ಸೂಟ್ ಬೂಟ್ ಹೊಂದಿದ್ದವರು ಮಾತ್ರ ಮೋದಿಗೆ ಆಪ್ತರು, ಆದರೆ ರೈತರು ಶೋಷಿತರಲ್ಲ-ರಾಹುಲ್ ಗಾಂಧಿ

ಮಧ್ಯಪ್ರದೇಶದ ದಾಟಿಯಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತಾನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ" ಸೂಟ್  ಬೂಟ್ ಹೊಂದಿದ್ದವರು ಮಾತ್ರ ಮೋದಿಗೆ ಆಪ್ತರು.ಆದರೆ ಅದೇ ರೈತರು ಮತ್ತು ಶೋಷಿತರಲ್ಲ ಎಂದು ಅವರು ಟೀಕಾ ಪ್ರಹಾರ ನಡೆಸಿದರು. 

Last Updated : Oct 15, 2018, 09:02 PM IST
ಸೂಟ್ ಬೂಟ್ ಹೊಂದಿದ್ದವರು ಮಾತ್ರ ಮೋದಿಗೆ ಆಪ್ತರು, ಆದರೆ ರೈತರು ಶೋಷಿತರಲ್ಲ-ರಾಹುಲ್ ಗಾಂಧಿ  title=

ನವದೆಹಲಿ: ಮಧ್ಯಪ್ರದೇಶದ ದಾಟಿಯಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತಾನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ" ಸೂಟ್  ಬೂಟ್ ಹೊಂದಿದ್ದವರು ಮಾತ್ರ ಮೋದಿಗೆ ಆಪ್ತರು.ಆದರೆ ಅದೇ ರೈತರು ಮತ್ತು ಶೋಷಿತರಲ್ಲ ಎಂದು ಅವರು ಟೀಕಾ ಪ್ರಹಾರ ನಡೆಸಿದರು. 

ಇಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು, "ಪ್ರಧಾನಿ ಕಚೇರಿ ಗೆ ನಾನು ಒಂದು ಸಾರಿ  ಹೋಗಿದ್ದೆ ಆಗ ಅವರಿಗೆ ನಾನು  ರೈತರು ಕೃಷಿ ಸಾಲವನ್ನು ಮನ್ನಾ ಮಾಡಲು ಮನವಿ ಮಾಡಿದೆ. ಆದರೆ ನಾನು ನನಗೆ ಗೊತ್ತು ಅವರು ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆಂದು ಅದಕ್ಕೆ ಜೊತೆಗೆ ರೈತರದ್ದು ಮಾಡಿ ಎಂದು ವಿನಂತಿಸಿಕೊಂಡೆ ಆದರೆ ಅವರು ಒಂದು ಒಂದು ಮಾತು ಕೂಡ ಆಡಲಿಲ್ಲ ಎಂದು ರಾಹುಲ್ ಗಾಂಧಿ ಕುಟುಕಿದರು. 

ಇನ್ನು ಮುಂದುವರೆದು "ಪ್ರಧಾನಿಗೆ ತುಳಿತಕ್ಕೊಳಗಾದ ಮಹಿಳೆಯರಿಗೆ ತನ್ನ ಹೃದಯದಲ್ಲಿ ಯಾವುದೇ ಸ್ಥಳವಿಲ್ಲ, ಅವರು ಮೆಹೂಲ್ ಭಾಯಿ, ನಿರವ್ ಭಾಯಿ, ಅನಿಲ್ ಭಾಯಿ, ಲಲಿತ್ ಭಾಯಿ ಎಂದು ಕರೆಯುತ್ತಾರೆ ಆದರೆ ಅದೇ ಅವರು ಎಂದಿಗೂ ಕೂಡ ರೈತರು ಮತ್ತು ಕಾರ್ಮಿಕನ್ನು ಭಾಯಿ ಎಂದು ಕರೆದಿಲ್ಲ"  ನೀವು ಯಾವಾಗಾದರೂ ಅವರು ಬಾಯಿ ಎಂದಿದ್ದನ್ನು ಕೇಳಿದ್ದಿರೆಯೇ ? ಅವರು ಸೂಟ್ ಬೂಟ್  ಹೊಂದಿದ್ದವರಿಗೆ ಮಾತ್ರ ಬಾಯಿ ಎಂದು ಕರೆಯುತ್ತಾರೆ ಎಂದು ರಾಹುಲ್ ಕಿಡಿಕಾರಿದರು.

230 ಕ್ಷೇತ್ರಗಳಿಗಾಗಿ ಮಧ್ಯಪ್ರದೇಶದದಲ್ಲಿ ವಿಧಾನಸಭೆ ಚುನಾವಣೆ ನವೆಂಬರ್ 28 ರಂದು ನಡೆಯಲಿದೆ.ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರವು ಸತತ ನಾಲ್ಕನೇ ಬಾರಿಗೆ ಗೆಲ್ಲಲು ಪ್ರಯತ್ನಿಸುತ್ತದೆ, ಆದರೆ 2003 ರ ಬಳಿಕ ಅಧಿಕಾರವನ್ನು ಪುನಃ ಪಡೆದುಕೊಳ್ಳಲು ಕಾಂಗ್ರೆಸ್ ಹೋರಾಟ ಮಾಡುತ್ತದೆ.

Trending News