ಬೋಹ್ರಾ ಮುಸ್ಲಿಮರಲ್ಲಿನ ಬಾಲಕಿಯರ ಜನನಾಂಗ ಊನಗೊಳಿಸುವಿಕೆ ಪದ್ದತಿ ಪ್ರಶ್ನಿಸಿ ಪಿಐಎಲ್

ದಾವೂದಿ ಬೋಹ್ರಾ ಮುಸ್ಲಿಮರಲ್ಲಿ ಸ್ತ್ರೀ ಜನನಾಂಗದ ಊನಗೊಳಿಸುವಿಕೆಯ ಅಭ್ಯಾಸವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ 5 ನ್ಯಾಯಾಧೀಶರನ್ನೊಳಗೊಂಡ ಸಂವಿಧಾನದ ಪೀಠಕ್ಕೆ ಶಿಫಾರಸ್ಸು ಮಾಡಿದೆ. 

Last Updated : Sep 24, 2018, 01:23 PM IST
ಬೋಹ್ರಾ ಮುಸ್ಲಿಮರಲ್ಲಿನ ಬಾಲಕಿಯರ ಜನನಾಂಗ ಊನಗೊಳಿಸುವಿಕೆ ಪದ್ದತಿ ಪ್ರಶ್ನಿಸಿ ಪಿಐಎಲ್ title=

ನವದೆಹಲಿ: ದಾವೂದಿ ಬೋಹ್ರಾ ಮುಸ್ಲಿಮರಲ್ಲಿ ಸ್ತ್ರೀ ಜನನಾಂಗದ ಊನಗೊಳಿಸುವಿಕೆಯ ಅಭ್ಯಾಸವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ 5 ನ್ಯಾಯಾಧೀಶರನ್ನೊಳಗೊಂಡ ಸಂವಿಧಾನದ ಪೀಠಕ್ಕೆ ಶಿಫಾರಸ್ಸು ಮಾಡಿದೆ. 

ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಅಪ್ರಾಪ್ತ ಬಾಲಕಿಯರ ಜನನಾಂಗದ ಊನಗೊಳಿಸುವಿಕೆಯ (ಎಫ್ಜಿಎಂ) ಅಭ್ಯಾಸವನ್ನು ಪ್ರಶ್ನಿಸಿ ದೆಹಲಿ ಮೂಲದ ವಕೀಲರು ಸಲ್ಲಿಸಿದ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡರನ್ನು ಒಳಗೊಂಡ ಪೀಠವು ವಿಚಾರಣೆ ನಡೆಸಿತ್ತು ಈಗ ಅದನ್ನು ಸಂವಿಧಾನ ಪೀಠಕ್ಕೆ ಹಸ್ತಾಂತರಿಸಲಾಗಿದೆ.

ಸ್ತ್ರೀ ಜನನಾಂಗದ ಊನಗೊಳಿಸುವಿಕೆ ಪದ್ದತಿಯನ್ನು ಅಪ್ರಾಪ್ತ ಬಾಲಕಿಯರ ಮೇಲೆ (ಅವರು ಐದು ವರ್ಷಗಳೊಳಗೆ ಮತ್ತು ಅವರು ಪ್ರೌಢಾವಸ್ಥೆಯನ್ನು ತಲುಪುವ ಮೊದಲು) ನಡೆಸುತ್ತಾರೆ. ಈ ಪದ್ಧತಿಯು ವಿಶ್ವ ಸಂಸ್ಥೆಯ ಮಕ್ಕಳ ಮತ್ತು ಮಾನವ  ಹಕ್ಕುಗಳ ಘೋಷಣೆಯ ವಿರುದ್ದವಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಈ ಪದ್ದತಿಯು ಹೆಣ್ಣು ಮಗುವಿನ ದೇಹವನ್ನು ಶಾಶ್ವತವಾಗಿ ವಿರೂಪಗೊಳಿಸಲಿದೆ ಎಂದು ವಾದಿಸಲಾಗಿದೆ.

ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಸದಸ್ಯರು ಈ ಮೊದಲು ದಾವೋದಿ ಬೊಹ್ರಾ ಸಮುದಾಯ ಸೇರಿದಂತೆ ಕೆಲವು ಇಸ್ಲಾಂ ಧರ್ಮಗಳ ಪಂಗಡಗಳು ಸ್ತ್ರೀ ಸುನತಿಯನ್ನು ಆಚರಿಸುತ್ತವೆ ಎಂದು ತಿಳಿಸಿದರು.

Trending News