Coronavirus update: ಏಪ್ರಿಲ್ 8 ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ

ಕರೋನವೈರಸ್‌ನಿಂದ ಉಂಟಾಗುವ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 8 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಮಾರಣಾಂತಿಕ ವೈರಸ್ ಹರಡುವ ಕುರಿತು ರಾಜಕೀಯ ಪಕ್ಷಗಳೊಂದಿಗೆ ಮೋದಿಯವರ ಮೊದಲ ಸಭೆ ಇದಾಗಿದ್ದು, ಲಾಕ್ ಡೌನ್ ಘೋಷಿಸಿದ ಹಾಕಿದ ಕೆಲ ದಿನಗಳ ನಂತರ ಈಸಭೆ ಬಂದಿದೆ.

Last Updated : Apr 4, 2020, 06:35 PM IST
Coronavirus update: ಏಪ್ರಿಲ್ 8 ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ title=

ನವದೆಹಲಿ: ಕರೋನವೈರಸ್‌ನಿಂದ ಉಂಟಾಗುವ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 8 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ. ಮಾರಣಾಂತಿಕ ವೈರಸ್ ಹರಡುವ ಕುರಿತು ರಾಜಕೀಯ ಪಕ್ಷಗಳೊಂದಿಗೆ ಮೋದಿಯವರ ಮೊದಲ ಸಭೆ ಇದಾಗಿದ್ದು, ಲಾಕ್ ಡೌನ್ ಘೋಷಿಸಿದ ಹಾಕಿದ ಕೆಲ ದಿನಗಳ ನಂತರ ಈಸಭೆ ಬಂದಿದೆ.

ಸಂಸತ್ತಿನಲ್ಲಿ ಐದಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳ ಸದನದ ನಾಯಕರನ್ನು ಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಸಾಮಾಜಿಕ ದೂರ ಮತ್ತು ಪ್ರಯಾಣದ ನಿರ್ಬಂಧಗಳ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚು ಅಪೇಕ್ಷಿತ ಸಭೆಯನ್ನು ವೀಡಿಯೊ ಸಮ್ಮೇಳನದ ಮೂಲಕ ನಡೆಸಲಾಗುವುದು ಎನ್ನಲಾಗಿದೆ.

ಅನೇಕ ವಿರೋಧ ಪಕ್ಷದ ನಾಯಕರು ಸಾಂಕ್ರಾಮಿಕ ರೋಗದ ಕುರಿತು ಪ್ರಧಾನಮಂತ್ರಿಯೊಂದಿಗೆ ಸರ್ವಪಕ್ಷ ಸಭೆ ಆಗ್ರಹಿಸಿದ್ದರು. ಇದು ಸಮಾಜದ ವಿವಿಧ ವರ್ಗಗಳ ಮೇಲೆ ಮತ್ತು ವಿಶೇಷವಾಗಿ ದೇಶದ ಆರ್ಥಿಕತೆಯ ಮೇಲೆ ದೂರದ ಮತ್ತು ವಿನಾಶಕಾರಿ ಪರಿಣಾಮ ಬಿರುತ್ತಿರುವ ಹಿನ್ನಲೆಯಲ್ಲಿ ಈಗ ಸರ್ವ ಪಕ್ಷಗಳ ಜೊತೆ ಪರಿಸ್ಥಿತಿ ಚರ್ಚಿಸಲು ಸಭೆ ಕರೆಯಲಾಗಿದೆ.

ಸಭೆ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದ್ದು, ಮೋದಿಯವರ ಆರಂಭಿಕ ಮಾತುಗಳೊಂದಿಗೆ ಅವರು ತಮ್ಮ ಸರ್ಕಾರ ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವಿಧ  ಪಕ್ಷದ ಮುಖಂಡರು ಮೌಲ್ಯಮಾಪನ ಮಾಡುತ್ತಾರೆ. ಅಧಿಕಾರಿಯೊಬ್ಬರು ಹೇಳುವಂತೆ , ಈ ಸಭೆಯು ಕೋವಿಡ್ -19 ವಿರುದ್ಧ ಭಾರತದ ಹೋರಾಟದ ಬಗ್ಗೆ ವಿಶಾಲವಾದ ರಾಜಕೀಯ ಒಮ್ಮತವನ್ನು ನಿರ್ಮಿಸುವ ಅವಕಾಶವಾಗಿದೆ.

ಮೋದಿಯವರಲ್ಲದೆ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ರಾಜ್ಯಸಭೆಯ ಮುಖಂಡ ತಾವರ್ ಚಂದ್ ಗೆಹ್ಲೋಟ್ ಕೂಡ ಹಾಜರಿರುವ ನಿರೀಕ್ಷೆಯಿದೆ.ಕರೋನವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಮೂರು ವಾರಗಳ ರಾಷ್ಟ್ರವ್ಯಾಪಿ ಸಂಪೂರ್ಣ ಲಾಕ್‌ಡೌನ್ ನ್ನು  ಪ್ರಧಾನಿ ಮೋದಿ ಮಾರ್ಚ್ 24 ರಂದು ಘೋಷಿಸಿದ್ದರು.

Trending News