Fruits For High BP: ಹೈ ಬಿಪಿ ನಿಯಂತ್ರಿಸಲು ಇಂದಿನಿಂದ ಈ ಹಣ್ಣುಗಳನ್ನು ಮಿಸ್ ಮಾಡದೇ ಸೇವಿಸಿ

High BP Controlling Fruits: ಪ್ರಸ್ತುತ ಕಳಪೆ ಜೀವನಶೈಲಿಯಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೂ ಜನರು ಬಿಪಿ, ಶುಗರ್ ಸಮಸ್ಯೆಗೆ ಒಳಗಾಗುತ್ತಾರೆ. ಅದರಲ್ಲೂ, ಈ ಒತ್ತಡದ ಜೀವನದಲ್ಲಿ ಹೈ ಬಿಪಿ ಸರ್ವೇ ಸಾಮಾನ್ಯವಾಗಿದೆ. ಆದರೆ, ನಿತ್ಯ ಕೆಲವು ಹಣ್ಣುಗಳನ್ನು ಸೇವಿಸುವ ಮೂಲಕ ನೀವು ಈ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

Written by - Yashaswini V | Last Updated : Jan 6, 2023, 02:27 PM IST
  • ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
  • ಆದರೆ, ಹೈ ಬಿಪಿಯನ್ನು ನಿಯಂತ್ರಿಸದಿದ್ದರೆ ಅದು ಹೃದ್ರೋಗ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಇತರ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
  • ಹಾಗಾಗಿ ಹೈ ಬಿಪಿ ನಿಯಂತ್ರಣ ಅತ್ಯಗತ್ಯ
Fruits For High BP: ಹೈ ಬಿಪಿ ನಿಯಂತ್ರಿಸಲು ಇಂದಿನಿಂದ ಈ ಹಣ್ಣುಗಳನ್ನು ಮಿಸ್ ಮಾಡದೇ ಸೇವಿಸಿ  title=
High BP Controlling Fruits

Fruits For High BP: ಬದಲಾದ, ಒತ್ತಡಭರಿತ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದರೆ, ಹೈ ಬಿಪಿಯನ್ನು ನಿಯಂತ್ರಿಸದಿದ್ದರೆ ಅದು ಹೃದ್ರೋಗ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಇತರ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಹೈ ಬಿಪಿ ನಿಯಂತ್ರಣ ಅತ್ಯಗತ್ಯ. ನಿತ್ಯ ಕೆಲವು ಹಣ್ಣುಗಳನ್ನು ಸೇವಿಸುವ ಮೂಲಕ ನೀವು ಈ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

ಹೈ ಬಿಪಿ ನಿಯಂತ್ರಿಸಲು ಇಂದಿನಿಂದ ಈ ಹಣ್ಣುಗಳನ್ನು ಮಿಸ್ ಮಾಡದೇ ಸೇವಿಸಿ:
ಕಲ್ಲಂಗಡಿ:

ಆರೋಗ್ಯ ತಜ್ಞರ ಪ್ರಕಾರ, ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ವಾಸ್ತವವಾಗಿ, ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲಿನ್ ಎಂಬ ಅಮೈನೋ ಆಮ್ಲ ಕಂಡು ಬರುತ್ತದೆ. ನಮ್ಮ ದೇಹವು ಸಿಟ್ರುಲಿನ್ ಅನ್ನು ಅರ್ಜಿನೈನ್ ಆಗಿ ಪರಿವರ್ತಿಸುತ್ತದೆ. ಇದು ದೇಹದಲ್ಲಿ ನೈಟ್ರಿಕ್ ಶಕ್ತಿಯ ಉತ್ಪಾದನೆಗೆ ಸಹಾಯಕವಾಗಿದೆ.

ಬಾಳೆಹಣ್ಣು:
ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿ ಕಂಡು ಬರುತ್ತದೆ. ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಸುಮಾರು 422 ಮಿಗ್ರಾಂ ಪೊಟ್ಯಾಸಿಯಮ್ ಕಂಡುಬರುತ್ತದೆ. ಹಾಗಾಗಿ, ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ದೂರವಿಡುವಲ್ಲಿ ಬಾಳೆಹಣ್ಣು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.  

ಇದನ್ನೂ ಓದಿ- Peanuts Benefits: ಗೋಡಂಬಿ-ಬಾದಾಮಿ ತಿಂದಷ್ಟೇ ಪ್ರಯೋಜನ ನೀಡುತ್ತೆ ಕಡಲೆಬೀಜ

ಡಾರ್ಕ್ ಚಾಕೊಲೇಟ್: 
ಡಾರ್ಕ್ ಚಾಕೊಲೇಟ್ ರುಚಿ ಕಹಿ ಆಗಿರುವುದರಿಂದ ಇದು ತಿನ್ನಲು ಅಷ್ಟು ರುಚಿಕರ ಎನಿಸುವುದಿಲ್ಲ. ಆದರೆ, ಡಾರ್ಕ್ ಚಾಕೊಲೇಟ್‌ನಲ್ಲಿರುವ ಕೋಕೋದಲ್ಲಿ ಉತ್ಕರ್ಷಣ ನಿರೋಧಕ ಫ್ಲೇವನಾಯ್ಡ್ ಕಂಡುಬರುತ್ತದೆ. ಈ ಉತ್ಕರ್ಷಣ ನಿರೋಧಕವು ದೇಹದಲ್ಲಿನ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಆಗಿದೆ. ಹಾಗಾಗಿ, ಹೈ ಬಿಪಿ ಸಮಸ್ಯೆ ಇರುವವರಿಗೆ ನಿಯಮಿತ ಡಾರ್ಕ್ ಚಾಕೊಲೇಟ್ ಸೇವನೆ ಪ್ರಯೋಜನಕಾರಿ ಆಗಿದೆ.

ಕಿವಿ ಹಣ್ಣು:
ಅಧ್ಯಯನವೊಂದರ ಪ್ರಕಾರ, ಸಾಮಾನ್ಯ ಜನರಿಗೆ ಹೋಲಿಸಿದರೆ ವಾರದಲ್ಲಿ ಸುಮಾರು 8 ಕಿವಿ ಹಣ್ಣುಗಳನ್ನು ಸೇವಿಸುವುದರಿಂದ ಹೈ ಬಿಪಿ ಸಮಸ್ಯೆ ಕಡಿಮೆ ಆಗುತ್ತದೆ.

ಇದನ್ನೂ ಓದಿ- ಚಹಾದ ಜೊತೆ ಬಜ್ಜಿ , ಪಕೋಡಾ ಸೇವಿಸುವ ಅಭ್ಯಾಸ ನಿಮಗೂ ಇದೆಯೇ? ಹಾಗಿದ್ದರೆ ಜೋಪಾನ .!

ಬೆರ್ರಿಗಳು:
ಬ್ಲೂಬೆರ್ರಿ ಮತ್ತು ಸ್ಟ್ರಾಬೆರಿಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದರ ಸೇವನೆಯಿಂದ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು. ನಿಯಮಿತವಾಗಿ ಬೆರ್ರಿಗಳನ್ನು ಸೇವಿಸುವವರಲ್ಲಿ ಬಿಪಿ ಅಪಾಯ ಸುಮಾರು 8% ನಷ್ಟು ಕಡಿಮೆ ಎಂದು ಅಧ್ಯಯನವೊಂದರಲ್ಲಿ ತಿಳಿದುಬಂದಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News