ಬಿಹಾರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ರ್ಯಾಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಭಾನುವಾರದಂದು ಬಿಹಾರದಲ್ಲಿ ಎನ್ ಡಿ ಎ ಒಕ್ಕೂಟದ ಲೋಕಸಭಾ ಚುನಾವಣಾ ಪ್ರಚಾರ ರ್ಯಾಲಿಗೆ ಚಾಲನೆ ನೀಡಿದರು. 

Last Updated : Mar 3, 2019, 01:53 PM IST
ಬಿಹಾರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ರ್ಯಾಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ  title=
photo:ANI

ಪಾಟ್ನಾ: ಪ್ರಧಾನಿ ಮೋದಿ ಭಾನುವಾರದಂದು ಬಿಹಾರದಲ್ಲಿ ಎನ್ ಡಿ ಎ ಒಕ್ಕೂಟದ ಲೋಕಸಭಾ ಚುನಾವಣಾ ಪ್ರಚಾರ ರ್ಯಾಲಿಗೆ ಚಾಲನೆ ನೀಡಿದರು. 

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸಂಕಲ್ಪ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಜೊತೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್  ಗಾಂಧಿ ಮೈದಾನದಲ್ಲಿನ ಈ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡರು.

ರ್ಯಾಲಿಯಲ್ಲಿ ಪುಲ್ವಾಮಾ ಹುತಾತಮರಿಗೆ ಗೌರವ ಸಲ್ಲಿಸುವ ಮೂಲಕ ಮಾತನಾಡಿದ ಪ್ರಧಾನಿ ಮೋದಿ "ಪುಲ್ವಾಮಾ ಹುತಾತ್ಮರನ್ನು ನಾನು ವಂದಿಸುತ್ತೇನೆ, ಇಡೀ ರಾಷ್ಟ್ರವು ಸೈನಿಕರ ಕುಟುಂಬಗಳೊಂದಿಗೆ ಇದೆ ನಿಂತಿದೆ" ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಚೌಕಿದಾರನನ್ನು ನಿಂದಿಸುವ ಸ್ಪರ್ಧೆ ನಡೆಯುತ್ತಿದೆ, ಆದರೆ ನೀವು ಈ ಚೌಕಿದಾರ ನಿಮ್ಮವನು ಎನ್ನುವ ಎಚ್ಚರಿಕೆ ಯಾವಾಗಲು ಇರಬೇಕು ಎಂದು ಮೋದಿ ಹೇಳಿದರು. 

"ಬಿಹಾರದ ಜನರಿಗೆ ಮೇವಿನ ಹೆಸರಿನಲ್ಲಿ ಏನಾಯಿತೆಂಬುದರ ಬಗ್ಗೆ ತಿಳಿದಿರುತ್ತಾರೆ, ಹಲವು ದಶಕಗಳಿಂದ ದೇಶದಲ್ಲಿ ಸಾಮಾನ್ಯವಾಗಿದ್ದ ಅಭ್ಯಾಸವಾಗಿದ್ದ ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಸಂಸ್ಕೃತಿಯನ್ನು ಕೊನೆಗೊಳಿಸಲು ಧೈರ್ಯವನ್ನು ನಾವು ಹೊಂದಿದ್ದೇವೆ" ಎಂದು ಅವರು ಹೇಳಿದರು.

ಇದೇ ವೇಳೆ ರ್ಯಾಲಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್ ಕೇಂದ್ರದ ಮುಂದಿನ ಸರಕಾರ ಮೋದಿಯ ನಾಯಕತ್ವದಲ್ಲಿ ರಚನೆಯಾಗಲಿದೆ ಎಂದು ಭರವಸೆ ನೀಡಿದರು. ಬಿಹಾರದಲ್ಲಿ ಎನ್ಡಿಎ 40 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Trending News