ಶಶಿ ತರೂರ್ ರನ್ನು ಪಾಕಿಸ್ತಾನಕ್ಕೆ ಅಟ್ಟಿ- ಸುಬ್ರಹ್ಮಣ್ಯ ಸ್ವಾಮಿ

     

Updated: Jul 12, 2018 , 06:05 PM IST
ಶಶಿ ತರೂರ್ ರನ್ನು ಪಾಕಿಸ್ತಾನಕ್ಕೆ ಅಟ್ಟಿ- ಸುಬ್ರಹ್ಮಣ್ಯ ಸ್ವಾಮಿ

ನವದೆಹಲಿ: ಶಶಿ ತರೂರ್ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ  ಭಾರತದ ಹಿಂದೂ ಪಾಕಿಸ್ತಾನವಾಗುತ್ತದೆ ಎನ್ನುವ ಹೇಳಿಕೆಗೆ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ತೀರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಯಿಸಿದ ಸುಬ್ರಮಣ್ಯಸ್ವಾಮೀ " ಶಶಿ ತರೂರ್ ಮಾನಸಿಕ ಸೀಮಿತತೆಯನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಅವರು ಪಾಕಿಸ್ತಾನಕ್ಕೆ ಹೋಗಬೇಕು" ಎಂದು ತಿಳಿಸಿದ್ದಾರೆ.

ಇನ್ನು ಮುಂದುವರೆದು  ಸ್ವಾಮೀ "ನನಗೆ ಅವರು ಹಿಂದೂ ಪಾಕಿಸ್ತಾನ ಎಂದು ಹೇಳಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಏಕೆಂದರೆ ಅವರು ಇತ್ತೀಚಿಗೆ Why I AM A HINDU ದೀರ್ಘ ಪುಸ್ತಕವನ್ನು ಬರೆದಿದ್ದಾರೆ ಎಂದರು. ಇದೆ ಸಂದರ್ಭದಲ್ಲಿ ಪಾಕಿಸ್ತಾನದ ಪತ್ರಕರ್ತೆ ಮೆಹ್ರ ತರಾರ್ ಅವರ ಜೊತೆ ಇದ್ದ ಸಂಬಂಧವನ್ನು ಪ್ರಸ್ತಾಪಿಸುತ್ತಾ ಸ್ವಾಮೀ" ಈ ಲೇಡಿಯಿಂದಲೇ ಸುನಂದಾ ನೋವನ್ನು ಅನುಭವಿಸುವಂತಾಯಿತು, ಆಕೆ ಪಾಕಿಸ್ತಾನಿ,ಅಂತಹ ಸಂಬಂಧವನ್ನು ಹೊಂದಿರುವುದರಿಂದ ಪಾಕಿಸ್ತಾನಕ್ಕೆ ಹೋಗುವುದರೆಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.   

ಶಶಿ ತರೂರ್ ಇತ್ತೀಚೆಗಿನ ಪೋಲಿಸ್ ಚಾರ್ಜ್ ಶೀಟ್ ನಿಂದಾಗಿ ಮಾನಸಿಕ ಸಿಮಿತತೆಯನ್ನು ಕಳೆದುಕೊಂಡು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.