ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾತೋಶ್ರೀ ಗೆ ಭೇಟಿ ನೀಡಿ ಉದ್ದವ್ ಠಾಕ್ರೆಯವರನ್ನು ಭೇಟಿಮಾಡಿದರೂ ಸಹಿತ ಶಿವಸೇನಾ ಮಾತ್ರ 2019 ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಯಾವುದೇ ನಿಲುವಿನಿಂದ ಹಿಂದೆ ಸರಿದಿಲ್ಲ ಎಂದು ತಿಳಿಸಿದೆ.
ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್ ಈಗಾಗಲೇ ಪಕ್ಷದ ವರಿಷ್ಟರು ತೆಗೆದುಕೊಂಡಿರುವ ತೀರ್ಮಾನವನ್ನು ಇತರ ಪಕ್ಷದ ನಾಯಕರು ಬದಲಿಸಲು ಸಾಧ್ಯವಿಲ್ಲ ಎಂದು ಟಾಂಗ್ ನೀಡಿದ್ದಾರೆ. ಅಮಿತ್ ಶಾ ಮತ್ತು ಠಾಕ್ರೆ ನಡುವೆ ಚುನಾವಣಾ ಮೈತ್ರಿಯ ಕುರಿತಾಗಿ ಮಾತುಕತೆ ನಡೆದಿದೆ ಎನ್ನುವುದನ್ನು ತಳ್ಳಿ ಹಾಕಿದ ರಾವತ್ ಅದೆಲ್ಲಾ ಕೇವಲ ವದಂತಿ ಎಂದು ತಿಳಿಸಿದರು.ಅಲ್ಲದೆ ಈ ಹಿಂದೆಯೇ ಶಿವಸೇನೆ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುವ ಕುರಿತಾಗಿ ನಿರ್ಧಾರ ಕೈಗೊಂಡಿತ್ತು ಎಂದು ಅವರು ಸ್ಪಷ್ಟಪಡಿಸಿದರು.
ಇತ್ತೀಚಿಗೆ ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಮಿತ್ರ ಪಕ್ಷಗಳನ್ನು ಒಗ್ಗೋಡಿಸುವ ನಿರ್ಧಾರವನ್ನು ಕೈಗೊಂಡಿದೆ.ಅದರ ಯೋಜನೆಯ ಭಾಗವಾಗಿ ಅಮಿತ್ ಶಾ ರವರು ಉದ್ದವ್ ಥಾಕ್ರೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.ಇತ್ತೀಚೆಗಿನ ದಿನಗಳಲ್ಲಿ ಬಿಜೆಪಿಯೊಂದಿಗೆ ಮುನಿಸಿಕೊಂಡಿರುವ ಶಿವಸೇನಾ ಬಹಿರಂಗವಾಗಿಯೇ ಬಿಜೆಪಿ ವಿರುದ್ದ ಟೀಕಾ ಪ್ರಹಾರ ನಡೆಸಿದೆ.