ವಯಾನಾಡ್​ನಲ್ಲಿ ಎನ್​ಡಿಎ ಅಭ್ಯರ್ಥಿಯಿಂದ ಮರು ಮತದಾನಕ್ಕೆ ಆಗ್ರಹ

ತುಷಾರ್ ವೆಲ್ಲಪ್ಪಲ್ಲಿ ಅವರು ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ಎನ್ಡಿಪಿ) ಯ ಅಂಗವಾದ ಭಾರತ್ ಧರ್ಮ ಜನ ಸೇನೆಯ (ಬಿ.ಡಿ.ಜೆ.ಎಸ್) ಮುಖ್ಯಸ್ಥ.

Last Updated : Apr 23, 2019, 12:21 PM IST
ವಯಾನಾಡ್​ನಲ್ಲಿ ಎನ್​ಡಿಎ ಅಭ್ಯರ್ಥಿಯಿಂದ ಮರು ಮತದಾನಕ್ಕೆ ಆಗ್ರಹ  title=
Pic Courtesy: ANI

ವಯಾನಾಡ್​:  ವಯಾನಾಡ್​ನಲ್ಲಿ ಮಂಗಳವಾರ ನಡೆಯುತ್ತಿರುವ ಮತದಾನದಲ್ಲಿ  ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಕ್ಷೇತ್ರದಲ್ಲಿ ಮರು ಮತದಾನ ನಡೆಯಬೇಕು ಎಂದು ವಯಾನಾಡ್​ ಲೋಕಸಭಾ ಕ್ಷೇತ್ರದಿಂದ ಎನ್​ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತುಷಾರ್ ವೆಲ್ಲಪ್ಪಲ್ಲಿ ಆಗ್ರಹಿಸಿದ್ದಾರೆ.

ಮೂಪ್ಪಾನಾಡ್ ಪಂಚಾಯತ್ನಲ್ಲಿರುವ ಅರಮಟ್ಟದ ಸಿಎಂಎಸ್ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 79ರಲ್ಲಿ, ಮತ ಚಲಾಯಿಸಲು ಎರಡು ಬಾರಿ ಬಟನ್ ಒತ್ತಿದರೂ ಮತ ಚಲಾವಣೆಯಾಗಿಲ್ಲ. ದಯವಿಟ್ಟು ಸೂಕ್ತ ಕ್ರಮಗಳನ್ನು ಕೈಗೊಂಡು ಈ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಅನುವು ಮಾಡಿಕೊಡಬೇಕು ಎಂದು ಮುಖ್ಯ ಚುನಾವಣಾ ಅಧಿಕಾರಿ ಸುನೀಲ್ ಕುಮಾರ್ ಜಿ ಅವರಿಗೆ ಬರಿದಿರುವ ಪತ್ರದಲ್ಲಿ ವೆಲ್ಲಪ್ಪಲ್ಲಿ ಮನವಿ ಮಾಡಿದ್ದಾರೆ.

ತುಷಾರ್ ವೆಲ್ಲಪ್ಪಲ್ಲಿ ಅವರು ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ಎನ್ಡಿಪಿ) ಯ ಅಂಗವಾದ ಭಾರತ್ ಧರ್ಮ ಜನ ಸೇನೆಯ (ಬಿ.ಡಿ.ಜೆ.ಎಸ್) ಮುಖ್ಯಸ್ಥ.

ಕೇರಳದ 20 ಲೋಕಸಭಾ ಕ್ಷೇತ್ರಗಳಿಂದ ಒಟ್ಟು 227 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಣದಲ್ಲಿದ್ದು ಎಲ್ಲರ ಗಮನ ಸೆಳೆದಿದ್ದಾರೆ. 
 

Trending News