Republic Day ಮೊದಲು ಭಯೋತ್ಪಾದಕ ದಾಳಿ ಎಚ್ಚರಿಗೆ, ದೆಹಲಿ-ಎನ್‌ಸಿಆರ್‌ನಲ್ಲಿ ಹೈ ಅಲರ್ಟ್

Republic Day 2022:  ಗಣರಾಜ್ಯೋತ್ಸವ 2022 ರ ಮೊದಲು ಸಂಭವನೀಯ ಭಯೋತ್ಪಾದಕ ದಾಳಿಯ ಬಗ್ಗೆ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಲಭ್ಯವಾಗಿರುವ ಹಿನ್ನಲೆಯಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚಿನ ಭದ್ರತಾ ಎಚ್ಚರಿಕೆಯನ್ನು ನೀಡಲಾಗಿದೆ.

Written by - Yashaswini V | Last Updated : Jan 19, 2022, 07:01 AM IST
  • ಕಳೆದ ವರ್ಷ ಗಣರಾಜ್ಯೋತ್ಸವ ಪರೇಡ್‌ಗೆ ಸುಮಾರು 25,000 ಜನರಿಗೆ ಅವಕಾಶ ನೀಡಲಾಗಿತ್ತು
  • ಕಳೆದ ವರ್ಷ ಮೆರವಣಿಗೆಯಲ್ಲಿ ಮುಖ್ಯ ಅತಿಥಿ ಇರಲಿಲ್ಲ
  • ಈ ವರ್ಷದ ಪರೇಡ್‌ಗೆ ಮುಖ್ಯ ಅತಿಥಿ ಬರುತ್ತಾರೋ ಇಲ್ಲವೋ ಎಂಬುದನ್ನು ವಿದೇಶಾಂಗ ಸಚಿವಾಲಯ ಇನ್ನಷ್ಟೇ ನಿರ್ಧರಿಸಬೇಕಿದೆ
Republic Day ಮೊದಲು ಭಯೋತ್ಪಾದಕ ದಾಳಿ ಎಚ್ಚರಿಗೆ, ದೆಹಲಿ-ಎನ್‌ಸಿಆರ್‌ನಲ್ಲಿ ಹೈ ಅಲರ್ಟ್ title=
Alert issued in Delhi-NCR amid intelligence about terrorist attack before Republic Day

Republic Day 2022: ಗಣರಾಜ್ಯೋತ್ಸವ 2022 ರ ಮೊದಲು ಸಂಭವನೀಯ ಭಯೋತ್ಪಾದಕ ದಾಳಿಯ ಬಗ್ಗೆ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಲಭ್ಯವಾಗಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಗಣರಾಜ್ಯೋತ್ಸವದ ದೃಷ್ಟಿಯಿಂದ ಯುಎವಿಗಳು, ಪ್ಯಾರಾಗ್ಲೈಡರ್‌ಗಳು ಮತ್ತು ಹಾಟ್ ಏರ್ ಬಲೂನ್‌ಗಳು ಸೇರಿದಂತೆ ಸಾಂಪ್ರದಾಯಿಕ ಏರ್ ಪ್ಲಾಟ್‌ಫಾರ್ಮ್‌ಗಳನ್ನು ಜನವರಿ 20 ರಿಂದ ರಾಷ್ಟ್ರ ರಾಜಧಾನಿಯಲ್ಲಿ ನಿಷೇಧಿಸಲಾಗಿದೆ. 

ಗಮನಾರ್ಹವಾಗಿ, ಈ ಆದೇಶವು ಜನವರಿ 20 ರಿಂದ ಅನ್ವಯವಾಗಲಿದ್ದು, ಫೆಬ್ರವರಿ 15 ರವರೆಗೆ ಜಾರಿಯಲ್ಲಿರುತ್ತದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಕೆಲವು ಕ್ರಿಮಿನಲ್ ಅಥವಾ ಸಮಾಜ ವಿರೋಧಿ ಶಕ್ತಿಗಳು, ಭಯೋತ್ಪಾದಕರು ಸಾರ್ವಜನಿಕರು, ಗಣ್ಯರು ಮತ್ತು ಪ್ರಮುಖ ಸಂಸ್ಥೆಗಳ ಭದ್ರತೆಗೆ ಅಪಾಯವನ್ನುಂಟುಮಾಡುವ ವರದಿಗಳ ನಡುವೆ ದೆಹಲಿ ಪೊಲೀಸ್ (Delhi Police) ಕಮಿಷನರ್ ರಾಕೇಶ್ ಅಸ್ತಾನಾ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.

ಪ್ಯಾರಾ-ಗ್ಲೈಡರ್‌ಗಳು, ಪ್ಯಾರಾ-ಮೋಟರ್‌ಗಳು, ಹ್ಯಾಂಗ್ ಗ್ಲೈಡರ್‌ಗಳು, ಮಾನವರಹಿತ ವೈಮಾನಿಕ ವಾಹನಗಳು (ಯುಎವಿಗಳು), ಮಾನವರಹಿತ ವೈಮಾನಿಕ ವ್ಯವಸ್ಥೆಗಳು (ಯುಎಎಸ್), ಮೈಕ್ರೋಲೈಟ್ ಏರ್‌ಕ್ರಾಫ್ಟ್, ರಿಮೋಟ್ ಆಪರೇಟೆಡ್ ಏರ್‌ಕ್ರಾಫ್ಟ್, ಹಾಟ್ ಏರ್ ಬಲೂನ್‌ಗಳು, ಕ್ವಾಡ್‌ಕಾಪ್ಟರ್‌ಗಳು ಅಥವಾ ವಿಮಾನದ ಮೂಲಕ ಪ್ಯಾರಾ-ಜಂಪಿಂಗ್ ಉಪ-ಸಾಂಪ್ರದಾಯಿಕ ಗಾಳಿಯ ಬಳಕೆ ಇತರ ಉಪ-ಸಾಂಪ್ರದಾಯಿಕ ವಾಯು ಸಂಪನ್ಮೂಲಗಳನ್ನು ಒಳಗೊಂಡಂತೆ ಕೆಲವು ಸಂಪನ್ಮೂಲಗಳು ಸಾಮಾನ್ಯ ಸಾರ್ವಜನಿಕರು, ಗಣ್ಯರು ಮತ್ತು ಪ್ರಮುಖ ಸ್ಥಾಪನೆಗಳ ಸುರಕ್ಷತೆಗೆ ಅಪಾಯವನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ - Jammu and Kashmir: ಹಿಮದಲ್ಲಿ ಸಿಲುಕಿದ್ದ 30 ನಾಗರಿಕರನ್ನು ರಕ್ಷಿಸಿದ ಭಾರತೀಯ ಸೇನೆ

ಆದೇಶದ ಪ್ರಕಾರ, ದೆಹಲಿ ಪೊಲೀಸರು ಉಪ-ಸಾಂಪ್ರದಾಯಿಕ ವೈಮಾನಿಕ ಸಂಪನ್ಮೂಲಗಳಾದ ಪ್ಯಾರಾ-ಗ್ಲೈಡರ್‌ಗಳು, ಪ್ಯಾರಾ-ಮೋಟರ್‌ಗಳು, ಹ್ಯಾಂಗ್ ಗ್ಲೈಡರ್‌ಗಳು, ಯುಎವಿಗಳು, ಯುಎಎಸ್, ಅಲ್ಟ್ರಾ-ಲೈಟ್ ಏರ್‌ಕ್ರಾಫ್ಟ್, ರಿಮೋಟ್ ಆಪರೇಟೆಡ್ ಏರ್‌ಕ್ರಾಫ್ಟ್, ಹಾಟ್ ಏರ್ ಬಲೂನ್‌ಗಳು, ಸಣ್ಣ- ಗಾತ್ರದ ವಿಮಾನ, ಕ್ವಾಡ್‌ಕಾಪ್ಟರ್‌ಗಳು ಅಥವಾ ಪ್ಯಾರಾ-ಜಂಪಿಂಗ್ ಅನ್ನು ನಿಷೇಧಿಸಲಾಗಿದೆ. ಜನವರಿ 26 ರಂದು ಗಣರಾಜ್ಯೋತ್ಸವದ (Republic Day) ಹಿನ್ನೆಲೆಯಲ್ಲಿ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಈ ವಿಮಾನಗಳನ್ನು ನಿರ್ವಹಿಸುವುದು ಶಿಕ್ಷಾರ್ಹವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೆರವಣಿಗೆಯಲ್ಲಿ ಭಾಗವಹಿಸುವವರ ಸಂಖ್ಯೆಯಲ್ಲಿ ಕಡಿತ:
ಮತ್ತೊಂದೆಡೆ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ಈ ವರ್ಷ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವವರ ಸಾಮಾನ್ಯ ಸಂಖ್ಯೆಯು ಶೇಕಡಾ 70 ರಿಂದ 80 ರಷ್ಟು ಕಡಿಮೆಯಾಗಲಿದೆ ಮತ್ತು 5,000 ರಿಂದ 8,000 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಮಂಗಳವಾರ ಈ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಗಣರಾಜ್ಯೋತ್ಸವ ಪರೇಡ್‌ಗೆ ಸುಮಾರು 25,000 ಜನರಿಗೆ ಅವಕಾಶ ನೀಡಲಾಗಿತ್ತು. ಈ ವರ್ಷದ ಪರೇಡ್‌ಗೆ ಮುಖ್ಯ ಅತಿಥಿ ಬರುತ್ತಾರೋ ಇಲ್ಲವೋ ಎಂಬುದನ್ನು ವಿದೇಶಾಂಗ ಸಚಿವಾಲಯ ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಮೆರವಣಿಗೆಯಲ್ಲಿ ಮುಖ್ಯ ಅತಿಥಿ ಇರಲಿಲ್ಲ.

ಇದನ್ನೂ ಓದಿ- Tamil Nadu: ನದಿಯಲ್ಲಿ ಮುಳುಗಿ 6 ವಿದ್ಯಾರ್ಥಿಗಳು ಸಾವು, ಇಬ್ಬರ ರಕ್ಷಣೆ

ಪರೇಡ್‌ನಿಂದ ಸೋಂಕು ಪ್ರಕರಣಗಳು ಹೆಚ್ಚಾಗದಂತೆ ಜನರನ್ನು ದೂರವಿರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸಂಖ್ಯೆ ಕಡಿತದ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಹಾಗಾಗಿ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ನಿಜವಾದ ಸಂಖ್ಯೆ ಇನ್ನೂ ನಿರ್ಧಾರವಾಗಿಲ್ಲವಾದರೂ ಈ ವರ್ಷ ಅದು 5,000 - 8,000 ರ ನಡುವೆ ಇರುತ್ತದೆ. ಈ ಮೆರವಣಿಗೆಯನ್ನು ಟಿವಿ ಮತ್ತು ‘ಲೈವ್ ಸ್ಟ್ರೀಮಿಂಗ್’ ಮೂಲಕ ವೀಕ್ಷಿಸಲು ಪ್ರೋತ್ಸಾಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News