ಅಹ್ಮದಾಬಾದ್- ಮುಂಬೈ ಬುಲೆಟ್ ಟ್ರೈನ್ ಒಂದು ನಿಮಿಷ ತಡವಾದರೂ ಕ್ಷಮೆ ಕೇಳುತ್ತಂತೆ..!

ಭಾರತದಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಸಾಗದೇ ಇರುವುದಕ್ಕೆ ಕುಖ್ಯಾತಿಯನ್ನು ಪಡೆದಿವೆ.ಆದರೆ ಈಗ ಅಹ್ಮದಾಬಾದ್- ಮುಂಬೈ ಬುಲೆಟ್ ಟ್ರೈನ್ ಮಾತ್ರ ಒಂದು ನಿಮಿಷ ತಡವಾದರೂ ಪ್ರಯಾಣಿಕರ ಕ್ಷಮೆ ಕೇಳುತ್ತದೆ ಎನ್ನಲಾಗಿದೆ.

Last Updated : Jan 27, 2019, 12:54 PM IST
ಅಹ್ಮದಾಬಾದ್- ಮುಂಬೈ ಬುಲೆಟ್ ಟ್ರೈನ್ ಒಂದು ನಿಮಿಷ ತಡವಾದರೂ ಕ್ಷಮೆ ಕೇಳುತ್ತಂತೆ..! title=
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಸಾಗದೇ ಇರುವುದಕ್ಕೆ ಕುಖ್ಯಾತಿಯನ್ನು ಪಡೆದಿವೆ.ಆದರೆ ಈಗ ಅಹ್ಮದಾಬಾದ್- ಮುಂಬೈ ಬುಲೆಟ್ ಟ್ರೈನ್ ಮಾತ್ರ ಒಂದು ನಿಮಿಷ ತಡವಾದರೂ ಪ್ರಯಾಣಿಕರ ಕ್ಷಮೆ ಕೇಳುತ್ತದೆ ಎನ್ನಲಾಗಿದೆ.

ದೇಶದಲ್ಲಿ ಸರಿಯಾದ ಟೈಮ್ ಗೆ ರೈಲುಗಳು ಚಲಿಸದೆ ಇರುವ ಕಾರಣಕ್ಕಾಗಿ ಪ್ರಯಾಣಿಕರು ಇದೆಲ್ಲವೂ ಸಾಮಾನ್ಯ ಎಂದು ಸ್ವೀಕರಿಸಿದ್ದಾರೆ.ಆದರೆ ಈಗ ಬುಲೆಟ್ ಟ್ರೈನ್ ತಾನು ತಡವಾಗಿ ಸಂಚರಿಸಿದರೆ ಸಾರಿ ಕೇಳುವ ಪರಿಪಾಠವನ್ನು ಅಳವಡಿಸಿಕೊಳ್ಳಲಿದೆ.ಜಪಾನ್ನ ಶಿಂಕಾನ್ಸೆನ್ ಬುಲೆಟ್ ರೈಲಿನ ಗ್ರಾಹಕ ಸೇವಾ ಕೈಪಿಡಿಯಿಂದ ಈ ವೈಶಿಷ್ಟ್ಯತೆಯನ್ನು ಅಳವಡಿಸಲು ರಾಷ್ಟ್ರೀಯ ಹೈ ಸ್ಪೀಡ್ ರೈಲು ಕಾರ್ಪೊರೇಷನ್ (ಎನ್ಎಚ್ಎಸ್ಆರ್ಸಿಎಲ್) ನಿರ್ಧರಿಸಿದೆ.ಅಹಮದಾಬಾದ್ ಸಾಬರಮತಿಯಿಂದ ಮತ್ತು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಡುವಿನ 508-ಕಿ.ಮೀ ದೂರಗಳ ಬುಲೆಟ್ ರೈಲು ಸೇವೆ ಪ್ರಸ್ತುತ ಎಸಿ ಮೊದಲ ದರ್ಜೆ ದರ ದಂತೆ ಬುಲೆಟ್ ಟ್ರೈನ್ ದರ ಇರಲಿದೆ ಎನ್ನಲಾಗಿದೆ 

"ನಾವು ನಮ್ಮ ಗ್ರಾಹಕರಿಗೆ ಕ್ಷಮೆಯಾಚಿಸುತ್ತೇವೆ. ನಾವು ತಡವಾಗಿ ಸಂಚರಿಸಿದರೆ ರೈಲುಗಳಲ್ಲಿ, ನಿಲ್ದಾಣಗಳಲ್ಲಿ, ಸಾರ್ವಜನಿಕವಾಗಿ ಕ್ಷಮಾಪಣೆಯನ್ನು ಕೋರುತ್ತೇವೆ" ಈ ರೀತಿಯ ಶಿಂಕಾನ್ಸೆನ್ ಮಾದರಿಯನ್ನು ನಾವು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ, ಅಲ್ಲಿ ಒಂದು ನಿಮಿಷ ಅಥವಾ ಅದಕ್ಕಿಂತಲೂ ತಡವಾದರೆ ಅದರ ಕಾರಣಗಳನ್ನು  ನಮ್ಮ ಪ್ರಯಾಣಿಕರಿಗೆ  ಸಹ ನಾವು ವಿವರಿಸುತ್ತೇವೆ ಎಂದು ಎನ್ಎಚ್ಎಸ್ಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಚಲ್ ಖಾರೆ ಅವರು ಭಾನುವಾರ ಹೇಳಿದರು.

Trending News