ರೈತನ ಮಗಳ ಕೈಯಲ್ಲಿ ‘Aditya L1’ ಕಮಾಂಡ್: ಈಕೆ ಯಾರು? ತಿಂಗಳಿಗೆ ಪಡೆಯುವ ಸಂಬಳ ಎಷ್ಟು ಗೊತ್ತಾ?

Aditya L1 project director Nigar Shaji: 55 ವರ್ಷದ ವಿಜ್ಞಾನಿ ನಿಗರ್ ಶಾಜಿ ಅವರು ಭಾರತೀಯ ರಿಮೋಟ್ ಸೆನ್ಸಿಂಗ್, ಸಂವಹನ ಮತ್ತು ಅಂತರಗ್ರಹ ಉಪಗ್ರಹ ಕಾರ್ಯಕ್ರಮಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

Written by - Bhavishya Shetty | Last Updated : Sep 3, 2023, 01:04 PM IST
    • ಇಸ್ರೋದ ಕನಸಿನ ಯೋಜನೆ ಸೂರ್ಯ ಮಿಷನ್ ‘ಆದಿತ್ಯ ಎಲ್ 1’ ಯಶಸ್ವಿ ಉಡಾವಣೆ
    • ವಿಶೇಷವೆಂದರೆ ಈ ಸೂರ್ಯ ಮಿಷನ್‌ ಕಮಾಂಡ್ ಮಹಿಳಾ ವಿಜ್ಞಾನಿಯ ಕೈಯಲ್ಲಿದೆ
    • 55 ವರ್ಷದ ವಿಜ್ಞಾನಿ ನಿಗರ್ ಶಾಜಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ
ರೈತನ ಮಗಳ ಕೈಯಲ್ಲಿ ‘Aditya L1’ ಕಮಾಂಡ್: ಈಕೆ ಯಾರು? ತಿಂಗಳಿಗೆ ಪಡೆಯುವ ಸಂಬಳ ಎಷ್ಟು ಗೊತ್ತಾ? title=
Nigar Shaji

Aditya L1 project director Nigar Shaji: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಕನಸಿನ ಯೋಜನೆಯಾದ ಸೂರ್ಯ ಮಿಷನ್ ‘ಆದಿತ್ಯ ಎಲ್ 1’ ಅನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇಸ್ರೋ ವಿಜ್ಞಾನಿಗಳು ಮಿಷನ್‌’ಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಇನ್ನು. ವಿಶೇಷವೆಂದರೆ ಸೂರ್ಯ ಮಿಷನ್‌ ಕಮಾಂಡ್ ಮಹಿಳಾ ವಿಜ್ಞಾನಿಯ ಕೈಯಲ್ಲಿದೆ.

ಇವರ ಹೆಸರು ನಿಗರ್ ಶಾಜಿ. ತಮಿಳುನಾಡು ಮೂಲದ ನಿಗರ್ ಶಾಜಿ ಸುಮಾರು 35 ವರ್ಷಗಳಿಂದ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 55 ವರ್ಷದ ವಿಜ್ಞಾನಿ ನಿಗರ್ ಶಾಜಿ ಅವರು ಭಾರತೀಯ ರಿಮೋಟ್ ಸೆನ್ಸಿಂಗ್, ಸಂವಹನ ಮತ್ತು ಅಂತರಗ್ರಹ ಉಪಗ್ರಹ ಕಾರ್ಯಕ್ರಮಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: “ಧೋನಿ ಅಲ್ಲ, ಈತನೇ ನನ್ನ ವೃತ್ತಿಜೀವನದ ಫೇವರಿಟ್ ಕ್ಯಾಪ್ಟನ್”: ವೇಗಿ ಇಶಾಂತ್ ಶರ್ಮಾ

ನಿಗರ್ ಶಾಜಿ ಯಾರು?

ನಿಗರ್ ಶಾಜಿ ಚೆನ್ನೈನಿಂದ 55 ಕಿಲೋಮೀಟರ್ ದೂರದಲ್ಲಿರುವ ತೆಂಕಶಿ ನಿವಾಸಿ. ಚಂದ್ರಯಾನದ ಮೂರು ಮಿಷನ್‌'ಗಳಿಗೆ ಪ್ರಮುಖ ಕೊಡುಗೆ ನೀಡಿದ ತಮಿಳುನಾಡಿನ ವಿಜ್ಞಾನಿಗಳ ಪಟ್ಟಿಯಲ್ಲಿ ನಿಗರ್ ಶಾಜಿ ಕೂಡ ಸೇರಿದ್ದಾರೆ.

ನಿಗರ್ ಶಾಜಿ ಅವರು ರಿಸೋರ್ಸ್‌ ಸ್ಯಾಟ್-2A ಯ ಸಹಾಯಕ ಯೋಜನಾ ನಿರ್ದೇಶಕರಾಗಿದ್ದಾರೆ. ಇದು ರಾಷ್ಟ್ರೀಯ ಸಂಪನ್ಮೂಲ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹವಾಗಿದೆ. ಅವರು ಇಮೇಜ್ ಕಂಪ್ರೆಷನ್, ಸಿಸ್ಟಮ್ ಎಂಜಿನಿಯರಿಂಗ್ ಮತ್ತು ಇತರ ವಿಷಯಗಳ ಕುರಿತು ಅನೇಕ ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ.

ನಿಗರ್ ಶಾಜಿ ಶಿಕ್ಷಣ:

ನಿಗರ್ ಶಾಜಿ ಮಧುರೈನ ಕಾಮರಾಜ್ ವಿಶ್ವವಿದ್ಯಾಲಯದಿಂದ ಬಿಇ ಪದವಿ ಪಡೆದರು. ಆ ನಂತರ ರಾಂಚಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದವರು. ಇದೀಗ ಬೆಂಗಳೂರಿನ ಇಸ್ರೋದ ಉಪಗ್ರಹ ಟೆಲಿಮೆಟ್ರಿ ಕೇಂದ್ರದ ಮುಖ್ಯಸ್ಥರೂ ಆಗಿದ್ದಾರೆ. ಗಮನಾರ್ಹವಾಗಿ, ಸೂರ್ಯ ಮಿಷನ್ ಆದಿತ್ಯ L1 ನಲ್ಲಿ ನಿಗರ್ ಶಾಜಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಆಟಗಾರ ಯಾರು ಗೊತ್ತಾ?

ಇನ್ನು ISRO ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌’ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುವ ವ್ಯಕ್ತಿಯು, ವರ್ಷಕ್ಕೆ ₹ 3.9 ಲಕ್ಷ ಸಂಬಳ ಪಡೆಯುತ್ತಾರೆ. ಅಗ್ರ 1% ಜನರು ವರ್ಷಕ್ಕೆ ₹19.57 ಲಕ್ಷಕ್ಕಿಂತ ಹೆಚ್ಚು ಗಳಿಸುತ್ತಾರೆ ಎಂದು ಕೆಲ ಮೂಲಗಳು ಹೇಳುತ್ತವೆ, ಇನ್ನು ನಿಗರ್ ಶಾಜಿ ಸಂಬಳದ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News