ಇವರು ತಪ್ಪಿಯೂ ತಿನ್ನಬಾರದು ಬಾದಾಮಿ, ತಿಂದರೆ ಅಪಾಯ ತಪ್ಪಿದ್ದಲ್ಲ

ಡ್ರೈ ಫ್ರುಟ್ಸ್ ಗಳ ಸೇವನೆ ಆರೋಗ್ಯಕ್ಕೆ  ತುಂಬಾ ಪ್ರಯೋಜನಕಾರಿಯಾಗಿದೆ. ಇದು ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇಂದು ನಾವು ಬಾದಾಮಿಯ ಬಗ್ಗೆ ಹೇಳಲಿದ್ದೇವೆ.

Written by - Ranjitha R K | Last Updated : Jul 4, 2021, 04:01 PM IST
  • ಬಾದಾಮಿ ಪ್ರೋಟೀನ್, ಕೊಬ್ಬು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.
  • ಬಾದಾಮಿ ದೇಹದ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ದೇಹಕ್ಕೆ ಶಕ್ತಿ ನೀಡುತ್ತದೆ.
  • ಆದರೆ ಈ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವವರು ಬಾದಾಮಿಯನ್ನು ಸೇವಿಸಬಾರದು
ಇವರು ತಪ್ಪಿಯೂ ತಿನ್ನಬಾರದು ಬಾದಾಮಿ,  ತಿಂದರೆ ಅಪಾಯ ತಪ್ಪಿದ್ದಲ್ಲ title=
ಈ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವವರು ಬಾದಾಮಿಯನ್ನು ಸೇವಿಸಬಾರದು (photo india.com)

ನವದೆಹಲಿ : ಡ್ರೈ ಫ್ರುಟ್ಸ್ ಗಳ ಸೇವನೆ ಆರೋಗ್ಯಕ್ಕೆ (health benefits of dry fruits) ತುಂಬಾ ಪ್ರಯೋಜನಕಾರಿಯಾಗಿದೆ. ಇದು ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇಂದು ನಾವು ಬಾದಾಮಿಯ ಬಗ್ಗೆ ಹೇಳಲಿದ್ದೇವೆ. ಬಾದಾಮಿ ಪ್ರೋಟೀನ್, ಕೊಬ್ಬು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅವು ದೇಹದ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ದೇಹಕ್ಕೆ ಶಕ್ತಿ ನೀಡುತ್ತದೆ. ಆದರೆ, ಬಾದಾಮಿ ಸೇವನೆ  ಕೆಲವರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಹಾಗಾಗಿ ಇವರುಗಳು ಬಾದಾಮಿ ಸೇವನೆಯಿಂದ ದೂರವಿರಬೇಕು. ಹಾಗಿದ್ದರೆ ಯಾರು ಬಾದಾಮಿಯನ್ನು ಸೇವಿಸಬಾರದು ನೋಡೋಣ..

ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರು : 
ಬಿಪಿ ಸಮಸ್ಯೆಯಿಂದ (BP Patients) ಬಳಲುತ್ತಿರುವವರು ಬಾದಾಮಿ ಸೇವಿಸಬಾರದು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು ಅದಕ್ಕಾಗಿ ಔಷಧಿ ತೆಗೆದುಕೊಳ್ಳುತ್ತಿರುವವರು, ಬಾದಾಮಿ ಸೇವಿಸುವುದು ಅವರ ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಗಣಿಸಬಹುದು. 

ಇದನ್ನೂ ಓದಿ : ಉತ್ತಮ ರೋಗ್ಯ ನಿಮ್ಮದಾಗಬೇಕಾದರೆ ಯಾಕೆ ಇಡ್ಲಿ ಸಾಂಬಾರ್ ಹೆಚ್ಚು ತಿನ್ನಬೇಕು..?

 ಸ್ಟೋನ್ ಸಮಸ್ಯೆಯಿಂದ ಬಲಲುವ ರೋಗಿಗಳು : 
ಪಿತ್ತಕೋಶದಲ್ಲಿ, ಮೂತ್ರಪಿಂಡದಲ್ಲಿ ಸ್ಟೋನ್ (Kidney stone) ಸಮಸ್ಯೆಯಿಂದ ಬಳಲುತ್ತಿರುವವರು ಬಾದಾಮಿ ಸೇವಿಸಬಾರದು. ಇವರು ಬಾದಾಮಿ ಸೇವಿಸಿದರೆ,  ಬಾದಾಮಿಯಲ್ಲಿರುವ (Almond) ಆಕ್ಸಲೇಟ್‌ನಿಂದ ಮತ್ತಷ್ಟು ಹಾನಿಯಾಗಬಹುದು.

ಜೀರ್ಣಕ್ರಿಯೆಯ ಸಮಸ್ಯೆಯಿಂದ ಬಳಲುತ್ತಿರುವವರು : 
ಜೀರ್ಣಕ್ರಿಯೆಯ ಸಮಸ್ಯೆಯಿರುವವರು (Digestion problem) ಕೂಡಾ ಬಾದಾಮಿ ಸೇವಿಸಬಾರದು. ಬಾದಾಮಿಯಲ್ಲಿ  ಪ್ರೋಟೀನ್ ಮತ್ತು ವಿಟಮಿನ್ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಈ ಕಾರಣದಿಂದಾಗಿ, ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ. ಇದಲ್ಲದೆ, ಆಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಕೂಡಾ ಬಾದಾಮಿಯಿಂದ ದೂರ ಇರುವುದು ಒಳ್ಳೆಯದು. ಬಾದಾಮಿಯಲ್ಲಿ ಫೈಬರ್ ಇರುವುದರಿಂದ ಗ್ಯಾಸ್ ಸಮಸ್ಯೆ ಎದುರಾಗಬಹುದು.

ಇದನ್ನೂ ಓದಿ : ಹೆಲ್ತಿ ಹಾರ್ಟ್ ಗಾಗಿ ವಾರದ ಏಳು ದಿನಕ್ಕೆ 7 ಹೆಲ್ತಿ ಬ್ರೇಕ್ ಫಾಸ್ಟ್..!

ತೂಕ ಇಳಿಸಿಕೊಳ್ಳಲು ಬಯಸುವ ಜನರು: 
ನೀವು ತೂಕ ಇಳಿಸಿಕೊಳ್ಳಲು (Weight loss) ಬಯಸುತ್ತಿದ್ದರೆ, ನೀವು ಬಾದಾಮಿಯನ್ನು ತಿನ್ನಬಾರದು. ಬಾದಾಮಿಯಲ್ಲಿ ಹೆಚ್ಚಿನ ಕ್ಯಾಲೊರಿ ಮತ್ತು ಕೊಬ್ಬು ಇರುತ್ತದೆ. ಹೀಗಿರುವಾಗ , ಬಾದಾಮಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ತೂಕವನ್ನು ಕಡಿಮೆ ಮಾಡುವ ಬದಲು, ಬೊಜ್ಜು (Fat) ಹೆಚ್ಚಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News