Pneumonia: ನ್ಯುಮೋನಿಯಾದ ಪ್ರಾರಂಭಿಕ ಸೂಚನೆಗಳನ್ನು ಗುರುತಿಸುವುದು ಹೇಗೆ..?

Pneumonia Symptoms: ವಯಸ್ಕರಲ್ಲಿ ನ್ಯುಮೋನಿಯಾದ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಶೀತ, ಉಸಿರಾಟದ ತೊಂದರೆ, ಉಸಿರಾಟದ ಸಮಯದಲ್ಲಿ ಎದೆನೋವು, ಹೃದಯ ಬಡಿತ ಏರಿಕೆ ಮತ್ತು ವೇಗಯುತ ಉಸಿರಾಟ, ವಾಕರಿಕೆ, ವಾಂತಿ, ಅತಿಸಾರ ಮತ್ತು ಕೆಮ್ಮು, ಹಸಿರು ಅಥವಾ ಹಳದಿ ಬಣ್ಣದ ಕಫ. ಆದಾಗ್ಯೂ ಮಕ್ಕಳು ಡಿಹೈಡ್ರೇಷನ್‌, ಉಸಿರಾಟದ ತೊಂದರೆ, ಸರಿಯಾಗಿ ಆಹಾರ ಸೇವಿಸದಿರುವುದು, ಕೆಮ್ಮು, ಜ್ವರ, ಕಿರಿಕಿರಿ ಮತ್ತು ಕೆಮ್ಮಿನ ನಂತರ ವಾಂತಿ ಮಾಡುವಂತಹ ವಿಭಿನ್ನ ಲಕ್ಷಣಗಳನ್ನು ಹೊಂದಿರಬಹುದು.

Written by - Zee Kannada News Desk | Last Updated : Jun 21, 2023, 02:13 PM IST
  • ನ್ಯುಮೋನಿಯಾವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಉಂಟಾಗುವ ಶ್ವಾಸಕೋಶದ ಸೋಂಕಾಗಿದೆ
  • ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾವು ಈ ಕಾಯಿಲೆಗೆ ಕಾರಣವಾಗುವ ಅತ್ಯಂತ ಸಾಮಾನ್ಯ ಬ್ಯಾಕ್ಟೀರಿಯಾ
  • ಜಾಗತಿಕ ನ್ಯುಮೋನಿಯಾ ಬಾಧಿತರಲ್ಲಿ ಭಾರತವು ಶೇ.23ರಷ್ಟು ಪಾಲು ಹೊಂದಿದೆ
Pneumonia: ನ್ಯುಮೋನಿಯಾದ ಪ್ರಾರಂಭಿಕ ಸೂಚನೆಗಳನ್ನು ಗುರುತಿಸುವುದು ಹೇಗೆ..? title=
ನ್ಯುಮೋನಿಯಾ ಕಾಯಿಲೆಯ ಲಕ್ಷಣಗಳು

ಬೆಂಗಳೂರು: ನ್ಯುಮೋನಿಯಾ ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಉಂಟಾಗುವ ಶ್ವಾಸಕೋಶದ ಸೋಂಕಾಗಿದೆ. ನ್ಯುಮೋನಿಯಾಕ್ಕೆ ಕಾರಣವಾಗುವ ಅತ್ಯಂತ ಸಾಮಾನ್ಯವಾದ ಬ್ಯಾಕ್ಟೀರಿಯಾ ವಿಧವೆಂದರೆ ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ. ಈ ವೈರಸ್‌ನಿಂದ ಬರುವ ಫ್ಲೂ ಅಥವಾ ಇನ್ಫ್ಲುಯೆಂಜಾ(ಜ್ವರ) ನ್ಯುಮೋನಿಯಾಕ್ಕೆ ಸಾಮಾನ್ಯ ಕಾರಣವಾಗಿದೆ. ವಿಶ್ವದಾದ್ಯಂತ ಅಂದಾಜು ವರ್ಷಕ್ಕೆ 1000 ವ್ಯಕ್ತಿಗಳಲ್ಲಿ 1.5 ರಿಂದ 14 ನ್ಯುಮೋನಿಯಾ ಪ್ರಕರಣಗಳು ದಾಖಲಾಗುತ್ತವೆ. ಜಾಗತಿಕ ನ್ಯುಮೋನಿಯಾ ಬಾಧಿತರಲ್ಲಿ ಭಾರತವು ಶೇ.23ರಷ್ಟು ಪಾಲು ಹೊಂದಿದೆ ಮತ್ತು ಇದರಿಂದ ಸಂಭವಿಸುವ ಸಾವಿನ ಪ್ರಮಾಣವು ಶೇ.14 ರಿಂದ 30ರಷ್ಟಿದೆ.

ವಯಸ್ಕರಲ್ಲಿ ನ್ಯುಮೋನಿಯಾದ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಶೀತ, ಉಸಿರಾಟದ ತೊಂದರೆ, ಉಸಿರಾಟದ ಸಮಯದಲ್ಲಿ ಎದೆನೋವು, ಹೃದಯ ಬಡಿತ ಏರಿಕೆ ಮತ್ತು ವೇಗಯುತ ಉಸಿರಾಟ, ವಾಕರಿಕೆ, ವಾಂತಿ, ಅತಿಸಾರ ಮತ್ತು ಕೆಮ್ಮು, ಹಸಿರು ಅಥವಾ ಹಳದಿ ಬಣ್ಣದ ಕಫ. ಆದಾಗ್ಯೂ ಮಕ್ಕಳು ಡಿಹೈಡ್ರೇಷನ್‌, ಉಸಿರಾಟದ ತೊಂದರೆ, ಸರಿಯಾಗಿ ಆಹಾರ ಸೇವಿಸದಿರುವುದು, ಕೆಮ್ಮು, ಜ್ವರ, ಕಿರಿಕಿರಿ ಮತ್ತು ಕೆಮ್ಮಿನ ನಂತರ ವಾಂತಿ ಮಾಡುವಂತಹ ವಿಭಿನ್ನ ಲಕ್ಷಣಗಳನ್ನು ಹೊಂದಿರಬಹುದು.

ನ್ಯುಮೋನಿಯಾ ಸೌಮ್ಯವಾದ ಸಮಸ್ಯೆ ಅನ್ನಿಸಬಹುದು. ಆದರೆ ತ್ವರಿತವಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ತುಂಬಾ ಗಂಭೀರವಾದ ಅಪಾಯವಾಗಿದೆ. ಹೀಗಾಗಿ ಕೆಳಗಿನ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ:

ಇದನ್ನೂ ಓದಿ: Covid-19 ವ್ಯಾಕ್ಸಿನ್ ಕಾರಣ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆಯೇ? ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು?

1) ಕಫದೊಂದಿಗೆ ಜ್ವರ ಮತ್ತು ಕೆಮ್ಮು ಸ್ವಲ್ಪ ಸಮಯದಲ್ಲಿ ವಾಸಿಯಾಗದಿದ್ದರೆ ಅಥವಾ ಉಲ್ಬಣಗೊಂಡರೆ.

2) ದಿನನಿತ್ಯದ ಕೆಲಸಗಳನ್ನು ಮಾಡುವಾಗ ಅಥವಾ ವಿಶ್ರಾಂತಿ ಪಡೆಯುವಾಗ ನೀವು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದರೆ.

3) ನೀವು ಉಸಿರಾಡುವಾಗ ನಿಮಗೆ ಎದೆನೋವು ಕಾಣಿಸಿಕೊಂಡರೆ

4)  ಶೀತ ಅಥವಾ ಜ್ವರದಿಂದ ಗುಣಮುಖರಾದ ಬಳಿಕ ನಿಮ್ಮ ಆರೋಗ್ಯ ಸ್ಥಿತಿಯು ಇದ್ದಕ್ಕಿದ್ದಂತೆಯೇ ಹದಗೆಟ್ಟರೆ

5) ನಿಮ್ಮ ಇಮ್ಯುನಿಟಿ ದುರ್ಬಲವಾಗಿದ್ದರೆ, ಅಂಗಾಂಗ ಕಸಿ ಅಥವಾ ಮೂಳೆ(ಮೂಳೆಮಜ್ಜೆ) ಕಸಿಗೆ ಒಳಗಾಗಿದ್ದರೆ ಅಥವಾ ನೀವು ರೋಗ ನಿರೋಧಕ ವ್ಯವಸ್ಥೆಯನ್ನು ನಿಗ್ರಹಿಸುವ ಔಷಧಿ ತೆಗೆದುಕೊಳ್ಳುತ್ತಿದ್ದರೆ

6) ನೀವು ಈಗಾಗಲೇ ಹೃದಯ ಸಮಸ್ಯೆ, ಮಧುಮೇಹ, ಅಥವಾ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಂತಹ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ.

7) ನೀವು ಚಿಕ್ಕಮಗು ಅಥವಾ 65 ವರ್ಷ ವಯಸ್ಸಿನ ಮೇಲ್ಪಟ್ಟವರಾಗಿದ್ದರೆ

8) ವಿಶೇಷವಾಗಿ ವಯಸ್ಸಾದವರಲ್ಲಿ ಉಸಿರಾಟದ ರೋಗ ಲಕ್ಷಣಗಳೊಂದಿಗೆ ಇತರ ಆರೋಗ್ಯ ಗೊಂದಲಗಳಿದ್ದರೆ.

ರೋಗನಿರ್ಣಯ: ನ್ಯುಮೋನಿಯಾವನ್ನು ಸಾಮಾನ್ಯವಾಗಿ ವೈದ್ಯಕೀಯ ಇತಿಹಾಸ ಮತ್ತು ದೈಹಿಕ ಪರೀಕ್ಷೆ ಮತ್ತು ಎದೆಯ ಎಕ್ಸ್-ರೇ ಮೂಲಕ ಪತ್ತೆ ಮಾಡಲಾಗುತ್ತದೆ. ರಕ್ತ ಪರೀಕ್ಷೆಗಳು, ಕಫ ಪರೀಕ್ಷೆ, ರೋಗಿಗಳ ಕೆಲವು ಉಪವಿಭಾಗಗಳಲ್ಲಿ CT ಸ್ಕ್ಯಾನ್ ಮತ್ತು ಬ್ರಾಂಕೋಸ್ಕೋಪಿ ಅಗತ್ಯವಿದೆ.

ಚಿಕಿತ್ಸೆ: ಆರಂಭದಲ್ಲಿ ಸಮುದಾಯ ನ್ಯುಮೋನಿಯಾ ಹೊಂದಿರುವ ರೋಗಿಗಳಿಗೆ ರೋಗಕ್ಕೆ ಕಾರಣವಾಗಿರುವ ಜೀವಿಗಳ ಪ್ರಕಾರವನ್ನು ಆಧರಿಸಿ ಬಾಯಿಯಿಂದ ಸೇವಿಸುವ ಆಂಟಿಬಯೋಟಿಕ್‌ಗಳ ಮೂಲಕ ಮನೆಯಲ್ಲಿ ಚಿಕಿತ್ಸೆ ನೀಡುತ್ತಾರೆ.

ಸಮಸ್ಯೆ ಗಂಭೀರವಾಗಿದ್ದರೆ ಹೃದಯ ಬಡಿತ, ಉಸಿರಾಟದ ಏರಿಳಿತ, ದೇಹದ ತಾಪಮಾನ ಮತ್ತು ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಆಸ್ಪತ್ರೆಗೆ ದಾಖಲಿಸಬಹುದು. ಆಸ್ಪತ್ರೆಗೆ ದಾಖಲಾದವರಿಗೆ ಸಾಮಾನ್ಯವಾಗಿ ಇಂಟ್ರಾವೆನಸ್ ಆಂಟಿಬಯೋಟಿಕ್‌ಗಳನ್ನು ನೀಡಲಾಗುತ್ತದೆ. ಹೆಚ್ಚಿನವರು 3-5 ದಿನಗಳ ಪ್ರತಿಜೀವಕ ಚಿಕಿತ್ಸೆಯ ನಂತರ ಸುಧಾರಿಸಲು ಪ್ರಾರಂಭಿಸುತ್ತಾರೆ. ಆದರೆ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ 3 ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿವರೆಗೆ ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ಸಾಧ್ಯವಾಗದಿರಬಹುದು.

ತಡೆಗಟ್ಟುವಿಕೆ: ನ್ಯುಮೋನಿಯಾ ಮತ್ತು ಅದರ ಸಂಬಂಧಿತ ತೊಂದರೆಗಳನ್ನು ತಡೆಗಟ್ಟಲು ಲಸಿಕೆ ಒಂದು ಪ್ರಮುಖ ಮಾರ್ಗವಾಗಿದೆ. ನ್ಯುಮೋಕೊಕಲ್ ಲಸಿಕೆ ಮತ್ತು ಇನ್ಫ್ಲುಯೆಂಜಾ ಅಥವಾ ಫ್ಲೂ ಲಸಿಕೆಗಳು ಎಲ್ಲರಿಗೂ ಕೈಗೆಟಕುವ, ಸಾಮಾನ್ಯವಾಗಿ ಲಭ್ಯವಿರುವ ಲಸಿಕೆಗಳಾಗಿವೆ. ನ್ಯುಮೋನಿಯಾವನ್ನು ತಡೆಗಟ್ಟಲು ಧೂಮಪಾನ ತ್ಯಜಿಸುವುದು ಒಂದುಪ್ರ ಮುಖಹಂತವಾಗಿದೆ. ಸೋಪಿನ ನೀರಿನಿಂದ ಅಗಾಗ್ಗೆ ಕೈತೊಳೆಯುವುದು ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ರಬ್‌ಗಳಂತಹ ಸೋಂಕು ನಿಯಂತ್ರಣ ಅಭ್ಯಾಸಗಳು ತುಂಬಾ ಪರಿಣಾಮಕಾರಿಯಾಗಿರುತ್ತವೆ.

ನ್ಯುಮೋನಿಯಾ ರೋಗ ಲಕ್ಷಣಗಳನ್ನು ಹೊಂದಿರುವವರು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು, ಅವರು ಬಳಸಿದ ಟಿಶ್ಯೂಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು ಮತ್ತು ಆಗಾಗ್ಗೆ ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿರುವುದರಿಂದ ಬೇರೆಯರಿಗೆ ಸೋಂಕು ತಗುಲದಂತೆ ಎಚ್ಚರಿಕೆವಹಿಸಬೇಕು.

ಇದನ್ನೂ ಓದಿ: Effects of momos: ನೀವು ಮೊಮೊಸ್‌ ಪ್ರಿಯರೇ... ಹಾಗಿದ್ರೆ ಮಿಸ್‌ ಮಾಡ್ದೆ ಈ ಸ್ಟೋರಿ ಓದಿ...! 

ಮಹತ್ವ: ಪ್ರತಿವರ್ಷ ನವೆಂಬರ್ 12 ರಂದು ವಿಶ್ವ ನ್ಯುಮೋನಿಯಾ ದಿನವನ್ನುಆಚರಿಸಲಾಗುತ್ತದೆ. ನ್ಯುಮೋನಿಯಾದಿಂದ ಉಂಟಾಗುವ ಪರಿಣಾಮಗಳು ಮತ್ತು ಕಾಳಜಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು 2009ರಿಂದ ಈ ದಿನಾಚರಣೆ ಅಸ್ತಿತ್ವ ಪಡೆದಿದೆ. 5 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿಇದೊಂದು ಗಂಭೀರವಾದ ಸಮಸ್ಯೆಯಾಗಿದೆ. ಪ್ರತಿವರ್ಷ ಒಂದು ನಿರ್ದಿಷ್ಟ ಧ್ಯೇಯದೊಂದಿಗೆ ವಿಶ್ವ ನ್ಯುಮೋನಿಯಾ ದಿನ ಆಚರಿಸಲಾಗುತ್ತದೆ. 2022ರಲ್ಲಿ ನ್ಯುಮೋನಿಯಾ ವಿರುದ್ಧದ ಹೋರಾಟವನ್ನು ‘ಚಾಂಪಿಯನ್ ಮಾಡುವುದು’ ಎಂಬ ಧ್ಯೇಯದೊಂದಿಗೆ ಆಚರಿಸಲಾಯಿತು. ಪ್ರಪಂಚದಾದ್ಯಂತ 155 ದಶಲಕ್ಷ ಮಕ್ಕಳ ಮೇಲೆ ಪರಿಣಾಮ ಬೀರಿರುವ ರೋಗದ ವಿರುದ್ಧದ ಹೋರಾಟದಲ್ಲಿ ಜಗತ್ತು ಇನ್ನೂ ಮುನ್ನಡೆಯುತ್ತಿದೆ ಎಂಬುದನ್ನು ಈ ಥಿಮ್ ಸೂಚಿಸುತ್ತದೆ.

-ಡಾ. ಸುನಿಲ್ಬೋಹ್ರಾ, ಆಂತರಿಕ ಔಷಧ ವಿಭಾಗದ ಹಿರಿಯ ಸಲಹೆಗಾರರು, ಫೋರ್ಟಿಸ್ ಆಸ್ಪತ್ರೆ, ರಿಚ್ಮಂಡ್ ರಸ್ತೆ, ಬೆಂಗಳೂರು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News