Karnataka Hijab Case: ರಾಜ್ಯ ಹೈಕೋರ್ಟ್ ತೀರ್ಪು ಪ್ರಶ್ನಿಸಿ Supreme Court ಕದ ತಟ್ಟಿದ ರಾಜ್ಯದ 6 ಮುಸ್ಲಿಂ ಯುವತಿಯರು

Karnataka Hijab Row Updates: ಕರ್ನಾಟಕ ಹಿಜಾಬ್ ಪ್ರಕರಣಕ್ಕೆ (Karnataka Hijab Row) ಸಂಬಂಧಿಸಿದಂತೆ ಇಂದು ಮಂಗಳವಾರ ರಾಜ್ಯ ಹೈಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿದೆ. HC ನೀಡಿರುವ ತೀರ್ಪನ್ನು 6 ಮುಸ್ಲಿಂ ಯುವತಿಯರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ.  

Written by - Nitin Tabib | Last Updated : Mar 15, 2022, 07:48 PM IST
  • ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ HC ತೀರ್ಪು
  • HC ತೀರ್ಪು ಪ್ರಶ್ನಿಸಿ ಸುಪ್ರೀಂ ಮೊರೆಹೋದ ವಿದ್ಯಾರ್ಥಿನಿಯರು
  • ಮುಸ್ಲಿಂ ವಿದ್ಯಾರ್ಥಿನಿಯರಿಂದ ಸುಪ್ರೀಂನಲ್ಲಿ ಅರ್ಜಿ ದಾಖಲು
Karnataka Hijab Case: ರಾಜ್ಯ ಹೈಕೋರ್ಟ್ ತೀರ್ಪು ಪ್ರಶ್ನಿಸಿ Supreme Court ಕದ ತಟ್ಟಿದ ರಾಜ್ಯದ 6 ಮುಸ್ಲಿಂ ಯುವತಿಯರು title=
Karnataka Hijab Case (File Photo)

Karnataka Hijab Row Verdict: ಕರ್ನಾಟಕದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಹಿಜಾಬ್ ವಿವಾದಕ್ಕೆ (Karnataka Hijab News) ಸಂಬಂಧಿಸಿದಂತೆ ಹೈಕೋರ್ಟ್ ಇಂದು ತನ್ನ ತೀರ್ಪು ಪ್ರಕಟಿಸಿದೆ. ಹಿಜಾಬ್ ಇಸ್ಲಾಂನ ಅಗತ್ಯ ಭಾಗವಲ್ಲ ಎಂದು ಹೈಕೋರ್ಟ್ ಹೇಳಿದೆ. ಇದೀಗ ಹೈಕೋರ್ಟ್‌ನ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಹಿಜಾಬ್ (Hijab Raw Karnataka) ಕುರಿತ ನ್ಯಾಯಾಲಯದ ತೀರ್ಪನ್ನು 6 ಮುಸ್ಲಿಂ ವಿದ್ಯಾರ್ಥಿನಿಯರು ಪ್ರಶ್ನಿಸಿದ್ದಾರೆ. ಈ 6 ಮುಸ್ಲಿಂ ಹುಡುಗಿಯರು ಹೈಕೋರ್ಟ್‌ನಲ್ಲಿಯೂ ಅರ್ಜಿದಾರರಾಗಿದ್ದರು.

ಹಿಜಾಬ್ ಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್
ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ (Hijab Row) ಧರಿಸುವುದನ್ನು ಅನುಮತಿಸಲಾಗುವುದಿಲ್ಲ ಎಂದು ರಾಜ್ಯ ಹೈಕೋರ್ಟ್ ಮಂಗಳವಾರ ಹೇಳಿದೆ. ಶಿಕ್ಷಣ ಸಂಸ್ಥೆಗಳು ಈ ರೀತಿಯ ಉಡುಗೆ ಮತ್ತು ಹಿಜಾಬ್ ಅನ್ನು ನಿಷೇಧಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಈ ತೀರ್ಪನ್ನು ನೀಡುವುದರೊಂದಿಗೆ, ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಲಾದ ಇತರ ಎಲ್ಲಾ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ಹಿಜಾಬ್ ಇಸ್ಲಾಂನ ಅಗತ್ಯ ಭಾಗವಲ್ಲ
ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಭಾಗವಲ್ಲ ಎಂದು ಹೈಕೋರ್ಟ್‌ನ ಪೂರ್ಣ ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ. ಮುಸ್ಲಿಂ ಸಂಘಟನೆಗಳು ಮತ್ತು ವಿದ್ಯಾರ್ಥಿನಿಯರ ಅರ್ಜಿಯನ್ನು ವಜಾಗೊಳಿಸಿದ ಪೀಠ, ಹಿಜಾಬ್ ಧರಿಸುವುದು ಅನಿವಾರ್ಯವಲ್ಲ, ಶಿಕ್ಷಣ ಸಂಸ್ಥೆಗಳು ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಬಹುದು ಎಂದು ಹೇಳಿದೆ.

ಇದನ್ನೂ ಓದಿ-ಮಕ್ಕಳ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ಬೇಡ; ತೀರ್ಪು ಪಾಲನೆ ಎಲ್ಲರ ಕರ್ತವ್ಯ ಎಂದ ಎಚ್ಡಿಕೆ

ಮುಸ್ಲಿಂ ವಿದ್ಯಾರ್ಥಿನಿಯರ ಬೇಡಿಕೆ ಏನಿತ್ತು?
ರಾಜ್ಯ ಹೈಕೋರ್ಟ್‌ನಲ್ಲಿ, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್  ತಮ್ಮ ಧಾರ್ಮಿಕ ನಂಬಿಕೆಯ ಭಾಗವಾಗಿರುವುದರಿಂದ ಕಾಲೇಜಿನಲ್ಲಿ ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಈ ವಿವಾದದ ಹಿನ್ನೆಲೆ ಕರ್ನಾಟಕದ ಹಲವು ಶಿಕ್ಷಣ ಸಂಸ್ಥೆಗಳು ಕೆಲ ದಿನಗಳ ಕಾಲ ಬಂದ್ ಕೂಡ ಆಗಿದ್ದವು. ವಿದ್ಯಾರ್ಥಿನಿಯರ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, ಫೆಬ್ರವರಿ 5 ರ ಸರ್ಕಾರಿ ಆದೇಶವನ್ನು ಅಮಾನ್ಯಗೊಳಿಸುವ ಯಾವುದೇ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.

ಇದನ್ನೂ ಓದಿ-"ಇದು ಹಿಜಾಬ್ ಗೆ ನೀಡಿದ ತಡೆಯಲ್ಲ, ನಮ್ಮ ಶಿಕ್ಷಣದ ತಡೆ" ಹೈ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರ ಅಳಲು

ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದೇನು?
ಇಡೀ ಪ್ರಕರಣದ ಸಂಪೂರ್ಣ ಅಧ್ಯಯನ ನಡೆಸಿ, ನಾವು ಕೆಲ ಪ್ರಶ್ನೆಗಳನ್ನು ಸಿದ್ಧಪಡಿಸಿದ್ದೇವೆ ಮತ್ತು ಅದಕ್ಕೆ ಅನುಗುಣವಾಗಿ ತೀರ್ಪನ್ನು ನೀಡಿದ್ದೇವೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಹೇಳಿದ್ದಾರೆ. ಮೊದಲ ಪ್ರಶ್ನೆಯೆಂದರೆ ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಕಡ್ಡಾಯ ಭಾಗವಾಗಿದೆಯೇ ಮತ್ತು ಅದು ಆರ್ಟಿಕಲ್ 25 ರ ಅಡಿಯಲ್ಲಿ ಬರುತ್ತದೆಯೇ? ಎರಡನೆಯದಾಗಿ ಅದು ಶಾಲಾ ಸಮವಸ್ತ್ರದ ಸೂಚನೆ ಹಕ್ಕುಗಳ ಉಲ್ಲಂಘನೆಯೇ? ಮೂರನೇ ಪ್ರಶ್ನೆಯೆಂದರೆ ಫೆಬ್ರವರಿ 5 ರ ಸರ್ಕಾರಿ ಆದೇಶವು ಅಸಮರ್ಥ ಮತ್ತು ಸ್ಪಷ್ಟವಾಗಿ ಅನಿಯಂತ್ರಿತವಾಗಿರುವುದರ ಹೊರತಾಗಿ, ಆರ್ಟಿಕಲ್ 14 ಮತ್ತು 15 ಅನ್ನು ಉಲ್ಲಂಘಿಸುತ್ತದೆಯೇ? ಎಂಬ ಪ್ರಶ್ನೆಗಳು ಇದರಲ್ಲಿ ಶಾಮೀಲಾಗಿವೆ.

ಇದನ್ನೂ ಓದಿ-'ದಿ ಕಾಶ್ಮೀರಿ ಫೈಲ್ ಸಿನಿಮಾ ಬದಲು, ಪರ್ಜಾನಿಯಾ ಸಿನಿಮಾ ನೋಡಲು ಅವಕಾಶ ಮಾಡಿಕೊಡಿ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News