ಪಾಕಿಸ್ತಾನದ ಐಎಸ್ಐಗೆ ರಹಸ್ಯ ದಾಖಲೆ ರವಾನೆ ಆರೋಪ : ಐಎಎಫ್ ಅಧಿಕಾರಿ ಬಂಧನ

ಭಾರತೀಯ ವಾಯು ಸೇನೆ ಗ್ರೂಪ್ ಕ್ಯಾಪ್ಟನ್ ಅರುಣ್ ಮರ್ವಾ ಅವರನ್ನು ಗುರುವಾರ ಬಂಧಿಸಲಾಗಿದೆ.

Updated: Feb 9, 2018 , 01:32 PM IST
ಪಾಕಿಸ್ತಾನದ ಐಎಸ್ಐಗೆ ರಹಸ್ಯ ದಾಖಲೆ ರವಾನೆ ಆರೋಪ : ಐಎಎಫ್ ಅಧಿಕಾರಿ ಬಂಧನ

ನವದೆಹಲಿ : ಭಾರತೀಯ ವಾಯುಪಡೆ(ಐಎಎಫ್) ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ಗೆ ಸೋರಿಕೆ ಮಾಡಿರುವ ಆರೋಪದ ಮೇಲೆ ಭಾರತೀಯ ವಾಯು ಸೇನೆ ಗ್ರೂಪ್ ಕ್ಯಾಪ್ಟನ್ ಅರುಣ್ ಮರ್ವಾ ಅವರನ್ನು ಗುರುವಾರ ಬಂಧಿಸಲಾಗಿದೆ.

ಈ ಕುರಿತು ದೆಹಲಿ ಪೋಲಿಸ್ ವಿಶೇಷ ಘಟಕದ ಉಪ ಜಿಲ್ಲಾಧಿಕಾರಿ ಪ್ರಮೋದ್ ಖುಷ್ವಾ ಮಾಹಿತಿ ನೀಡಿದ್ದು, 51 ವರ್ಷ ವಯಸ್ಸಿನ ಗ್ರೂಪ್ ಕ್ಯಾಪ್ಟನ್ ಮರ್ವಾ ಅವರ ಬಂಧನವನ್ನು ದೃಢಪಡಿಸಿದ್ದಾರೆ. ಆರೋಪಿ ವಿರುದ್ಧ   ರಹಸ್ಯಗಳ ಕಾಯಿದೆಯ ವಿಭಾಗ 3 ಮತ್ತು 5 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, 5 ದಿನಗಳ ಪೋಲಿಸ್ ಬಂಧನಕ್ಕೆ ಒಪ್ಪಿಸಲಾಗಿದೆ. 

ವರದಿಗಳ ಪ್ರಕಾರ, ಮಾರ್ವಾ ಅವರು ಭಾರತೀಯ ವಾಯು ಸೇನೆ ಪ್ರಧಾನ ಕಚೇರಿಯಲ್ಲಿ ಸೇನೆಗೆ ಸಂಬಂಧಿಸಿದ ಸಂಬಂಧಿಸಿದ ದಾಖಲೆಗಳ ಚಿತ್ರಗಳನ್ನು ತಮ್ಮ ಸ್ಮಾರ್ಟ್ ಫೋನ್ನಲ್ಲಿ ತೆಗೆದು, ವಾಟ್ಸ್ ಅಪ್ ಮೂಲಕ ಕಳುಹಿಸುತ್ತಿದ್ದರು ಎನ್ನಲಾಗಿದೆ. 

ಕಳೆದ ಕೆಲವು ದಿನಗಳಿಂದ ಅನಾಮಿಕ  ಮಹಿಳೊಂದಿಗೆ ನಿರಂತರವಾಗಿ ವಾಟ್ಸಪ್ ಸಂದೇಶ ರವಾನಿಸುತ್ತಿದ್ದುದಾಗಿಯೂ, ಆಕೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐನ ಏಜೆಂಟ್ ಎಂದು ಹೇಳಲಾಗಿದೆ. ಹೀಗಾಗಿ ವಾಯುಸೇನೆ ಅಧಿಕಾರಿ ಅರುಣ್ ಮರ್ವಾಹ್ ಹನಿ ಟ್ರ್ಯಾಪ್ ಗೆ ಬಲಿಯಾಗಿರುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಶಂಕಿಸಲಾಗಿದೆ. 

By continuing to use the site, you agree to the use of cookies. You can find out more by clicking this link

Close