ಅಪ್ರಾಪ್ತ ಬುಡಕಟ್ಟು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ,ಆಕೆ ತಲೆ ಬೋಳಿಸಿದ ಗ್ರಾಮಸ್ಥರು

    

webmaster A | Updated: Feb 12, 2018 , 08:07 PM IST
ಅಪ್ರಾಪ್ತ ಬುಡಕಟ್ಟು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ,ಆಕೆ ತಲೆ ಬೋಳಿಸಿದ ಗ್ರಾಮಸ್ಥರು
ಸಾಂದರ್ಭಿಕ ಚಿತ್ರ

ನವದೆಹಲಿ: ಛತ್ತಿಸಗಡ್ ನ ಕವರ್ಧಾ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ನಂತರ ಸಮಾಜದ ಆದೇಶದಂತೆ ಅವಳ ತಲೆಯನ್ನು ಬೋಳಿಸಿರುವ ವಿಚಿತ್ರ ಘಟನೆ ನಡೆದಿದೆ. ಆಗಲೇ ಲೈಂಗಿಕ ಕಿರುಕುಳಕ್ಕೊಳಗಾಗಿ ದುಃಖಿತಳಾಗಿದ್ದ ಈ ಹುಡುಗಿಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಈ ಘಟನೆ ನಡೆದಾಗ ಗ್ರಾಮದ ಯಾವುದೇ ವ್ಯಕ್ತಿಯು ಈ ಹುಡುಗಿಯ ರಕ್ಷಣೆಗೆ ಬಂದಿಲ್ಲ ಮತ್ತು ಈ ಕುರಿತಾಗಿ ಪೊಲೀಸರಿಗೆ ಕೂಡಾ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಲಾಗಿದೆ. ಈ ಬಾಲಕಿಯ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದು, ಕುಡಿದ ಮತ್ತಿನಲ್ಲಿ ಯುವಕರು ಈ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಘಟನೆಯನ್ನು ಗ್ರಾಮಸ್ಥರು ಕೂಡ ವೀಕ್ಷಿಸಿದ್ದಾರೆ. ತದನಂತರ ಆ ಅಪ್ರಾಪ್ತ ಬಾಲಕಿ ಮತ್ತು ಆರೋಪಿಗಳಿಗೆ ಗ್ರಾಮಸ್ಥರು ದಂಡ ವಿಧಿಸಿದ್ದಾರೆ.

ಅಚ್ಚರಿಯೆಂದರೆ ಆ ಬಾಲಕಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ದಂಡ ಪಾವತಿಸಿದ ನಂತರ ಮುಕ್ತಗೊಳಿಸಲಾಗಿದೆ. ಆದರೆ  ಅಲ್ಲಿನ ಗ್ರಾಮಸ್ತರು ಊರಿನ ಎಲ್ಲ  ಸದಸ್ಯರಿಗೆ ಆಕೆಯ ಕುಟುಂಬವು ಮಟನ್ ಮತ್ತು ಆಲ್ಕೋಹಾಲನ್ನು ನೀಡಬೇಕೆಂದು ಆಜ್ಞೆಯನ್ನು ಹೊರಡಿಸಿದ್ದಾರೆ.ಈ ಘಟನೆ ನಂತರ ಆ ಬಾಲಕಿಯ ಇಡಿ ಕುಟುಂಬವು ಭಯದಿಂದ ಜೀವಿಸುತ್ತಿದೆ, ಅಲ್ಲದೆ ಆ ಹುಡುಗಿ ಮನೆಯಿಂದ ಹೊರಗಡೆ ಹೋಗಿಲ್ಲ ಎಂದು ತಿಳಿದುಬಂದಿದೆ. ಈ ಘಟನೆಯ ಕುರಿತಾಗಿ ಮಾಧ್ಯಮಗಳಲ್ಲಿ  ವರದಿಯಾದ ನಂತರ ಅಪರಾಧಿಗಳ ವಿರುದ್ಧ ಅವರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.