ ಹಾಲು ಹಾಕದ ಚಹಾ ಅಂದರೆ ಬ್ಲಾಕ್ ಟೀ ಕುಡಿಯುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳಲಾಗಿದೆ. ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಪರಿಧಮನಿಯ ಕಾಯಿಲೆ ಮತ್ತು ಹೊಟ್ಟೆಯ ಕ್ಯಾನ್ಸರ್ ನಂಥಹ ಅಪಾಯವನ್ನು ಕಡಿಮೆ ಮಾಡುತ್ತದೆ.ಆದರೆ ಅದನ್ನು ಸರಿಯಾದ ಪ್ರಮಾಣದಲ್ಲಿ,ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಈ ಪ್ರಯೋಜನಗಳು ನಿಮ್ಮ ದೇಹಕ್ಕೆ ಸಿಗುತ್ತವೆ.
ಇದನ್ನೂ ಓದಿ : ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಿದೆ ಆರು ಅದ್ಭುತ ಲಾಭ
ಯಾವಾಗ ಚಹಾ ಮತ್ತು ಕಾಫಿ ಕುಡಿಯಬೇಕು? :
ವೈದ್ಯಕೀಯ ಸಂಸ್ಥೆ ICMR ಊಟಕ್ಕೆ 1 ಗಂಟೆ ಮೊದಲು ಮತ್ತು 1 ಗಂಟೆ ನಂತರ ಚಹಾ-ಕಾಫಿ ಕುಡಿಯಬೇಕು ಎಂದು ಶಿಫಾರಸು ಮಾಡುತ್ತದೆ.ಈ ಪಾನೀಯಗಳಲ್ಲಿ ಟ್ಯಾನಿನ್ ಇರುವುದೇ ಇದಕ್ಜ್ಕೆ ಕಾರಣ. ಇದು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.ಇದು ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ. ಇದಲ್ಲದೆ ಅತಿಯಾದ ಕಾಫಿ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಎಷ್ಟು ಚಹಾ ಮತ್ತು ಕಾಫಿ ಸೇವಿಸಬೇಕು? :
ICMR ದೈನಂದಿನ ಕೆಫೀನ್ ಸೇವನೆಯ ಮಿತಿಯನ್ನು 300 ಮಿಗ್ರಾಂ ಎಂದು ಶಿಫಾರಸು ಮಾಡುತ್ತದೆ.150 ಮಿಲಿ ಕಪ್ ಕುದಿಸಿದ ಕಾಫಿಯಲ್ಲಿ 80 ರಿಂದ 120 ಮಿಗ್ರಾಂ ಕೆಫೀನ್ ಇರುತ್ತದೆ. ಆದರೆ ಇನ್ಸ್ಟಂಟ್ ಕಾಫಿ 50 ರಿಂದ 65 ಮಿಗ್ರಾಂ ಅನ್ನು ಹೊಂದಿರುತ್ತದೆ. ಚಹಾವು ಪ್ರತಿ ಕಪ್ ನಲ್ಲಿ ಸುಮಾರು 30 ರಿಂದ 65 ಮಿಲಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ.
ಇದನ್ನೂ ಓದಿ : Video :ಒಂದೇ ಸೆಕೆಂಡಿನಲ್ಲಿ ಕಲ್ಲಂಗಡಿ ಹಣ್ಣಿನ ಎಲ್ಲಾ ಬೀಜಗಳನ್ನು ಬೇರ್ಪಡಿಸುವ ಸುಲಭ ವಿಧಾನ !ನೀವೂ ಟ್ರೈ ಮಾಡಿ ಈ ಸಿಂಪಲ್ ಟ್ರಿಕ್
ಊಟ ಮಾಡುವಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ :
ಚಹಾ ಮತ್ತು ಕಾಫಿ ಸೇವನೆಯನ್ನು ನಿಯಂತ್ರಿಸುವುದರ ಹೊರತಾಗಿ, ICMR ತೈಲ, ಸಕ್ಕರೆ ಮತ್ತು ಉಪ್ಪಿನ ಸೇವನೆಯನ್ನು ಕೂಡಾ ಮಿತಿಗೊಳಿಸುವಂತೆ ಸೂಚಿಸಿದೆ. ಆಹಾರದಲ್ಲಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಮಾಂಸ ಮತ್ತು ಸಮುದ್ರ ಆಹಾರಗಳನ್ನು ಸೇರಿಸಲು ಸಲಹೆ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ