RSS Chief's Statement:'ಧರ್ಮ ಪರಿವರ್ತನೆ ನಮ್ಮ ಉದ್ದೇಶವಲ್ಲ, ಭಾರತವನ್ನು 'ವಿಶ್ವಗುರು'ವನ್ನಾಗಿಸಬೇಕಿದೆ'

RSS Chief's Statement: ದೌರ್ಬಲ್ಯವೇ ಪಾಪ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಕೇವಲ ಒಬ್ಬ ವ್ಯಕ್ತಿ ಬಲಶಾಲಿಯಾಗಲು ಸಾಧ್ಯವಿಲ್ಲ. ಕಲಿಯುಗದಲ್ಲಿ ಸಂಘಟನೆಯನ್ನು ಶಕ್ತಿ ಎಂದು ಪರಿಗಣಿಸಲಾಗಿದೆ. ನಾವು ಎಲ್ಲರನ್ನು ನಮ್ಮೊಂದಿಗೆ ತೆಗೆದುಕೊಂಡು ಮುಂದಕ್ಕೆ ಸಾಗುತ್ತೇವೆ ಎಂದು ಅವರು ಹೇಳಿದ್ದಾರೆ. 

Written by - Nitin Tabib | Last Updated : Nov 20, 2021, 05:42 PM IST
  • ಭಾರತ ಜಗತ್ತಿಗೆ ನಾಗರಿಕತೆಯನ್ನು ಕಲಿಸಿದೆ - ಭಾಗವತ್
  • ನಮ್ಮ ಪೂರ್ವಜರು ವಿಶ್ವಾದ್ಯಂತ ಭೇಟಿ ನೀಡಿದ್ದಾರೆ - ಭಾಗವತ್
  • ಸತ್ಯಮೇವ ಜಯತೇ ನಾನೃತಂ - ಭಾಗವತ್
RSS Chief's Statement:'ಧರ್ಮ ಪರಿವರ್ತನೆ ನಮ್ಮ ಉದ್ದೇಶವಲ್ಲ, ಭಾರತವನ್ನು 'ವಿಶ್ವಗುರು'ವನ್ನಾಗಿಸಬೇಕಿದೆ' title=
India The Vishwa Guru (File Photo)

ಬಿಲಾಸ್‌ಪುರ: RSS News - 'ವಿಶ್ವ ಗುರು' ಭಾರತ ನಿರ್ಮಾಣಕ್ಕಾಗಿ  ನಾವೆಲ್ಲರೂ ಒಗ್ಗಟ್ಟಾಗಿ ನಡೆಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ನಾವೆಲ್ಲರೂ ನಮ್ಮ ಪೂರ್ವಜರ ಬೋಧನೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ಪೂರ್ವಜರ ಸದ್ಗುಣಗಳನ್ನು ನೆನಪಿಸುವ ಈ ಕ್ಷೇತ್ರದಲ್ಲಿ ಭಾರತವನ್ನು ಇಡೀ ಜಗತ್ತಿಗೆ ಶಾಂತಿ ಮತ್ತು ಸಂತೋಷವನ್ನು ನೀಡುವ ವಿಶ್ವಗುರುವನ್ನಾಗಿ (India The Vishwa Guru) ಮಾಡಲು ನಾವು ಸಾಮರಸ್ಯ ಮತ್ತು ಸಮನ್ವಯದಿಂದ ಮುನ್ನಡೆಯುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. 

ಸತ್ಯವೊಂದೇ ಗೆಲ್ಲುತ್ತದೆ - ಮೋಹನ್ ಭಾಗವತ್
ಮುಂಗೇಲಿ ಜಿಲ್ಲೆಯ ಮಡ್ಕು ದ್ವೀಪದಲ್ಲಿ ಶುಕ್ರವಾರ ನಡೆದ ಘೋಷ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿರುವ ಮೋಹನ್ ಭಾಗವತ್ ಅವರು, 'ಸತ್ಯಮೇವ ಜಯತೇ ನಾನೃತಂ. ಸತ್ಯವೊಂದೇ ಗೆಲ್ಲುತ್ತದೆ (Truth Will Win), ಅಸತ್ಯವಲ್ಲ. ಸುಳ್ಳು ಎಷ್ಟೇ ಪ್ರಯತ್ನಿಸಿದರೂ ಸುಳ್ಳು ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಮುಂಗೇಲಿ ಜಿಲ್ಲೆಯ ಮೂಲಕ ಹರಿಯುವ ಶಿವನಾಥ ನದಿಯಲ್ಲಿರುವ ಮಡ್ಕು ದ್ವೀಪದಲ್ಲಿ ನವೆಂಬರ್ 16 ರಿಂದ ನವೆಂಬರ್ 19 ರವರೆಗೆ ಘೋಷ್ ಶಿಬಿರವನ್ನು (Ghosh Shibir) ಆಯೋಜಿಸಲಾಗಿತ್ತು. ಶುಕ್ರವಾರ ಅದರ ಮುಕ್ತಾಯ ಸಮಾರಂಭ ಮಾಡಲು ಘೋಷ್ ಪ್ರದರ್ಶನವನ್ನು ಆಯೋಜಿಸಲಾಯಿತು, ಇದರಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರು ಭಾಗವಹಿಸಿದ್ದರು.

ಭಾರತದಲ್ಲಿ ವೈವಿಧ್ಯತೆಯಲ್ಲಿ ಏಕತೆ (Unity In Diversity) - ಮೋಹನ್ ಭಾಗವತ್
'ಇಲ್ಲಿ ವಿವಿಧತೆಯಲ್ಲಿ ಏಕತೆ ಮತ್ತು ಏಕತೆಯಲ್ಲಿ ವೈವಿಧ್ಯತೆ ಇದೆ. ಭಾರತ ಎಂದಿಗೂ ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ. ಹಿಂದೆ, ನಮ್ಮ ಪೂರ್ವಜರು ಇಲ್ಲಿಂದ ವಿಶ್ವಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಅವರು ತಮ್ಮ ಧರ್ಮವನ್ನು (ಸತ್ಯ) ಅಲ್ಲಿನ ದೇಶಗಳಿಗೆ ನೀಡಿದ್ದಾರೆ. ಆದರೆ ನಾವು ಯಾರನ್ನೂ ಬದಲಾಯಿಸಲಿಲ್ಲ (Conversion), ಅವರು ಹೊಂದಿರುವುದನ್ನು ಅವರ ಬಳಿಯೇ ಉಳಿಯಲಿ. ನಾವು ಅವರಿಗೆ ಜ್ಞಾನ, ವಿಜ್ಞಾನ, ಗಣಿತ ಮತ್ತು ಆಯುರ್ವೇದವನ್ನು ನೀಡಿದ್ದೇವೆ ಮತ್ತು ಅವರಿಗೆ ನಾಗರಿಕತೆಯನ್ನು ಕಲಿಸಿದ್ದೇವೆ. ಆದ್ದರಿಂದಲೇ ನಮ್ಮೊಂದಿಗೆ ಹೋರಾಡಿದ ಚೀನಾದ ಜನರು ಕೂಡ 2000 ವರ್ಷಗಳ ಹಿಂದೆ ಭಾರತವು ಚೀನಾದ ಮೇಲೆ ತನ್ನ ಸಂಸ್ಕೃತಿಯ ಪ್ರಭಾವವನ್ನು ಸ್ಥಾಪಿಸಿದೆ ಎಂದು ಹೇಳಲು ಹಿಂಜರಿಯುವುದಿಲ್ಲ ಏಕೆಂದರೆ ಅದರ ಪ್ರಭಾವ ಆಹ್ಲಾದಕರವಾಗಿದ್ದು, ದುಃಖಕರ ವಾಗಿಲ್ಲ ಎಂದು ಭಾಗವತ್ ಹೇಳಿದ್ದಾರೆ. 

ಇದನ್ನೂ ಓದಿ-Mohan Bhagvat On Veer Savarkar: 'Savarkar ಕುರಿತು ದೇಶದಲ್ಲಿ ಮಾಹಿತಿಯ ಕೊರತೆ ಇದೆ, ಅವರನ್ನು ಅವಹೇಳನ ಮಾಡುವ ಅಭಿಯಾನ ಸಾಗಿತ್ತು'

ಜಗತ್ತು ದುರ್ಬಲರನ್ನು ಸೋಲಿಸುತ್ತದೆ - ಮೋಹನ್ ಭಾಗವತ್
ದುರ್ಬಲರನ್ನು ಮಾತ್ರ ಜಗತ್ತು ಸೋಲಿಸುತ್ತದೆ  ಎಂದು ಹೇಳಿರುವ ಭಾಗವತ್,  ದೌರ್ಬಲ್ಯವೇ ಪಾಪ ಎಂದು ಸ್ವಾಮಿ ವಿವೇಕಾನಂದರು (Swami Vivekanand) ಹೇಳಿದ್ದಾರೆ ಎಂದಿದ್ದಾರೆ. ಬಲಿಷ್ಠರಾಗುವುದು ಎಂದರೆ ಸಂಘಟಿತರಾಗಿರುವುದು. ಒಬ್ಬ ವ್ಯಕ್ತಿ ಬಲಶಾಲಿಯಾಗಲು ಸಾಧ್ಯವಿಲ್ಲ. ಕಲಿಯುಗದಲ್ಲಿ ಸಂಘಟನೆಯನ್ನು ಶಕ್ತಿ ಎಂದು ಪರಿಗಣಿಸಲಾಗಿದೆ. ನಾವು ಎಲ್ಲರನ್ನೂ ನಮ್ಮೊಂದಿಗೆ ತೆಗೆದುಕೊಂಡು ಮುಂದಕ್ಕೆ ಸಾಗುತ್ತೇವೆ. ಇದಕ್ಕಾಗಿ ಯಾರನ್ನು ಬದಲಾಯಿಸಬೇಕಾದ ಅವಶ್ಯಕತೆ ಇಲ್ಲ ಎಂದು ಭಾಗವತ್ ಹೇಳಿದ್ದಾರೆ. 

ಇದನ್ನೂ ಓದಿ-RSS Chief On Religious Conversion:'ಧರ್ಮದ ಪ್ರತಿ ಗೌರವ ಹೆಚ್ಚಾಗಬೇಕು...' ಹಿಂದೂ ಯುವತಿಯರ ಮತಾಂತರ ಕುರಿತು RSS ಮುಖ್ಯಸ್ಥ Mohan Bhagwat ಹೇಳಿದ್ದೇನು?

ಘೋಷ್ ಪ್ರದರ್ಶನದ ಬಗ್ಗೆ ಮಾತನಾಡಿರುವ ಮೋಹನ್ ಭಾಗವತ್, 'ಈ ಶಿಬಿರದಲ್ಲಿ ಎಲ್ಲರೂ ವಿಭಿನ್ನ ವಾದ್ಯಗಳನ್ನು ನುಡಿಸುವುದನ್ನು ನೀವು ನೋಡಿರಬೇಕು. ವಾದ್ಯಗಳನ್ನು ನುಡಿಸುವವರೂ ಭಿನ್ನವಾಗಿದ್ದರು. ಆದರೆ ಎಲ್ಲರೂ ತಮ್ಮ ಸ್ವರಕ್ಕೆ ಸ್ವರ ಜೋಡಿಸುತ್ತಿದ್ದರು. ಈ ರಾಗ ನಮ್ಮನ್ನು ಕಟ್ಟಿ ಹಾಕಿದೆ. ಹಾಗೆಯೇ, ನಾವು ವಿವಿಧ ಭಾಷೆಗಳು, ವಿವಿಧ ಪ್ರಾನ್ತ್ಯಗಳಲ್ಲಿದ್ದರೂ ಕೂಡ ನಮ್ಮ ಮೂಲವು ಒಂದೇ. ಇದು ನಮ್ಮ ದೇಶದ ಸ್ವರ ಮತ್ತು ಇದು ನಮ್ಮ ಶಕ್ತಿಯೂ ಹೌದು. ಮತ್ತು ಯಾರಾದರೂ ಆ ರಾಗಕ್ಕೆ ಭಂಗ ತರಲು ಪ್ರಯತ್ನಿಸಿದರೆ, ಆಗ ದೇಶದ ಒಂದು ತಾಳವಿದ್ದು, ಆ ತಾಳ  ಅದನ್ನು ಸರಿಪದಿಸಲಿದೆ ಎಂದು ಭಾಗವತ್ ಹೇಳಿದ್ದಾರೆ.

ಇದನ್ನೂ ಓದಿ-RSS Chief: ಭಾರತದಲ್ಲಿ ವಾಸಿಸುವ ಹಿಂದೂ-ಮುಸ್ಲಿಮರ ಪೂರ್ವಜರು ಒಂದೇ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News