ಕರೋನಾಕ್ಕೆ ಹೆದರಿ ತಾಯಿಯನ್ನು ಮನೆಯಲ್ಲಿ ಬಂಧಿ ಮಾಡಿ ಪತ್ನಿಯೊಂದಿಗೆ ಪರಾರಿಯಾದ ಮಗ

ಕರೋನಾ ಸಂದರ್ಭದಲ್ಲಿ ಕೆಲವೊಂದು ಕಡೆ ಮಾನವೀಯ ಪ್ರಕರಣಗಳು ಕೇಳಿಬಂದರೆ, ಇನ್ನು ಕೆಲವೆಡೆ ಮನುಷ್ಯರ ರಾಕ್ಷಸ ಗುಣಗಳು ಅನಾವರಣಗೊಳ್ಳುತ್ತಿವೆ.

Written by - Ranjitha R K | Last Updated : May 4, 2021, 09:25 AM IST
  • ಕರೋನ ಭಯ ಪ್ರತಿಯೊಬ್ಬರನ್ನೂ ಕಾಡತೊಡಗಿದೆ.
  • ತಾಯಿಯನ್ನು ಕೋಣೆಯಲ್ಲಿ ಕೂಡಿ ಹಾಕಿದ ಮಗ
  • ತಾಯಿಗೆ ಕರೋನಾ ಬರಬಹುದೆಂದು ಹೆದರಿದ ಮಗ
ಕರೋನಾಕ್ಕೆ ಹೆದರಿ ತಾಯಿಯನ್ನು ಮನೆಯಲ್ಲಿ ಬಂಧಿ ಮಾಡಿ ಪತ್ನಿಯೊಂದಿಗೆ ಪರಾರಿಯಾದ  ಮಗ title=
ತಾಯಿಯನ್ನು ಕೋಣೆಯಲ್ಲಿ ಕೂಡಿ ಹಾಕಿದ ಮಗ (file photo)

ಆಗ್ರಾ / ಕೋಟಾ : ಕರೋನ (Coronavirus) ಭಯ ಪ್ರತಿಯೊಬ್ಬರನ್ನೂ ಕಾಡತೊಡಗಿದೆ. ಎಲ್ಲಿ ನೋಡಿದರೂ ಕರೋನಾ ಸೋಂಕಿತರು. ಎಲ್ಲಿ ಕೇಳಿದರೂ ಅದೇ ನೋವು, ಸಾವಿನ ಸುದ್ದಿಗಳು. ಈ ಸಂದರ್ಭದಲ್ಲಿ ಕೆಲವೊಂದು ಕಡೆ ಮಾನವೀಯ ಪ್ರಕರಣಗಳು ಕೇಳಿಬಂದರೆ, ಇನ್ನು ಕೆಲವೆಡೆ ಮನುಷ್ಯರ ರಾಕ್ಷಸ ಗುಣಗಳು ಅನಾವರಣಗೊಳ್ಳುತ್ತಿವೆ. ಕೆಲವೆಡೆ ತಮ್ಮವರನ್ನು ಉಳಿಸಿಕೊಳ್ಳಲು ತಮ್ಮ ಪ್ರಾಣ  ಕಳೆದುಕೊಂಡರೆ, ಮತ್ತೆ ಕೆಲವೆಡೆ ತನ್ನ ಪ್ರಾಣಕ್ಕಾಗಿ ತಂದೆ ತಾಯಿಯನ್ನೂ ಸಾಯಲು ಬಿಟ್ಟ ಮಕ್ಕಳಿದ್ದಾರೆ. 

ತಾಯಿಯನ್ನು ಕೋಣೆಯಲ್ಲಿ ಕೂಡಿ ಹಾಕಿದ ಮಗ : 
ಈ ಘಟನೆ ನಡೆದಿರುವುದು ಆಗ್ರಾದಲ್ಲಿ (Agra) . ಈ ಘಟನೆ ಎಲ್ಲರನ್ನೂ ತಲೆ ತಗ್ಗಿಸುವಂತೆ ಮಾಡಿದೆ. ವಯಸ್ಸಾದವರಿಗೆ ಕರೋನಾ (Coronavirus) ಸೋಂಕು ತಗಲುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ. ತಾಯಿಗೆ ವಯಸ್ಸಾಗಿದೆ. ಹಾಗಾಗಿ ತಾಯಿಗೆ ಸೋಂಕು ತಗಲಿದರೆ ತಾಯಿಯಿಂದ ತನಗೂ ತನ್ನ ಪತ್ನಿಗೆ ಕೂಡಾ ಕರೋನಾ ಸೋಂಕು  ಹರಡುವ ಭಯ ಮಗನನ್ನು ಕಾಡಿದೆ. ಈ ಕಾರಣದಿಂದಾಗಿ, ಮಗ ತಾಯಿಯನ್ನು ಮನೆಯಲ್ಲಿ ಬೀಗ ಹಾಕಿ ಬಿಟ್ಟು ತನ್ನ ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ. 

ಇದನ್ನೂ ಓದಿ : CT-Scan To Detect Corona Is Dangerous - 'ಕೊರೊನಾ ವೈರಸ್ ಪತ್ತೆಗಾಗಿ CT-Scan ನಡೆಸುವುದು ತುಂಬಾ ಅಪಾಯಕಾರಿ'

ಪೊಲೀಸರ ಸಹಾಯದಿಂದ ಮನೆಯಿಂದ ಹೊರ ಬಂದ ಮಹಿಳೆ : 
ಮಹಿಳೆಯನ್ನು ಮನೆಯಲ್ಲಿ ಕೂಡಿ ಹಾಕಿರುವ  ವಿಚಾರ ಮಹಿಳೆಯ ಮೊಮ್ಮಗನಿಗೆ ತಿಳಿದಿದೆ. ವಿಚಾರ ತಿಳಿದ ಕೂಡಲೇ , ಮೊಮ್ಮಗ ಪೊಲೀಸರಿಗೆ (Police) ಪೋನ್ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಬೀಗ ಮುರಿದು ಮಹಿಳೆಯನ್ನು ರಕ್ಷಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.  

ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ದಂಪತಿ : 
ಮತ್ತೊಂದೆಡೆ, ರಾಜಸ್ಥಾನದ (Rajastan)ಕೋಟಾದಲ್ಲಿ ದಕ್ಕೆ ವಿರುದ್ಧವಾದ ಪ್ರಕರಣ ಬೆಳಕಿಗೆ ಬಂದಿದೆ.  ವೃದ್ಧ ದಂಪತಿ ತಮ್ಮ ಮೊಮ್ಮಗ ಮತ್ತು ಸೊಸೆಗೆ ಕರೋನಾ ಸೋಂಕು ತಗುಲಬಾರದು ಎಂಬ ಕಾರಣಕ್ಕಾಗಿ, ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಹೀರಾ ಲಾಲ್ ಭೈರವಾ ಮತ್ತು ಅವರ ಪತ್ನಿ ಶಾಂತಿ ಬಾಯಿ ತಮ್ಮ ಸೊಸೆ ಮತ್ತು ಮೊಮ್ಮಗನಿಂದಿಗೆ ವಾಸಿಸುತ್ತಿದ್ದರು. ಇವರಿಬ್ಬರಲ್ಲೂ ಕರೋನಾ (COVID-19) ಸೋಂಕು ಕಾಣಿಸಿಕೊಂಡಿದೆ. ಸೋಂಕು ತಮ್ಮ ಸೊಸೆಗೆ ಮತ್ತು 18 ವರ್ಷದ ಮೊಮ್ಮಗನಿಗೆ ಹರಡಬಹುದು ಎಂಬ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಇದನ್ನೂ ಓದಿ : Adar Poonawalla : ಭಾರತ ಜುಲೈವರೆಗೆ ಕೊರೋನಾ ಲಸಿಕೆ ಕೊರತೆ ಎದುರಿಸಲಿದೆ : ಸೀರಂ ಇನ್ಸ್ಟಿಟ್ಯೂಟ್ ಮುಖ್ಯಸ್ಥ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News