ಬಿಜೆಪಿ ಮೈತ್ರಿಯಲ್ಲಿಯೇ ಮುಂದುವರೆಯಲು ಜೆಡಿಯು ನಿರ್ಧಾರ

2019 ರ ಲೋಕಸಭೆ ಚುನಾವಣೆಯನ್ನು ಬಿಜೆಪಿ ಜೊತೆಯಲ್ಲೇ ಎದುರಿಸಲು ಜೆಡಿಯು ತೀರ್ಮಾನಿಸಿದೆ.

Last Updated : Jul 8, 2018, 05:40 PM IST
ಬಿಜೆಪಿ ಮೈತ್ರಿಯಲ್ಲಿಯೇ ಮುಂದುವರೆಯಲು ಜೆಡಿಯು ನಿರ್ಧಾರ title=

ನವದೆಹಲಿ: ಜೆಡಿಯು ಎಂದಿಗೂ ಎನ್ಡಿಎ ಮೈತ್ರಿಕೂಟದಿಂದ ಹೊರನಡೆಯುವುದಿಲ್ಲ ಎಂದು ಹೇಳುವ ಮೂಲಕ ಈ ಹಿಂದೆ ಇದ್ದ ಎಲ್ಲಾ ವದಂತಿಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೆರೆ ಎಳೆದಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ನವದೆಹಲಿಯಲ್ಲಿ ಭಾನುವಾರ ನಡೆದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ 2019 ರ ಚುನಾವಣೆಯನ್ನು ಬಿಜೆಪಿ ಜೊತೆಯಲ್ಲೇ ಎದುರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

2019ರ ಲೋಕಸಭೆ ಮತ್ತು 2020ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳ ಬಗ್ಗೆ ಸಭೆಯಲ್ಲಿ ಎಲ್ಲಾ ನಾಯಕರೊಂದಿಗೆ ಚರ್ಚಿಸಿದ ಬಳಿಕ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸಲು ಜೆಡಿಯು ನಿರ್ಧರಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಯು 17 ಸ್ಥಾನಗಳಲ್ಲಿ ಸ್ಪರ್ಧಿಸಲು ಜೆಡಿಯು ನಿರ್ಧರಿಸಿದ್ದು, ಉಳಿದ ಸ್ಥಾನಗಳನ್ನು ಬಿಜೆಪಿ, ಎಲ್‌ಜೆಪಿ ಮತ್ತು ಆರ್‌ಎಲ್‌ಎಸ್‌ಪಿಗೆ ಬಿಟ್ಟುಕೊಡಲು ತೀರ್ಮಾನಿಸಿದೆ. 

Trending News