ಜೆಡಿಯು ಇನ್ನೆಂದಿಗೂ ಮೋದಿ ಸಂಪುಟದಲ್ಲಿ ಭಾಗವಹಿಸುದಿಲ್ಲ, ಇದು ನಮ್ಮ ಅಂತಿಮ ನಿರ್ಧಾರ- ಕೆ.ಸಿ.ತ್ಯಾಗಿ

ಪ್ರಧಾನಿ ಮೋದಿ ನೂತನ ಸಚಿವ ಸಂಪುಟದಲ್ಲಿ ಕೇವಲ ಒಂದು ಸಚಿವ ಸ್ಥಾನವನ್ನು ಜೆಡಿಯುಗೆ ನೀಡಿದ್ದರ  ಹಿನ್ನಲೆಯಲ್ಲಿ ಈಗ ನಿತೀಶ್ ಕುಮಾರ್ ನೇತೃತ್ವದ ಪಕ್ಷ  ತೀವ್ರ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿದೆ.

Last Updated : Jun 2, 2019, 02:43 PM IST
 ಜೆಡಿಯು ಇನ್ನೆಂದಿಗೂ ಮೋದಿ ಸಂಪುಟದಲ್ಲಿ ಭಾಗವಹಿಸುದಿಲ್ಲ, ಇದು ನಮ್ಮ ಅಂತಿಮ ನಿರ್ಧಾರ- ಕೆ.ಸಿ.ತ್ಯಾಗಿ title=
photo:ANI

ನವದೆಹಲಿ: ಪ್ರಧಾನಿ ಮೋದಿ ನೂತನ ಸಚಿವ ಸಂಪುಟದಲ್ಲಿ ಕೇವಲ ಒಂದು ಸಚಿವ ಸ್ಥಾನವನ್ನು ಜೆಡಿಯುಗೆ ನೀಡಿದ್ದರ  ಹಿನ್ನಲೆಯಲ್ಲಿ ಈಗ ನಿತೀಶ್ ಕುಮಾರ್ ನೇತೃತ್ವದ ಪಕ್ಷ  ತೀವ್ರ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿದೆ.

ಈಗ ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ " ಜೆಡಿ (ಯು) ಗೆ ನೀಡಲಾಗಿರುವ ಪ್ರಸ್ತಾಪದಿಂದಾಗಿ ಭವಿಷ್ಯದಲ್ಲಿ ಸಹ ಜೆಡಿ (ಯು) ಎನ್ಡಿಎ ನೇತೃತ್ವದ ಕೇಂದ್ರ ಸಚಿವ ಸಂಪುಟದ ಭಾಗವಾಗಿರಬಾರದು ಎಂದು ನಿರ್ಧರಿಸಿದೆ, ಇದು ನಮ್ಮ ಅಂತಿಮ ನಿರ್ಣಯವಾಗಿದೆ." ಎಂದು ಹೇಳಿದ್ದಾರೆ..

ಬಿಜೆಪಿ ನೀಡಿದ ಒಂದು ಕ್ಯಾಬಿನೆಟ್ ಸ್ಥಾನದ ಪ್ರಸ್ತಾಪವು ಪಕ್ಷದಿಂದ ಸ್ವೀಕಾರರ್ಹವಲ್ಲ, ಆದ್ದರಿಂದ ಜೆಡಿಯು ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ನೂತನ ಸಚಿವ ಸಂಪುಟ ರಚನೆಗೂ ಮುನ್ನ ಜೆಡಿಯುಗೆ ಕೇವಲ ಒಂದೇ ಸ್ಥಾನದ ಅವಕಾಶವನ್ನು ನಿಡಲಾಗಿತ್ತು .ಇದಕ್ಕೆ ತೀವ್ರ ಅಸಮಾಧಾನಗೊಂಡ ಮುಖ್ಯಮಂತ್ರಿ ನಿತೀಶ್ ಕುಮಾರ್" ಬಿಜೆಪಿ ಸಂಪುಟದಲ್ಲಿ ಜೆಡಿಯುನಿಂದ ಒಬ್ಬ ವ್ಯಕ್ತಿಯನ್ನು ಮಾತ್ರ ಬಯಸಿದ್ದಾರೆ. ಆದ್ದರಿಂದ ನಾವು ಅವರಿಗೆ ಅದರ ಅಗತ್ಯವಿಲ್ಲವೆಂದು ತಿಳಿಸಿದ್ದೇವೆ " ಎಂದು ನಿತೀಶ್ ಕುಮಾರ್ ಮೇ 30 ರಂದು ಹೇಳಿದ್ದರು. 

ಈಗ ಮುಂದೆಯೂ ಕೂಡ ಸಚಿವ ಸಂಪುಟ ಸೇರುವುದಿಲ್ಲವೆಂದು ಜೆಡಿಯು ನಿರ್ಧರಿಸದ ಬೆನ್ನಲ್ಲೇ ಈ ಬಿಕ್ಕಟ್ಟು ಮುಂಬರುವ ದಿನಗಳಲ್ಲಿ ಇನ್ನು ಅಧಿಕವಾಗಲಿದೆ ಎನ್ನಲಾಗುತ್ತದೆ.

Trending News