Bhagwant Mann Oath : ಪಂಜಾಬ್‌ನ 17ನೇ 'ಸಿಎಂ' ಆಗಿ ಪ್ರಮಾಣ ವಚನ ಸ್ವೀಕರಿಸಿದ ಭಗವಂತ್ ಮಾನ್!

ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಪಂಜಾಬ್ ಸಹ-ಪ್ರಭಾರಿ ರಾಘವ್ ಚಡ್ಡಾ ಅವರು ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Written by - Channabasava A Kashinakunti | Last Updated : Mar 16, 2022, 03:12 PM IST
  • ಪಂಜಾಬ್ ನ 17ನೇ ಸಿಎಂ ಭಗವಂತ್ ಮಾನ್ ಪ್ರಮಾಣ ವಚನ
  • ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್
  • ಪಂಜಾಬ್ ಚುನಾವಣೆಯಲ್ಲಿ 92 ಸ್ಥಾನ ಗೆದ್ದ ಆಮ್ ಆದ್ಮಿ ಪಕ್ಷ
Bhagwant Mann Oath : ಪಂಜಾಬ್‌ನ 17ನೇ 'ಸಿಎಂ' ಆಗಿ ಪ್ರಮಾಣ ವಚನ ಸ್ವೀಕರಿಸಿದ ಭಗವಂತ್ ಮಾನ್! title=

ಚಂಡೀಗಢ : ಪಂಜಾಬ್‌ನ 17ನೇ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಭಗವಂತ್ ಮಾನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಪಂಜಾಬ್ ಸಹ-ಪ್ರಭಾರಿ ರಾಘವ್ ಚಡ್ಡಾ ಅವರು ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪಂಜಾಬ್ ಚುನಾವಣೆಯಲ್ಲಿ 92 ಸ್ಥಾನ ಗೆದ್ದ AAP 

ಪಂಜಾಬ್ ವಿಧಾನಸಭೆ ಚುನಾವಣೆ 2022(Punjab Election 2022) ರಲ್ಲಿ, ಆಮ್ ಆದ್ಮಿ ಪಕ್ಷವು ದೊಡ್ಡ ಗೆಲುವು ಸಾಧಿಸಿತು ಮತ್ತು ಮೂರನೇ ಎರಡರಷ್ಟು ಬಹುಮತವನ್ನು ಪಡೆಯಿತು. ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಫಲಿತಾಂಶಗಳ ಪ್ರಕಾರ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (AAP) 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದಿದೆ, ಆದರೆ ಕಾಂಗ್ರೆಸ್ ಕೇವಲ 18 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಶಿರೋಮಣಿ ಅಕಾಲಿದಳ (SAD) ಮೂರು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡರೆ, ಬಿಎಸ್‌ಪಿ ಒಂದು ಸ್ಥಾನ ಮತ್ತು ಸ್ವತಂತ್ರರು ಸಹ ಒಂದು ಸ್ಥಾನವನ್ನು ಗೆದ್ದಿದ್ದಾರೆ.

ಇದನ್ನೂ ಓದಿ : Corona Vaccination For Children: 12-14 ವರ್ಷದ ಮಕ್ಕಳ ಲಸಿಕೆಗಾಗಿ ಈ ರೀತಿ ನೋಂದಾಯಿಸಿ

ಹಾಸ್ಯನಟನಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಭಗವಂತ್ ಮಾನ್ 

ಭಗವಂತ್ ಮಾನ್(Bhagwant Mann) ಅವರ ವೃತ್ತಿಜೀವನವು ಹಾಸ್ಯನಟನಾಗಿ ಪ್ರಾರಂಭಿಸಿದರು. ಅವರು 2008 ರಲ್ಲಿ 
ಕಾಮಿಡಿಯನ್ ಕಪಿಲ್ ಶರ್ಮಾ ಜೊತೆ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ಟಿವಿ ಶೋನಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಿಂದ ಭಗವಂತ್ ಮಾನ್ ಸಾಕಷ್ಟು ಜನಪ್ರಿಯತೆ ಪಡೆದರು. ಭಗವಂತ್ ಹಾಸ್ಯದ ಜೊತೆಗೆ ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಕಾರಣ ಸಿನಿ ರಂಗಕ್ಕೆ ಎಂಟ್ರಿ ನೀಡಿದರು. ‘ಕಚಾರಿ’ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಅವರು 12ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಪಂಜಾಬ್ ಪೀಪಲ್ಸ್ ಪಾರ್ಟಿಯಿಂದ ರಾಜಕೀಯ ಜೀವನ ಆರಂಭ

ಪ್ರಕಾಶ್ ಸಿಂಗ್ ಬಾದಲ್(Parkash Singh Badal)ಅವರ ಸೋದರಳಿಯ ಮತ್ತು ಆಗಿನ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಮಾರ್ಚ್ 2011 ರಲ್ಲಿ ಪಂಜಾಬ್‌ನಲ್ಲಿ ಪೀಪಲ್ಸ್ ಪಾರ್ಟಿಯನ್ನು ಸ್ಥಾಪಿಸಿದಾಗ, ಭಗವಂತ್ ಮಾನ್ ಕೂಡ ರಾಜಕೀಯಕ್ಕೆ ಧುಮುಕಿದರು ಮತ್ತು ಪಿಪಿಪಿಯ ಸ್ಥಾಪಕ ನಾಯಕರಲ್ಲಿ ಒಬ್ಬರಾದರು. ಫೆಬ್ರವರಿ 2012 ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ, ಭಗವಂತ್ ಮಾನ್ ಲೆಹ್ರಗಾಗಾ ಕ್ಷೇತ್ರದಿಂದ PPP ಅಭ್ಯರ್ಥಿಯಾಗಿ ಸ್ಪರ್ಧಿಸಿದರು, ಆದರೆ ಸೋತರು.

ಆಮ್ ಆದ್ಮಿ ಪಕ್ಷ ಸೇರಿದ ಭಗವಂತ್ ಮಾನ್ 

ವಿಧಾನಪರಿಷತ್ ಚುನಾವಣೆಯಲ್ಲಿ ಪೀಪಲ್ಸ್ ಪಾರ್ಟಿಗೆ ಒಂದೇ ಒಂದು ಸ್ಥಾನ ಸಿಗಲಿಲ್ಲ, ನಂತರ ಮನ್‌ಪ್ರೀತ್ ಸಿಂಗ್ ಬಾದಲ್ ಕಾಂಗ್ರೆಸ್(Congress) ಸೇರಲು ತಯಾರಿ ಆರಂಭಿಸಿದರು. ಮತ್ತೊಂದೆಡೆ, ಭಗವಂತ್ ಮಾನ್ ಕಾಂಗ್ರೆಸ್ ಸೇರುವ ಬದಲು ವಿಭಿನ್ನ ಮಾರ್ಗವನ್ನು ಆರಿಸಿಕೊಂಡರು ಮತ್ತು 2014 ರಲ್ಲಿ ಆಮ್ ಆದ್ಮಿ ಪಕ್ಷ (AAP) ಗೆ ಸೇರಿದರು.

ಇದನ್ನೂ ಓದಿ : Zee Digital:ಮೂರು ವರ್ಷಗಳಲ್ಲಿ Zee ಡಿಜಿಟಲ್‌ನಲ್ಲಿ 1 ಬಿಲಿಯನ್ ಬಳಕೆದಾರರು! ಡಾ.ಸುಭಾಷ್ ಚಂದ್ರ ಅವರ ಕನಸು!

ಭಗವಂತ್ ಮಾನ್ ನೇತೃತ್ವದಲ್ಲಿ AAP ಐತಿಹಾಸಿಕ ಗೆಲುವು

ಆಮ್ ಆದ್ಮಿ ಪಕ್ಷ()ವು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಸ್ಪರ್ಧಿಸಿ ಐತಿಹಾಸಿಕ ಗೆಲುವು ದಾಖಲಿಸಿದೆ. ಆಮ್ ಆದ್ಮಿ ಪಕ್ಷ (Aam Aadmi PartyAAP) ಪಂಜಾಬ್‌ನ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದು ಮೂರನೇ ಎರಡರಷ್ಟು ಬಹುಮತವನ್ನು ಪಡೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News