ದೆಹಲಿ-ಎನ್‌ಸಿಆರ್‌ನಲ್ಲಿ ನವೆಂಬರ್ 30ರವರೆಗೆ ಪಟಾಕಿ ನಿಷೇಧಿಸಿ NGT ಆದೇಶ

ದೆಹಲಿ-ಎನ್‌ಸಿಆರ್‌ನಲ್ಲಿ ನವೆಂಬರ್ 30 ರವರೆಗೆ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಎನ್‌ಜಿಟಿ ಆದೇಶ ಹೋರಡಿಸಿದೆ. ನ್ಯಾಯಾಧಿಕರಣವು ಗಾಳಿಯ ಗುಣಮಟ್ಟ ಉತ್ತಮವಾಗಿರುವ ರಾಜ್ಯಗಳಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದೆ.

Last Updated : Nov 9, 2020, 12:25 PM IST
  • COVID-19 ಉಲ್ಬಣಗೊಳ್ಳುವ ಸಾಧ್ಯತೆಯ ದೃಷ್ಟಿಯಿಂದ ಎಲ್ಲಾ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು - ನೋಟಿಸ್
  • ರಾಜ್ಯಗಳಿಗೆ ಎನ್‌ಜಿಟಿ ನೋಟಿಸ್
  • ಕೇಜ್ರಿವಾಲ್ ಸರ್ಕಾರ ಈಗಾಗಲೇ ದೆಹಲಿಯಲ್ಲಿ ಪಟಾಕಿ ನಿಷೇಧ ಹೇರಿದೆ
ದೆಹಲಿ-ಎನ್‌ಸಿಆರ್‌ನಲ್ಲಿ ನವೆಂಬರ್ 30ರವರೆಗೆ ಪಟಾಕಿ ನಿಷೇಧಿಸಿ NGT ಆದೇಶ title=

ನವದೆಹಲಿ:  ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸೋಮವಾರ ದೆಹಲಿ-ಎನ್‌ಸಿಆರ್‌ನಲ್ಲಿ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 30ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ ಪಟಾಕಿಗಳನ್ನು ಮಾರಾಟ ಮಾಡಲು ಅಥವಾ ಬಳಸಲು ಸಂಪೂರ್ಣ ನಿಷೇಧ ಹೇರಿ ಆದೇಶ ಹೋರಡಿಸಿದೆ.  

ತೀರ್ಪು ಪ್ರಕಟಿಸಿದ ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠವು, ಗಾಳಿಯ ಗುಣಮಟ್ಟ ಕಳಪೆಯಾಗಿರುವ ದೇಶದ ಎಲ್ಲಾ ನಗರಗಳು ಮತ್ತು ಪಟ್ಟಣಗಳಿಗೆ ಈ ಆದೇಶ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಆದರೆ ಗಾಳಿಯ ಗುಣಮಟ್ಟ ಉತ್ತಮವಾಗಿರುವ ರಾಜ್ಯಗಳಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಾಧಿಕರಣವು ಸ್ಪಷ್ಟಪಡಿಸಿದೆ.

ಮಾಲಿನ್ಯದಿಂದ ರಕ್ಷಣೆ ಪಡೆಯಲು ಈ ಸಿಂಪಲ್ ಟಿಪ್ಸ್ ಅನುಸರಿಸಿ

ಗಾಳಿಯ ಗುಣಮಟ್ಟ 'ಮಧ್ಯಮ' ಅಥವಾ ಅದಕ್ಕಿಂತ ಕಡಿಮೆ ಇರುವ ನಗರಗಳು / ಪಟ್ಟಣಗಳು, ಕೇವಲ ಹಸಿರು ಕ್ರ್ಯಾಕರ್‌ಗಳನ್ನು (Firecrackers) ಮಾತ್ರ ಮಾರಾಟ ಮಾಡಬೇಕು ಮತ್ತು ದೀಪಾವಳಿ, ಛಾತ್, ಹೊಸ ವರ್ಷ / ಕ್ರಿಸ್‌ಮಸ್ ಈವ್ ಮುಂತಾದ ಹಬ್ಬಗಳಲ್ಲಿ ರಾಜ್ಯ ಸರ್ಕಾರಗಳು ನಿಗದಿಗೊಳಿಸಿರುವ ಸಮಯದಲ್ಲಿ ಕೇವಲ ಎರಡು ಗಂಟೆಗಳ ಕಾಲ ಮಾತ್ರ ಪಟಾಕಿ ಹೊಡೆಯಬಹುದು ಎಂದು ಎನ್‌ಜಿಟಿ ಹೇಳಿದೆ. 

ಇತರ ಸ್ಥಳಗಳಲ್ಲಿ ನಿಷೇಧ / ನಿರ್ಬಂಧಗಳು ಅಧಿಕಾರಿಗಳಿಗೆ ಐಚ್ಛಿಕವಾಗಿರುತ್ತವೆ ಎಂದು ನ್ಯಾಯಪೀಠ ಹೇಳಿದೆ.

COVID-19 ಉಲ್ಬಣಗೊಳ್ಳುವ ಸಾಧ್ಯತೆಯ ದೃಷ್ಟಿಯಿಂದ ಎಲ್ಲಾ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮಂಡಳಿಯು' ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.

ನಗರ ವಾಯುಮಾಲಿನ್ಯದಿಂದ ಕೊರೊನಾ ಇನ್ನೂ ಅಪಾಯಕಾರಿಯಾಗಲಿದೆ...!

ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ನವೆಂಬರ್ 30ರವರೆಗೆ ಪಟಾಕಿ ಬಳಕೆಯನ್ನು ನಿಷೇಧಿಸಬೇಕೆ ಎಂದು ಎನ್‌ಜಿಟಿ ಈ ಹಿಂದೆ ನವೆಂಬರ್ 2 ರಂದು ಪರಿಸರ ಮತ್ತು ಅರಣ್ಯ ಸಚಿವಾಲಯ (ಎಂಒಇಎಫ್) ಮತ್ತು ನಾಲ್ಕು ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿತ್ತು. 

Trending News