ಪೋರ್ನೋಗ್ರಫಿ ಪ್ರಕರಣದಲ್ಲಿ ಜುಲೈ23ರವರೆಗೆ ಪೋಲಿಸ್ ವಶಕ್ಕೆ ಉದ್ಯಮಿ ರಾಜ್ ಕುಂದ್ರ

ಪೋರ್ನೋಗ್ರಫಿ ಪ್ರಕರಣದಲ್ಲಿ  ನಟಿ ಶಿಲ್ಪಾ ಶೆಟ್ಟಿಯ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ  ಅವರನ್ನು ನ್ಯಾಯಾಲಯ ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.   

Written by - Ranjitha R K | Last Updated : Jul 20, 2021, 03:59 PM IST
  • ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ರಾಜ್ ಕುಂದ್ರಾ
  • ಕಂಪನಿಯನ್ನು 25000 ಡಾಲರ್‌ಗೆ ಮಾರಾಟ ಮಾರುವುದಾಗಿ ಹೇಳಿಕೆ ನೀಡಿದ ರಾಜ್ ಕುಂದ್ರ
  • ಪೋರ್ನೋಗ್ರಫಿ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ರಾಜ್ ಕುಂದ್ರ
ಪೋರ್ನೋಗ್ರಫಿ ಪ್ರಕರಣದಲ್ಲಿ ಜುಲೈ23ರವರೆಗೆ ಪೋಲಿಸ್ ವಶಕ್ಕೆ ಉದ್ಯಮಿ ರಾಜ್ ಕುಂದ್ರ   title=
ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ರಾಜ್ ಕುಂದ್ರಾ (photo ANI)

ಮುಂಬೈ : ಪೋರ್ನೋಗ್ರಫಿ ಪ್ರಕರಣದಲ್ಲಿ (Soft Pornography Case) ನಟಿ ಶಿಲ್ಪಾ ಶೆಟ್ಟಿಯ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ (Raj Kundra) ಅವರನ್ನು ನ್ಯಾಯಾಲಯ ಜುಲೈ 23 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಜುಲೈ 19 ರಂದು ಮುಂಬೈ ಕ್ರೈಂ ಬ್ರಾಂಚ್ ರಾಜ್ ಕುಂದ್ರಾ ಅವರನ್ನು ವಿಚಾರಣೆಗೆ ಕರೆದಿತ್ತು. ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ಬಳಿಕ ರಾತ್ರಿ 11 ಗಂಟೆಗೆ ರಾಜ್ ಕುಂದ್ರ ಬಂಧನವಾಗಿತ್ತು. ಮತ್ತೆ ಬೆಳಿಗ್ಗೆ 4 ಗಂಟೆಗೆ ಅವರನ್ನು ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. 

 ನ್ಯಾಯಾಲಯದಲ್ಲಿ ಸ್ಪಷ್ಟನೆ ನೀಡಿದ ರಾಜ್ ಕುಂದ್ರಾ :
 ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸ್ಪಷ್ಟನೆ ನೀಡಿದ ರಾಜ್ ಕುಂದ್ರಾ (Raj Kundra) , ಹಾಟ್‌ಶಾಟ್ ಆ್ಯಪ್ ಅನ್ನು ಪ್ರದೀಪ್ ಬಕ್ಷಿ(Pradeep Bakshi) ಎಂಬವರಿಗೆ ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ. ಈ ಆಪ್ ಅನ್ನು 25000 ಡಾಲರ್ ಗೆ ಮಾರಾಟ ಮಾಡಿದ್ದು, ಇದರಲ್ಲಿ ತಾನು ಯಾವುದೇ ರೀತಿಯ ಪಾಲುದಾರಿಕೆ ಹೊಂದಿಲ್ಲ ಎಂದಿದ್ದಾರೆ. ಆದರೆ, ಈ ಅಪ್ಲಿಕೇಶನ್‌ನ ಹಣಕಾಸಿನ ವಹಿವಾಟಿನ ಬಗ್ಗೆ ರಾಜ್ ಕುಂದ್ರಾ ನಿರಂತರವಾಗಿ ಅಪ್ ಡೆಟ್ ಪಡೆದುಕೊಳ್ಳುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.  

ಇದನ್ನೂ ಓದಿ : Mera Pani Meri Virasat Yojana : ಈ ಯೋಜನೆಯ ಮೂಲಕ ರೈತರಿಗೆ ಸಿಗಲಿದೆ ₹ 7000 : ಜು. 31 ರೊಳಗೆ ನೋಂದಣಿ ಮಾಡಿಕೊಳ್ಳಿ!

'ಕಂಪನಿ ಮಾರಾಟ ಮಾಡಿದರೂ ಸ್ಟಾಟರ್ಜಿ ರೂಪಿಸುತ್ತಿದ್ದ ರಾಜ್ ಕುಂದ್ರ : 
ತನ್ನ ಕಂಪನಿಯನ್ನು ಪ್ರದೀಪ್ ಬಕ್ಷಿಗೆ ಮಾರಾಟ ಮಾಡಿದ್ದರೆ, ಕಂಪನಿಯ ವಾಟ್ಸಾಪ್ ಗ್ರೂಪ್' (Whatsapp group)  ಎಚ್ ಅಕೌಂಟ್ಸ್ 'ನಲ್ಲಿ (H account)   ಸಕ್ರಿಯರಾಗಿರುವ ಬಗ್ಗೆ ಪೋಲೀಸರು ಪ್ರಶ್ನಿಸಿದ್ದಾರೆ.  ಪ್ರತಿಯೊಂದು ನಿರ್ಧಾರದಲ್ಲೂ ರಾಜ್ ಕುಂದ್ರ ಭಾಗಿಯಾಗಿರುವುದನ್ನು ವಾಟ್ಸ್ ಆಪ್ ಚಾಟ್ (Whatsapp chat) ಸ್ಪಷ್ಟವಾಗಿ ತೋರಿಸುತ್ತದೆ. ಅಲ್ಲದೆ, ಅಶ್ಲೀಲ ಚಿತ್ರಗಳ ನಿರ್ಮಾಪಕ ನಿರ್ದೇಶಕರಾಗಿದ್ದ ಗೆಹ್ನಾ ವಶಿಷ್ಟ ಮತ್ತು ಉಮೇಶ್ ಕಾಮತ್  ಪ್ರತಿ ಸ್ಕ್ರಿಪ್ಟ್‌ನಲ್ಲೂ ರಾಜ್ ಕುಂದ್ರಾ ಅವರನ್ನು ಸಿಸಿ ಯಲ್ಲಿ  ಏಕೆ ಇಟ್ಟುಕೊಳ್ಳುತ್ತಿದ್ದರು ಎನ್ನುವುಡು ಪೋಲೀಸರ ಪ್ರಶ್ನೆ. 

ರಾಜ್ ಕುಂದ್ರ ಹೆಸರು ಬೆಳೆಕಿಗೆ ಬಂದಿದ್ದು ಹೇಗೆ ? 
ಪ್ರಕರಣಕ್ಕೆ ಸಂಬಂಧಿಸಿದಂತೆ, ಗೆಹಾನಾ ವಸಿಷ್ಠನನ್ನು (Gehana Vasisth) ಬಂಧಿಸಿದಾಗ, ಅವರು ಉಮೇಶ್ ಕಾಮತ್ (Umesh Kamat) ಹೆಸರನ್ನು ತೆಗೆದುಕೊಂದಿದ್ದಾರೆ. ರಾಜ್ ಕುಂದ್ರಾ ಅವರ ಮಾಜಿ ಪಿಎ ಉಮೇಶ್ ಕಾಮತ್, ಪ್ರಕರಣದಲ್ಲಿ ರಾಜ್ ಕುಂದ್ರಾ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. 

 ಮಲಾಡ್ ವೆಸ್ಟ್ ನಲ್ಲಿ ಅಶ್ಲೀಲ ಚಿತ್ರಗಳ ಚಿತ್ರೀಕರಣ : 
ಅಶ್ಲೀಲ ಚಿತ್ರಗಳ ಚಿತ್ರೀಕರಣಕ್ಕಾಗಿ, ಮುಂಬೈನ ಮಲಾಡ್ ವೆಸ್ಟ್ ನ ಮಾರ್ಗೊದಲ್ಲಿ ಬಂಗಲೆಯೊಂದನ್ನು ಬಾಡಿಗೆಗೆ ಪಡೆದಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ದಾಳಿ ನಡೆಸಿದಾಗಲೂ ಈ ಸ್ಥಳದಲ್ಲಿ ಅಶ್ಲೀಲ ಚಿತ್ರಗಳ ಚಿತ್ರೀಕರಣ ನಡೆಯುತ್ತಿತ್ತು. 

ಇದನ್ನೂ ಓದಿ : ಈ ಬ್ಯಾಂಕ್ ನಲ್ಲಿ ಖಾತೆ ತೆರೆದರೆ ಉಚಿತವಾಗಿ ಸಿಗಲಿದೆ ಒಂದು ಕೋಟಿಯ ವಿಮೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News