ಡಿಯರ್ ಜಿಂದಗಿ: ನೀವು ಸರಿಯಾಗಿ ಕೇಳಿಸಿಕೊಳ್ಳಿ!

    

Last Updated : Jun 29, 2018, 08:58 PM IST
ಡಿಯರ್ ಜಿಂದಗಿ: ನೀವು ಸರಿಯಾಗಿ ಕೇಳಿಸಿಕೊಳ್ಳಿ!  title=

ಮೂಲ ಲೇಖಕರು: ದಯಾಶಂಕರ್ ಮಿಶ್ರಾ

ನಮ್ಮ ಸುತ್ತಮುತ್ತ ನಡೆಯುತ್ತಿರುವ ಸಂಗತಿಗಳು ಹೇಗಿವೆ ಎಂದರೆ ನಮಗೆ ಕೇಳುವ ಸಹನೆಯೇ ಪ್ರತಿದಿನ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಇದರಲ್ಲಿರುವ ಸಮಸ್ಯೆಗಳು. ಇಲ್ಲಿ ಮೊದಲನೆಯದಾಗಿ ನಮಗೆ ಕೇಳುವ ವ್ಯವಧಾನವಿಲ್ಲ ಅಥವಾ ಅಥವಾ ಕೇಳಿಸಿಕೊಳ್ಳುತ್ತಿಲ್ಲ , ಆದ್ದರಿಂದ  ಇಲ್ಲಿ ಕೇಳುವುದು ಕೇವಲ ಕೃತಕ ಎನ್ನುವಂತಾಗಿದೆ. ಇದರಲ್ಲಿ ಎರಡನೆಯ ಸಂಗತಿ ನಿಜಕ್ಕೂ ಕಷ್ಟಕರ ಎಂದು ಹೇಳಬಹುದು. ಕಾರಣವಿಷ್ಟೇ ನಾವು ಈಗ ಎಲ್ಲದರಲ್ಲಿಯೂ ಕೂಡ ಹೃದಯಹೀನರಾಗಿದ್ದೇವೆ. ಆದ್ದರಿಂದ ಇದು ನಿಜಕ್ಕೂ ಮನುಷ್ಯತ್ವದ ಮೂಲ ಗುಣಕ್ಕೆ ವಿರುದ್ಧವಾಗಿದೆ ಎಂದು ಹೇಳಬಹುದು.

ಈ ಹಿಂದಿನ ಡಿಯರ್ ಜಿಂದಗಿಯಲ್ಲಿ ಪ್ರಸ್ತಾಪಿಸಿದ ಪ್ರೀತಿ,ಸಂವಾದಗಳೆಲ್ಲವು ಕೂಡ ಮಾನವೀಯತೆಗೆ ನೇರವಾಗಿ ಸಂಬಂಧಿಸಿದವು ಎಂದು ಹೇಳಬಹುದು.

ಜೈಪುರ್ ದ ಜೂಹಿ ಶರ್ಮಾ ಹೇಳುವಂತೆ "ಇಬ್ಬರು ವಾಸಿಸುವ ಕೊನೆಯಲ್ಲಿ ಇಪ್ಪತ್ತು ಜನರು ವಾಸಿದರೆ ಅದರಲ್ಲಿ ಪ್ರತಿಯೊಬ್ಬರ ಆಸೆ, ಆಕಾಂಕ್ಷೆಗಳು ಪರಸ್ಪರ ಗೌರವ ತೋರುವ ಬದಲಾಗಿ ಒಬ್ಬರ ಮೇಲೆ ಒಬ್ಬರು ಬಲಾತ್ಕಾರ ತೋರುವ ಪ್ರವೃತ್ತಿಯು ಎಲ್ಲರ ಜೀವನವನ್ನು ನರಕವನ್ನಾಗಿ ಮಾಡುತ್ತದೆ. ಆದರೆ  ಇನ್ನೊಂದೆಡೆಗೆ ಅದನ್ನು ಸ್ವೀಕರಿಸುವ ಪ್ರವೃತ್ತಿಯನ್ನು ಜೀವನವು ಶಾಂತವನ್ನಾಗಿ ಮಾಡುತ್ತದೆ. ಆದರೆ ಈಗ ಹೆಣ್ಣು ಮತ್ತು ಗಂಡಿನ ಸಂಬಂಧವು  ಎಷ್ಟು ಜಟಿಲವಾಗಿದೆ ಎಂದರೆ ಅದು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಕೂಡ ಕಷ್ಟ ಎನ್ನುವಂತಾಗಿದೆ. ಆದ್ದರಿಂದ ನಾವು ಕೂಡಿದ್ದರು ಕೂಡ ಪರಸ್ಪರ ಅರ್ಥ ಮಾಡಿಕೊಳ್ಳದಿದ್ದರೆ ಇನ್ನು ಇಡೀ ಜಗತ್ತನ್ನು ಅರ್ಥೈಸಿಕೊಳ್ಳುವುದು ನಿಜಕ್ಕೂ ಕಷ್ಟದ ಸಂಗತಿ ಎಂದು ಹೇಳಬಹುದು.

ಡಿಯರ್ ಜಿಂದಗಿ: ಅಂತಹ ಸ್ನೇಹಿತನೊಬ್ಬ ಇರಲೇಬೇಕು....

ರಾಂಚಿಯ ದುಷ್ಯಂತ ಷಾ ರವರು ಹೇಳುವಂತೆ 'ಡಿಯರ್ ಜಿಂದಗಿ ನಮ್ಮ ಮನಸ್ಸಿನಲ್ಲಿರುವ ಖಿನ್ನತೆಯನ್ನು ಹೊಡೆದೋಡಿಸುವತ್ತ ನಡೆಸಿದ ಮೊದಲ ಯತ್ನ. ಈಗ ನಮ್ಮ ಮನಸ್ಸ್ಸು ಹಲವು ಗೊಂದಲಗಳಿಂದ ಕೂಡಿ ನಮ್ಮ ಜೀವನವನ್ನೇ ಬಲಿ ತೆಗೆದುಕೊಳ್ಳುವ ಹಾಗಾಗಿದೆ" ಎನ್ನುತ್ತಾರೆ.

ನೀವು ಸೂಕ್ಸ್ಮವಾಗಿ ಗಮನಿಸಿದರೆ ನಮ್ಮ ಖಿನ್ನತೆ ಹೇಗೆ ಮತ್ತು ಎಲ್ಲಿ ನಮ್ಮ ಆತ್ಮವನ್ನು  ತಲುಪುತ್ತಿದೆ ಎನ್ನುವುದನ್ನು ಗಮನಿಸಬಹುದು. ಆದರೆ ಅದು ಈಗ ಕಣ್ಣಿಗೆ ಕಾಣುತ್ತಿಲ್ಲ ಆದರೆ ಮಾನಸಿಕ ಒತ್ತಡದ ಮತ್ತು ಖಿನ್ನತೆಗಳು ಈಗ ನಮ್ಮ ಮುಂದೆಯೇ ಇವೆ. ಆದ್ದರಿಂದ ಒಂದು ಕ್ಷಣ ನಾವು ನಮ್ಮ ಮಧ್ಯ ಇರುವ ಪರದೆಯನ್ನು ಸರಿಸಿ ನೋಡಿದಾಗ ನಮ್ಮ ಮನಸಿನ ಮೂಲಕ ಆತ್ಮವನ್ನು ಪ್ರವೇಶಿಸುವ ಬಗೆಯನ್ನು ನಾವು ತಿಳಿಯಬಹುದು. 

ಯಾವಾಗ ನಮ್ಮ ನಡುವಿನ ಸಂವಾದ ಕೊನೆಗೊಳ್ಳುತ್ತದೆಯೋ ಆಗ ನಮ್ಮ ಸಂಬಂಧಗಳು ಅಂತ್ಯವಾಗುತ್ತವೆ. ಯಾವಾಗ ಪರಸ್ಪರ ಕೇಳಿಸಿಕೊಳ್ಳುವ ವ್ಯವಧಾನ ನಮ್ಮಲ್ಲಿ ಕುಂದುತ್ತದೆಯೋ ನಮ್ಮಲ್ಲಿನ ಪ್ರೀತಿಗೆ ಕೊರತೆ ಉಂಟಾಗುತ್ತದೆ. ನೀವು ಇದನ್ನು ಡೈವೋರ್ಸ್ ನೀಡಿದ ದಂಪತಿಗಳಲ್ಲಿ ಕಾಣಬಹುದು. ಆದ್ದರಿಂದ ನಾವು ಅಂತಹ ಸಂಬಂಧಗಳಿಗೆ ಈಗ  ಬುನಾಧಿ ಹಾಕುತ್ತಿದ್ದೇವೆ. ಆದ್ದರಿಂದ ಅಲ್ಲಿ ನಮಗೆ ತಿರಸ್ಕರಿಸುವುದಕ್ಕೆ ಯಾವುದೇ ಜಾಗವಿಲ್ಲ ಎನ್ನುವಂತಾಗಿದೆ.

ಡಿಯರ್ ಜಿಂದಗಿ: ಬಿಡುವಿದ್ದರೆ ಮನೆಗೆ ಬಂದು ಹೋಗಿ...

ಅಲ್ಪ ಸ್ವಲ್ಪ ನಮ್ಮ ಬಾಲ್ಯದಿಂದಾದರೂ ನಾವು ಕಲಿತುಕೊಳ್ಳುತ್ತೇವೆ ಎಂದು ಆಶಿಸೋಣ! ಆದರೆ ನಾವು ದೊಡ್ದವರಾಗುತ್ತಿದ್ದಂತೆ ಬಾಲ್ಯದಲ್ಲಿನ ಎಲ್ಲ ಸಂಗತಿಗಳನ್ನು ಮರೆತುಬಿಡುತ್ತೇವೆ. ನಾವು ಸಣ್ಣವರಾಗಿದ್ದಾಗಿನ ಪ್ರೀತಿ,ಪ್ರಜ್ಞೆ ,ಪರಸ್ಪರ ಜೀವನದ ಅವಕಾಶವನ್ನು ನೀಡುತ್ತದೆ. ಒಂದು ಕಡೆ ಇದೆಲ್ಲವೂ ಕೂಡ ನಿಜಕ್ಕೂ ಸರಳ ಎಂದೆನಿಸುತ್ತದೆ.ಆದರೆ ನಾವು ಬಾಲ್ಯವನ್ನು ದಾಟುತ್ತಿದ್ದಂತೆ ನಮ್ಮ ಮನೆಯ ಬಾಗಿಲುಗಳನ್ನು ಬಂದು ಮಾಡುತ್ತೇವೆ. ಆದರೆ ಕೆಲವು ಸಮಯದಲ್ಲಿ ನಾವು ಮಳೆಯಲ್ಲಿ, ಬಿಸಿಲಿನಲ್ಲಿ ಬೇರೊಬ್ಬರ ಮನೆಯ ಬಾಗಿಲ ಬಳಿ ನಿಲ್ಲಬೇಕಾಗುತ್ತದೆ ಎನ್ನುವುದನ್ನು ಮರೆತಿದ್ದೇವೆ.  

ಡಿಯರ್ ಜಿಂದಗಿ: ಯಾರಿಂದ ಸೋಲುತ್ತಿದೆ ಈ ಲಕ್ಷಾಧಿಪತಿಗಳ ಮನಸ್ಸು

ಆದ್ದರಿಂದ ಜೀವನವೆಂದರೆ ಬೇರೇನೂ ಅಲ್ಲ ಇದು ಹಳೆಯದರ ಪ್ರತಿಫಲನವಷ್ಟೇ ಎನ್ನಬಹುದು.ಆದ್ದರಿಂದ ನಾವು ವರ್ತಮಾನದ ಚಲನೆಯ ಬಗ್ಗೆ ಚಿಂತಿಸಬೇಕಾಗುತ್ತದೆ ಆಗ ಜೀವನದ ಗತೀತವು ಕೂಡ ಬೆಳಕನ್ನು ಹೊಂದಬಹುದು. 

ಕನ್ನಡದಲ್ಲಿ 'ಡಿಯರ್ ಜಿಂದಗಿ' ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ:  ಡಿಯರ್ ಜಿಂದಗಿ

ಹಿಂದಿ ಭಾಷೆಯಲ್ಲಿ ಎಲ್ಲಾ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ  : डियर जिंदगी

(ಈ ಲೇಖನದ ಕುರಿತಾಗಿ ನಿಮ್ಮ ಪ್ರಶ್ನೆ ಮತ್ತು ಅಭಿಪ್ರಾಯಗಳನ್ನು ತಿಳಿಸಲು ಮೆಸೇಜ್ ಮಾಡಿ:  https://www.facebook.com/dayashankar.mishra.54)

https://twitter.com/dayashankarmi

 

Trending News