Corona Vaccine for Children: ಶೀಘ್ರವೇ ಮಕ್ಕಳಿಗೆ ಕೊರೊನಾ ಲಸಿಕೆ, ಭಾರತದ ಈ ಲಸಿಕೆಗೆ WHO ಅನುಮೋದನೆ

ವಿಶ್ವ ಆರೋಗ್ಯ ಸಂಸ್ಥೆ (WHO) ಶುಕ್ರವಾರದಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII)ದ ಕೋವೊವಾಕ್ಸ್‌(Covovax) ಲಸಿಕೆಯನ್ನು ಮಕ್ಕಳ ತುರ್ತು ಬಳಕೆಗೆ ಅನುಮೋದಿಸಿದೆ.

Written by - Puttaraj K Alur | Last Updated : Dec 18, 2021, 08:48 AM IST
  • ಎಸ್‌ಐಐ ಸಂಸ್ಥೆಯ Covovax ಲಸಿಕೆಯನ್ನು ಮಕ್ಕಳ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿದೆ
  • ಕೊರೊನಾ ವೈರಸ್ ವಿರುದ್ಧ WHO ಅನುಮೋದಿಸಿದ ವಿಶ್ವದ 9ನೇ ಲಸಿಕೆ ಇದಾಗಿದೆ
  • WHO ನಿರ್ಧಾರದ ಬಗ್ಗೆ ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ CEO ಆಡಾರ್ ಪೂನವಾಲ ಸಂತಸ
Corona Vaccine for Children: ಶೀಘ್ರವೇ ಮಕ್ಕಳಿಗೆ ಕೊರೊನಾ ಲಸಿಕೆ, ಭಾರತದ ಈ ಲಸಿಕೆಗೆ WHO ಅನುಮೋದನೆ title=
ಮಕ್ಕಳ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ನವದೆಹಲಿ: ಮಕ್ಕಳಿಗೆ ಕೊರೊನಾ ಲಸಿಕೆ ಹಾಕುವ ಮಾರ್ಗ ಈಗ ಸ್ಪಷ್ಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಶುಕ್ರವಾರದಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII)ದ ಕೋವೊವಾಕ್ಸ್‌(Covovax) ಲಸಿಕೆಯನ್ನು ಮಕ್ಕಳ ತುರ್ತು ಬಳಕೆಗೆ ಅನುಮೋದಿಸಿದೆ. ಕೊರೊನಾ ವೈರಸ್ ವಿರುದ್ಧ WHO ಅನುಮೋದಿಸಿದ ವಿಶ್ವದ 9ನೇ ಲಸಿಕೆ ಇದಾಗಿದೆ. SII ಈ ಲಸಿಕೆಯನ್ನು Novovax ಪರವಾನಗಿ ಅಡಿಯಲ್ಲಿ ಉತ್ಪಾದಿಸುತ್ತದೆ.

ಆಡಾರ್ ಪೂನವಾಲ ಸಂತಸ  

WHOನ ಈ ನಿರ್ಧಾರದ ಬಗ್ಗೆ ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ(Serum Institute Of India)ಯ ಸಿಇಒ ಆಡಾರ್ ಪೂನವಾಲ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪೂನವಾಲಾ, ‘ಇದು ಕೊರೊನಾ ವಿರುದ್ಧದ ನಮ್ಮ ಹೋರಾಟದಲ್ಲಿ ಮತ್ತೊಂದು ಮೈಲಿಗಲ್ಲು. ಪ್ರಯೋಗದಲ್ಲಿ Kovovax ನಿಖರತೆ ಮತ್ತು ಸುರಕ್ಷತೆಯಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡಿತು. ನಿಮ್ಮ ಸಹಕಾರಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 8 ಹೊಸ ಓಮಿಕ್ರಾನ್ ಪ್ರಕರಣಗಳ ವರದಿ, ಒಟ್ಟು ಸಂಖ್ಯೆ 48ಕ್ಕೆ ಏರಿಕೆ

3 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ

ಈ ಲಸಿಕೆ ಉತ್ಪಾದನೆಗೆ ಸೇರಂ ಇನ್‌ಸ್ಟಿಟ್ಯೂಟ್ ನೋವಾವಾಕ್ಸ್, ಡಬ್ಲ್ಯುಎಚ್‌ಒ ಮತ್ತು ಗವಿ(Gavi) ಜೊತೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ 6 ತಿಂಗಳಲ್ಲಿ ಮಕ್ಕಳಿಗಾಗಿ ಕೊರೊನಾ ಲಸಿಕೆ ಕೋವೊವಾಕ್ಸ್ ಅನ್ನು ಎಸ್‌ಐಐ ಬಿಡುಗಡೆ ಮಾಡಲಿದೆ ಎಂದು ಪೂನವಾಲ(Adar Poonawalla) ಹೇಳಿದ್ದಾರೆ. Covovax ಲಸಿಕೆಯು 3 ವರ್ಷದವರೆಗಿನ ಮಕ್ಕಳನ್ನು ಕೊರೊನಾದಿಂದ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಕ್ಕಳು ಕೊರೊನಾದಿಂದ ರಕ್ಷಣೆ ಪಡೆಯಲಿದ್ದಾರೆ

ಪ್ರಸ್ತುತ ಜನರಿಗೆ ನೀಡಲಾಗುತ್ತಿರುವ ಕೋವಿಶೀಲ್ಡ್, ಕೋವಾಕ್ಸಿನ್, ಸ್ಪುಟ್ನಿಕ್ ಮತ್ತು ಇತರ ಕೊರೊನಾ ಲಸಿಕೆ(Corona Vaccine)ಗಳು 18 ವರ್ಷ ವಯಸ್ಸಿನ ಜನರನ್ನು ವೈರಸ್‌ನಿಂದ ರಕ್ಷಿಸಲು ಸಮರ್ಥವಾಗಿವೆ. ತಮ್ಮ ಹೊಸ ಲಸಿಕೆಯು ಮಕ್ಕಳನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವಲ್ಲಿ ಉತ್ತಮ ರಾಮಬಾಣವೆಂದು ಸಾಬೀತುಪಡಿಸುತ್ತದೆ ಎಂದು ಪೂನವಾಲ ಹೇಳುತ್ತಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ತಮ್ಮ ಜಾತಿಗಾಗಿ ಮಾತ್ರ ಕೆಲಸ ಮಾಡಿವೆ-ಅಮಿತ್ ಶಾ

ಪ್ರಯೋಗದಲ್ಲಿ ಲಸಿಕೆ ಸುರಕ್ಷಿತವಾಗಿದೆ

WHO ಪ್ರಕಾರ Covovax ಅನ್ನು ಪ್ರಸ್ತುತ ತುರ್ತು ಬಳಕೆಯ ಪಟ್ಟಿ (EUL) ವಿಭಾಗದಲ್ಲಿ ಅನುಮೋದಿಸಲಾಗಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ತನಿಖಾ ವರದಿಯ ನಂತರ ಅವರಿಗೆ ಈ ಅನುಮತಿ ನೀಡಲಾಗಿದೆ. ಈ ವರದಿಯಲ್ಲಿ ಹೊಸ ಲಸಿಕೆ ಮಕ್ಕಳಿಗೆ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News