ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ - ಸೋನಿಯಾ ಗಾಂಧಿ

ರಾಹುಲ್ ಗಾಂಧಿಯವರು ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಒಂದು ದಿನ ಮುಂಚಿತವಾಗಿ ಸೋನಿಯಾ ತಮ್ಮ ನಿವೃತ್ತಿ ಘೋಷಿಸಿದ್ದಾರೆ.

Last Updated : Dec 15, 2017, 01:13 PM IST
ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ - ಸೋನಿಯಾ ಗಾಂಧಿ title=

ನಿರ್ಗಮಿತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚೆಯೇ ತಾವು ಈಗ ರಾಜಕೀಯದಿಂದ ನಿವೃತ್ತರಾಗುತ್ತಿರುವುದಾಗಿ ತಿಳಿಸಿದ್ದಾರೆ, 

ರಾಹುಲ್ ಗಾಂಧಿಯವರು ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಒಂದು ದಿನ ಮುಂಚಿತವಾಗಿ ಸೋನಿಯಾ ತಮ್ಮ ನಿವೃತ್ತಿ ಘೋಷಿಸಿದ್ದಾರೆ.

ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ವಹಿಸಿಕೊಳ್ಳುವ ಮುನ್ನ ದಿನ, ಮಾದ್ಯಮಗಳು ಕೇಳಿದ ಪಶ್ನೆಗೆ ಸೋನಿಯಾ ಗಾಂಧೀ ಈ ರೀತಿ ಉತ್ತರಿಸಿದ್ದಾರೆ. 

19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿ ಆಳಿದ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಮೂಲಕ ``ಸೂಪರ್ ಪ್ರಧಾನಿ'' ಎಂದೂ ಕರೆಯಲ್ಪತ್ತಿದ್ದರು. ಇದೀಗ ಇದೇ ಡಿ.9 ರಂದು  ಸೋನಿಯಾ ತಮ್ಮ 71ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ್ದಾರೆ. 

1991 ರಲ್ಲಿ ಪತಿ ರಾಜೀವ್ ಗಾಂಧಿಯ ಹತ್ಯೆ ನಂತರ, ಅಧಿಕಾರ ವಹಿಸಿಕೊಳ್ಳಲು ಸೋನಿಯಾ ನಿರಾಕರಿಸಿದ್ದರ ಪರಿಣಾಮ ಪಿ.ವಿ.ನರಸಿಂಹ ರಾವ್ ಅವರು ಪ್ರಧಾನಿಯಾದರು.

ನಂತರ, 1996ರ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡಿತಲ್ಲದೆ, ಪಕ್ಷದ ಹಿರಿಯ ನಾಯಕರಾದ ಮಾಧವರಾವ್ ಸಿಂಧಿಯಾ, ರಾಜೇಶ್ ಪೈಲಟ್, ನಾರಾಯಣ್ ದತ್ ತಿವಾರಿ, ಅರ್ಜುನ್ ಸಿಂಗ್, ಪಿ. ಚಿದಂಬರಂ ಮತ್ತು ಜಯಂತಿ ನಟರಾಜನ್ ಮೊದಲಾದವರು ಆಗಿನ ಪಕ್ಷದ ಅಧ್ಯಕ್ಷ ಸೀತಾರಾಮ್ ಕೇಸರಿ ವಿರುದ್ಧ ಬಹಿರಂಗವಾಗಿ ದಂಗೆಯೆದ್ದರು.

ಈ ಹಿನ್ನೆಲೆಯಲ್ಲಿ ಪಕ್ಷದ ದುಃಖದ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ, 1997 ರಲ್ಲಿ ಕಲ್ಕತ್ತಾ ಪ್ಲೆನರಿ ಸೆಷನ್ನಲ್ಲಿ ಸೋನಿಯಾ ಅವರು ಪ್ರಾಥಮಿಕ ಸದಸ್ಯರಾಗಿ ಕಾಂಗ್ರೆಸ್ ಪಕ್ಷ ಸೇರಿದರಲ್ಲದೆ 1998 ರಲ್ಲಿ ಪಕ್ಷದ ಮುಖ್ಯಸ್ಥರಾದರು.

ಆ ಸಮಯದಲ್ಲಿ, ವಿಭಜಿತ ಪಕ್ಷವಾಗಿ ಕಾಂಗ್ರೆಸ್ ಮಧ್ಯಪ್ರದೇಶ, ಒಡಿಶಾ, ಮಿಜೋರಾಂ ಮತ್ತು ನಾಗಾಲ್ಯಾಂಡ್ನಲ್ಲಿ ವಿಧಾನ ಸಭೆ ಚುನಾವಣೆಯನ್ನು ಕಳೆದುಕೊಂಡಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಲೋಕಸಭೆಯಲ್ಲಿ 141 ಸದಸ್ಯರನ್ನು ಹೊಂದಿತ್ತು.

ಮೇ 1999 ರಲ್ಲಿ, ಪಕ್ಷದ ಮೂವರು ಹಿರಿಯ ಮುಖಂಡರಾದ ಶರದ್ ಪವಾರ್, ಪಿ.ಎ. ಸಂಗ್ಮಾ ಮತ್ತು ತಾರಿಕ್ ಅನ್ವರ್ ಸೋನಿಯಾ ಅವರ ವಿದೇಶಿ ಮೂಲಗಳನ್ನು ಉದಾಹರಿಸಿ ಭಾರತದ ಪ್ರಧಾನಿಯಾಗಲು ಪ್ರಯತ್ನಿಸುವ ಹಕ್ಕನ್ನು ಪ್ರಶ್ನಿಸಿದರು.

ಆದರೂ ಧೃತಿಗೆಡದ ಸೋನಿಯಾ 1999ರಲ್ಲಿ ಕರ್ನಾಟಕದ ಬಳ್ಳಾರಿ ಮತ್ತು ಉತ್ತರ ಪ್ರದೇಶದ ಅಮೇಥಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡೂ ಸ್ಥಾನಗಳನ್ನು ಗೆದ್ದರು. ಆದಾಗ್ಯೂ, ಸೋನಿಯಾ ಅವರು ಅಮೇತಿಯನ್ನು ಪ್ರತಿನಿಧಿಸಲು ನಿರ್ಧರಿಸಿದರು. ಬಳ್ಳಾರಿಯಲ್ಲಿ ಅವರು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸಿದ್ದರು.

 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ರಚಿಸಿದಾಗ 13 ನೇ ಲೋಕಸಭೆಯ ಪ್ರತಿಪಕ್ಷ ನಾಯಕಿಯಾಗಿ ಸೋನಿಯಾ ಆಯ್ಕೆಯಾದರು. ವಿರೋಧ ಪಕ್ಷದ ನಾಯಕಿಯಾಗಿ, 2003 ರಲ್ಲಿ ವಾಜಪೇಯಿ ಸರಕಾರಕ್ಕೆ ವಿರುದ್ಧ ಅವಿಶ್ವಾಸಮತ ಚಲಾಯಿಸಿದರು. 

ಬಿಜೆಪಿ ನೇತೃತ್ವದಲ್ಲಿ, ಎನ್ಡಿಎ ಸರ್ಕಾರದ 'ಭಾರತ ಶೈನಿಂಗ್' ಘೋಷಣೆಗೆ ಪ್ರತಿಯಾಗಿ ಸೋನಿಯಾ ರಾಷ್ಟ್ರವ್ಯಾಪಿ ಪ್ರಚಾರವನ್ನು ಆರಂಭಿಸಿದರು.

ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನದೇ ಆದ 206 ಸ್ಥಾನಗಳನ್ನು ಗೆದ್ದುಕೊಂಡಿತು. ಅದು 1991 ರಿಂದೀಚೆಗೆ ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿ ಹೊರಹೊಮ್ಮಿತು.
ರಾಯ್ಬರೇಲಿಯಿಂದ ಸಂಸದರಾಗಿ ಸೋನಿಯಾ ಮೂರನೇ ಬಾರಿಗೆ ಮರು ಚುನಾಯಿತರಾದರು.

ಎನ್ ಡಿ ಎ ಅನಿರೀಕ್ಷಿತ ಸೋಲಿನ ನಂತರ, ಎಡಪಕ್ಷದ ಬೆಂಬಲದೊಂದಿಗೆ 15 ಪಕ್ಷಗಳ ಒಕ್ಕೂಟ ಸರ್ಕಾರವನ್ನು ಮುನ್ನಡೆಸುವ ನಿರ್ಧಾರವನ್ನು ಸೋನಿಯಾ ಕೈಗೊಂಡರು. ಇದನ್ನು ಯುಪಿಎ ಎಂದು ಹೆಸರಿಸಲಾಯಿತು.

ಸೋನಿಯಾ ಅವರು ವಿದೇಶಿ ಮೂಲದವರು ಎಂಬ ಕಾರಣವನ್ನಿಟ್ಟುಕೊಂಡು ಸೋನಿಯಾ ಪ್ರಧಾನಿ ಯಾಗುವುದನ್ನು ಬಿಜೆಪಿ ಪ್ರತಿಭಟಿಸಿತು. ಸೋನಿಯಾ ಪ್ರಧಾನಿಯಾದರೆ ತಾವು ತಲೆಬೋಳಿಸಿಕೊಂಡು ನೆಲದ ಮೇಲೆ ನಿದ್ದೆ ಮಾಡುವುದಾಗಿ ಸುಸ್ಮಾ ಸ್ವರಾಜ್ ಬೆದರಿಕೆ ಹಾಕಿದರು. 

ತರುವಾಯ, ಸೋನಿಯಾ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡುವಂತೆ ಸಲಹೆ ನೀಡಿದರು. ಕಾಂಗ್ರೆಸ್ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಇದನ್ನು ಭಾರತೀಯ ಸಂಪ್ರದಾಯದ ಪರಿಷ್ಕರಣೆಗೆ ಹೋಲಿಸಿದರು.

Trending News