Tamil Nadu: ನದಿಯಲ್ಲಿ ಮುಳುಗಿ 6 ವಿದ್ಯಾರ್ಥಿಗಳು ಸಾವು, ಇಬ್ಬರ ರಕ್ಷಣೆ

ದಿಂಡಿಗಲ್ ಜಿಲ್ಲೆಯ ಮಂಪಾರೈನಲ್ಲಿರುವ ದೇವಸ್ಥಾನಕ್ಕೆ ತೆರಳಿದ್ದ ವಿದ್ಯಾರ್ಥಿಗಳು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ದುರ್ಘಟನೆ ನಡೆದಿದೆ.

Written by - Zee Kannada News Desk | Last Updated : Jan 18, 2022, 08:07 PM IST
  • ದೇವಾಲಯಕ್ಕೆ ಹೋಗಿದ್ದ 6 ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ
  • ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಧಾರಾಪುರಂನ ಅಮರಾವತಿ ನದಿಯಲ್ಲಿ ದುರಂತ
  • ಮೃತರಲ್ಲಿ ಐವರು ಶಾಲಾ ವಿದ್ಯಾರ್ಥಿಗಳು ಮತ್ತು ಒಬ್ಬ ಕಾಲೇಜು ವಿದ್ಯಾರ್ಥಿ ಎಂದು ತಿಳಿದುಬಂದಿದೆ
Tamil Nadu: ನದಿಯಲ್ಲಿ ಮುಳುಗಿ 6 ವಿದ್ಯಾರ್ಥಿಗಳು ಸಾವು, ಇಬ್ಬರ ರಕ್ಷಣೆ title=
6 ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ

ತಿರುಪ್ಪೂರ್: ದೇವಾಲಯಕ್ಕೆ ಹೋಗಿದ್ದ ಆರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ(Tamil Nadu) ತಿರುಪ್ಪೂರ್ ಜಿಲ್ಲೆಯ ಧಾರಾಪುರಂನಲ್ಲಿ ನಡೆದಿದೆ. ಅಮರಾವತಿ ನದಿ(Amaravathi River)ಯಲ್ಲಿ ಸ್ನಾನ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭಿಸಿದೆ ಎಂದು ವರದಿಯಾಗಿದೆ.

ಮೃತರಲ್ಲಿ ಐವರು ಶಾಲಾ ವಿದ್ಯಾರ್ಥಿಗಳು ಮತ್ತು ಒಬ್ಬ ಕಾಲೇಜು ವಿದ್ಯಾರ್ಥಿ(Six boys Died) ಎಂಬುದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ ಮೃತರನ್ನು ಎಂ.ಅಮಿರ್ತ ಕೃಷ್ಣನ್(18), ಆರ್.ಶ್ರೀಧರ್(17), ಆರ್.ರಂಜಿತ್(20), ಟಿ.ಯುವನ್(19), ಟಿ.ಮೋಹನ್(17) ಮತ್ತು ಎಂ.ಚಕ್ರವರ್ಮಣಿ(18) ಎಂದು ಗುರುತಿಸಲಾಗಿದೆ. ರಕ್ಷಿಸಲ್ಪಟ್ಟ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Bumper Lottery:ಲಕ್ಕಿ ಡ್ರಾನಲ್ಲಿ ಜಾಕ್‌ಪಾಟ್, 12 ಕೋಟಿ ರೂ. ಲಾಟರಿ ಗೆದ್ದ ಪೇಂಟರ್

ಈ ಎಲ್ಲಾ ವಿದ್ಯಾರ್ಥಿಗಳು ಗುಂಪು ದಿಂಡಿಗಲ್ ಜಿಲ್ಲೆಯ ಮಂಪಾರೈನಲ್ಲಿರುವ ದೇವಸ್ಥಾನ(Muniyappan Temple in Mambarai)ಕ್ಕೆ ತೆರಳಿದ್ದರು. ವಾಪಸಾಗುವಾಗ ನದಿಯಲ್ಲಿ ಸ್ನಾನ ಮಾಡಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ. 8 ವಿದ್ಯಾರ್ಥಿಗಳಲ್ಲಿ 6 ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇಬ್ಬರನ್ನು ಸ್ಥಳೀಯರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಅಮರಾವತಿ ನದಿ(Amaravathi)ಗೆ ಇಳಿದ ಕೂಡಲೇ ನೀರಿನ ಸಳೆತಕ್ಕೆ ಸಿಲುಕಿದ ವಿದ್ಯಾರ್ಥಿಗಳು ಸಹಾಯಕ್ಕಾಗಿ ಕಿರುಚಿದರು. ಜೀವಾ ಮತ್ತು ಸರಣ್ ಎಂಬ ಇಬ್ಬರನ್ನು ರಕ್ಷಿಸಲಾಯಿತು. ಉಳಿದ 6 ಮಂದಿ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಸೇಬಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಇದನ್ನೂ ಓದಿ: Ptron Smart Watches: ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ವಾಚ್ ಬಿಡುಗಡೆ..!

ಈ ಬಗ್ಗೆ ಮಾತನಾಡಿರುವ ಧಾರಾಪುರಂ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಎಸ್.ಜಯಚಂದ್ರನ್, ‘ಮೃತಪಟ್ಟಿರುವ ಯಾವ ಹುಡುಗರಿಗೆ ಈಜು ಬರುತ್ತಿರಲಿಲ್ಲ ಮತ್ತು ಸುಮಾರು 15 ಅಡಿ ನದಿಯ ಆಳಕ್ಕೆ ಸಿಲುಕಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಧಾರಾಪುರಂ(Dharapuram) ಅಗ್ನಿಶಾಮಕ ಠಾಣೆಯ ಸುಮಾರು 10 ಸಿಬ್ಬಂದಿ 1 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಸಂಜೆ 5.30ರ ವೇಳೆಗೆ 6 ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಹೇಳಿದ್ದಾರೆ. ಮೃತದೇಹಗಳನ್ನು ಧಾರಾಪುರ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಶವಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಉಪಾಧೀಕ್ಷಕ (ಧಾರಾಪುರಂ ಉಪವಿಭಾಗ) ಆರ್.ಧನರಸು, ‘ತಿರುಪ್ಪೂರ್ ಜಿಲ್ಲಾ(Tiruppur District) ಪೊಲೀಸರು ಲೋಕೋಪಯೋಗಿ ಇಲಾಖೆಯೊಂದಿಗೆ ಕೈಜೋಡಿಸಿ ಇಂತಹ ದುರಂತ ಮರುಕಳಿಸಿದಂತೆ ತಡೆಗಟ್ಟಲು ಕ್ರಮಕೈಗೊಳ್ಳುತ್ತಾರೆ’ ಅಂತಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News