2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಲ್ಲ ಸ್ಪಷ್ಟ ಬಹುಮತ - ಜೀ 24 ತಾಸ್ ಸಮೀಕ್ಷೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ಜೀ 24 ತಾಸ್ ಚಾನಲ್ ತನ್ನ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ  ತಿಳಿಸಿದೆ. ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು ಕೂಡ ಬಹುಮತದ ಕೊರತೆಯನ್ನು ಅನುಭವಿಸಲಿದೆ ಎಂದು ಸಮೀಕ್ಷೆ ಹೇಳಿದೆ.

Last Updated : Mar 10, 2019, 11:37 AM IST
2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಲ್ಲ ಸ್ಪಷ್ಟ ಬಹುಮತ - ಜೀ 24 ತಾಸ್ ಸಮೀಕ್ಷೆ  title=

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ಜೀ 24 ತಾಸ್ ಚಾನಲ್ ತನ್ನ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ  ತಿಳಿಸಿದೆ. ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು ಕೂಡ ಬಹುಮತದ ಕೊರತೆಯನ್ನು ಅನುಭವಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ 264 ಸ್ಥಾನಗಳನ್ನು ಗೆಲ್ಲಲಿದೆ.ಕಾಂಗ್ರೆಸ್ ನೇತೃತ್ವದ ಯುಪಿಎ 165 ಸ್ಥಾನಗಳನ್ನು ಗಳಿಸಲಿದೆ.ಇನ್ನೊಂದೆಡೆ ಇತರ ಪಕ್ಷಗಳೆಲ್ಲ ಸೇರಿ 114 ಸ್ಥಾನಗಳನ್ನು ಗೆಲ್ಲಲಿದೆ ಎಂದು ಜೀ ಸಮೂಹದ ಮರಾಠಿ ಚಾನಲ್ ಜೀ 24 ತಾಸ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹೇಳಿದೆ.

ಕೇಂದ್ರದಲ್ಲಿ ಸರ್ಕಾರವನ್ನು ರಚಿಸಬೇಕಾದಲ್ಲಿ ಮ್ಯಾಜಿಕ್ ನಂಬರ್ 272 ಅಗತ್ಯವಿದೆ.ಈಗ ಉಭಯ ಬಣಗಳು ಕೂಡ ಬಹುಮತ ಸಾಧಿಸದಿರುವ ಕಾರಣಕ್ಕೆ ಪ್ರಾದೇಶಿಕ ಪಕ್ಷಗಳು ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಮೂಲಕ ತಿಳಿಯಬಹುದಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆಯ ಮೈತ್ರಿ 48 ಲೋಕಸಭಾ ಕ್ಷೇತ್ರಗಳಲ್ಲಿ 30 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.ಬಿಹಾರ, ಉತ್ತರ ಪ್ರದೇಶ, ಬಿಹಾರ, ಹರಿಯಾಣ ಮತ್ತು ಗುಜರಾತ್ ನಲ್ಲಿ ಬಿಜೆಪಿಯು ಸಂಪೂರ್ಣ ಹಿಡಿತ ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದೇ ವೇಳೆ ಕಾಂಗ್ರೆಸ್, ಛತ್ತೀಸ್ ಗಡ್, ಪಂಜಾಬ್ ಮತ್ತು ಕರ್ನಾಟಕದಲ್ಲಿ ಜಯಶಾಲಿಯಾಗಲಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಪಾಕಿಸ್ತಾನದ ಭಯೋತ್ಪಾದನಾ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯು (ಐಎಎಫ್) ದಾಳಿ ಮಾಡಿರುವುದು ಸದ್ಯದ ಕೇಂದ್ರ ಸರ್ಕಾರಕ್ಕೆ ವರವಾಗಿ ಪರಿಣಮಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯವಾರು ಪಕ್ಷಗಳು ಗೆಲ್ಲುವ ಸಾಧ್ಯತೆ ಪಟ್ಟಿ 

ಉತ್ತರ ಪ್ರದೇಶ: 80 ಸ್ಥಾನಗಳು
ಬಿಜೆಪಿ - 50
ಕಾಂಗ್ರೆಸ್ - 5
ಎಸ್ಪಿ-ಬಿಎಸ್ಪಿ - 25

ಬಿಹಾರ: 40 ಸ್ಥಾನಗಳು
ಎನ್ಡಿಎ - 28
ಕಾಂಗ್ರೆಸ್ - 10
ಇತರೆ - 2

ಜಾರ್ಖಂಡ್: 14 ಸ್ಥಾನಗಳು
ಬಿಜೆಪಿ - 7
ಕಾಂಗ್ರೆಸ್ - 7

ಛತ್ತೀಸ್ ಗಡ್: 11 ಸ್ಥಾನಗಳು
ಬಿಜೆಪಿ - 4
ಕಾಂಗ್ರೆಸ್ - 7

ಪಂಜಾಬ್: 13 ಸ್ಥಾನಗಳು
ಬಿಜೆಪಿ - 1
ಕಾಂಗ್ರೆಸ್ - 10
ಇತರೆ - 2

ಹರಿಯಾಣ: 10 ಸ್ಥಾನಗಳು
ಬಿಜೆಪಿ - 6
ಕಾಂಗ್ರೆಸ್ - 3
ಇತರೆ - 1

ಗುಜರಾತ್: 26 ಸ್ಥಾನಗಳು
ಬಿಜೆಪಿ - 24
ಕಾಂಗ್ರೆಸ್ - 2

ಮಹಾರಾಷ್ಟ್ರ: 48 ಸ್ಥಾನಗಳು
ಬಿಜೆಪಿ + ಶಿವಸೇನೆ + ಇತರರು - 30
ಕಾಂಗ್ರೆಸ್ + ಎನ್ಸಿಪಿ + ಇತರೆ - 17

(ಬಿಜೆಪಿ - 16, ಶಿವಸೇನೆ - 14, ಎನ್ಸಿಪಿ - 10, ಕಾಂಗ್ರೆಸ್ - 7, ಇತರರು - 1)

ಕರ್ನಾಟಕ: 28 ಸ್ಥಾನಗಳು
ಬಿಜೆಪಿ - 8
ಕಾಂಗ್ರೆಸ್ - 20

ಜಮ್ಮು ಮತ್ತು ಕಾಶ್ಮೀರ: 6 ಸ್ಥಾನಗಳು
ಬಿಜೆಪಿ - 3
ಕಾಂಗ್ರೆಸ್ - 0
ನ್ಯಾಷನಲ್ ಕಾನ್ಫರನ್ಸ್ - 2
ಪಿಡಿಪಿ - 1

 

Trending News