ರಸ್ಕ್ ತಿನ್ನುವ ಮುನ್ನ ಎಚ್ಚರ.! ದಿನಕ್ಕೆ ಎರಡೇ ಎರಡು ರಸ್ಕ್ ತಿಂದರೂ ಎದುರಾಗುವುದು ಈ ಸಮಸ್ಯೆ

ರಸ್ಕ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ರಸ್ಕ್ ತಿನ್ನುವುದರಿಂದ ಆರೋಗ್ಯಕ್ಕೆ ಯಾವ ರೀತಿ ಸಮಸ್ಯೆ ಅಥವಾ ಹಾನಿಯಾಗುವುದು ಎನ್ನುವ ಪ್ರಶ್ನೆ ಕೂಡಾ ಇಲ್ಲಿ ಏಳುತ್ತದೆ. ಆದರೆ ಅದಕ್ಕೆ ಉತ್ತರವೂ ಇದೆ. 

Written by - Ranjitha R K | Last Updated : Jan 6, 2023, 04:33 PM IST
  • ಖಾಲಿ ಹೊಟ್ಟೆಯಲ್ಲಿ ಚಹಾದೊಂದಿಗೆ ರಸ್ಕ್ ತಿನ್ನಬಾರದು
  • ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ರಸ್ಕ್
  • ಚಹಾದೊಂದಿಗೆ ರಸ್ಕ್ ತಿನ್ನುವ ಅನಾನುಕೂಲಗಳನ್ನು ತಿಳಿಯಿರಿ
ರಸ್ಕ್ ತಿನ್ನುವ ಮುನ್ನ ಎಚ್ಚರ.! ದಿನಕ್ಕೆ ಎರಡೇ ಎರಡು ರಸ್ಕ್ ತಿಂದರೂ ಎದುರಾಗುವುದು ಈ ಸಮಸ್ಯೆ  title=

ಬೆಂಗಳೂರು : ಹೆಚ್ಚಿನ ಜನರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾದೊಂದಿಗೆ ರಸ್ಕ್ ತಿನ್ನುವ ಅಭ್ಯಾಸವಿರುತ್ತದೆ. ಇನ್ನು ಅನೇಕರಿಗೆ ಹಾಗೆಯೇ ರಸ್ಕ್ ತಿನ್ನುವ ಅಭ್ಯಾಸವೂ ಇರುತ್ತದೆ. ಹಾಗಾಗಿ ಆಗಾಗ ರಸ್ಕ್ ತಿನ್ನುತ್ತಲೇ ಇರುತ್ತಾರೆ. ಆದರೆ ರಸ್ಕ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಲ್ಲಿ, ರಸ್ಕ್ ತಿನ್ನುವುದರಿಂದ ಆರೋಗ್ಯಕ್ಕೆ ಯಾವ ರೀತಿ ಸಮಸ್ಯೆ ಅಥವಾ ಹಾನಿಯಾಗುವುದು ಎನ್ನುವ ಪ್ರಶ್ನೆ ಕೂಡಾ ಏಳುತ್ತದೆ. ಆದರೆ ಅದಕ್ಕೆ ಉತ್ತರವೂ ಇದೆ. ರಸ್ಕ್ ಅನ್ನು ರಿಫೈನ್ಡ್ ಹಿಟ್ಟಿನಲ್ಲಿ ತಯಾರಿಸಲಾಗುತ್ತದೆ. ಈ ಹಿಟ್ಟಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ. ಮಾತ್ರವಲ್ಲ ಇದನ್ನು ತಯಾರಿಸಲು ರಿಫೈನ್ಡ್ ಎಣ್ಣೆಯನ್ನೇ ಬಳಸಲಾಗುತ್ತದೆ. ಇದ್ಯಾವುದೂ ಕೂಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. 

ರಸ್ಕ್‌ನಲ್ಲಿ ಇರುವ ಪದಾರ್ಥಗಳು:
ಸಂಸ್ಕರಿಸಿದ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟನ್ನು ರಸ್ಕ್‌ನಲ್ಲಿ ಬಳಸಲಾಗುತ್ತದೆ. ಇದರೊಂದಿಗೆ ರಿಫೈನ್ಡ್ ಎಣ್ಣೆ, ಆರ್ಟಿಫಿಶಿಯಲ್ ಫ್ಲೇವರ್, ಪ್ರಿಸರ್ವೆಟಿವ್ಸ್ ಇತ್ಯಾದಿಗಳನ್ನು ಸೇರಿಸಲಾಗುತ್ತದೆ. ಇವೆಲ್ಲವೂ ಆರೋಗ್ಯವನ್ನು ಕೆಡಿಸುತ್ತವೆ. ಕೇವಲ ಎರಡು ರಸ್ಕ್ ತಿನ್ನುವುದರಿಂದ ಕೂಡಾ ನೀವು ಸ್ಥೂಲಕಾಯತೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ : Fruits For High BP: ಹೈ ಬಿಪಿ ನಿಯಂತ್ರಿಸಲು ಇಂದಿನಿಂದ ಈ ಹಣ್ಣುಗಳನ್ನು ಮಿಸ್ ಮಾಡದೇ ಸೇವಿಸಿ

ಚಹಾದೊಂದಿಗೆ ರಸ್ಕ್ ತಿನ್ನುವ ಅನಾನುಕೂಲಗಳು-: 
ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ :
ಚಹಾದೊಂದಿಗೆ ರಸ್ಕ್ ತಿನ್ನುವುದರಿಂದ ಹೃದಯದ ಆರೋಗ್ಯಕ್ಕೆ ಹಾನಿಕಾರಕ. ಇದು ಎಲ್ಲಾ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. 

ಕರುಳನ್ನು ಹಾನಿಗೊಳಿಸುತ್ತದೆ : ಚಹಾದೊಂದಿಗೆ  ರಸ್ಕ್ ಅನ್ನು ಸೇವಿಸುವುದರಿಂದ ಅಲ್ಸರ್ ಸಮಸ್ಯೆ ಕಾಣಿಸಬಹುದು. ಇದು ಗ್ಯಾಸ್, ಕಳಪೆ ಜೀರ್ಣಕ್ರಿಯೆ ಸೇರಿದಂತೆ ಉದರದ ಸಮಸ್ಯೆಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ : Health Tisp: ಚಿಕ್ಕ ವಯಸ್ಸಿನವರಲ್ಲೂ ಅಧಿಕ ಕೊಲೆಸ್ಟ್ರಾಲ್ ಅಪಾಯ, ಈ ಲಕ್ಷಣ ನಿರ್ಲಕ್ಷಿಸಬೇಡಿ

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News