ಒಡಿಶಾ ರೈಲು ಅಪಘಾತ ಸೇರಿ ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ರೈಲು ದುರಂತಗಳು ಇವು..!

ದೇಶದಲ್ಲಿ ನಡೆದ ರೈಲು ಅಪಘಾತಗಳಲ್ಲಿ ಒಡಿಶಾ ರೈಲು ಅಪಘಾತವು ಒಂದು. ಈಗಾಗಲೇ 233ಕ್ಕೂ ಹೆಚ್ಚು ಜನರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆಯೂ ಸಹ ಇಂತಹ ಭೀಕರ ಅಪಘಾತಗಳು ದೇಶದಲ್ಲಿ ನಡೆದಿವೆ. ಸಧ್ಯ ಅವರು ಯಾವುವು ಎಂದು ನೋಡೋಣ.  

Written by - Krishna N K | Last Updated : Jun 3, 2023, 01:21 PM IST
  • ದೇಶದಲ್ಲಿ ನಡೆದ ರೈಲು ಅಪಘಾತಗಳಲ್ಲಿ ಒಡಿಶಾ ರೈಲು ಅಪಘಾತವು ಒಂದು.
  • ಈ ರೈಲು ದುರಂತದಲ್ಲಿ 233ಕ್ಕೂ ಹೆಚ್ಚು ಜನರು ದುರ್ಮರಣ ಹೊಂದಿದ್ದಾರೆ.
  • ಈವರೆಗೆ ಭಾರತದಲ್ಲಿ ಹಲವು ಮಾರಣಾಂತಿಕ ರೈಲು ಅಪಘಾತಗಳು ಸಂಭವಿಸಿವೆ.
ಒಡಿಶಾ ರೈಲು ಅಪಘಾತ ಸೇರಿ ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ರೈಲು ದುರಂತಗಳು ಇವು..! title=

Train accident history in India : ಒಡಿಶಾ ರೈಲು ಅಪಘಾತ ಭಾರತದಲ್ಲಿ ನಡೆದ ಅತ್ಯಂತ ಮಾರಣಾಂತಿಕ ರೈಲು ಅಪಘಾತದಲ್ಲಿ ಒಂದು. ನಿನ್ನೆ ರಾತ್ರಿ ಬಾಲಸೋರ್‌ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ನಡೆದ ದುರಂತದಲ್ಲಿ 233ಕ್ಕೂ ಹೆಚ್ಚು ಜನರು ದುರ್ಮರಣ ಹೊಂದಿದ್ದಾರೆ ಅಲ್ಲದೆ, 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ನಡೆದ ಅಪಘಾತ ದೇಶದಲ್ಲಿ ಈ ಹಿಂದೆ ನಡೆದ ಸರಣಿ ಅಪಘಾತಗಳನ್ನು ನೆನಪಿಸುತ್ತದೆ.

ದುರಂತ 1 : ಜೂನ್ 6 1981 ರಲ್ಲಿ ಬಿಹಾರದಲ್ಲಿ ರೈಲು ಅಪಘಾತ ಸಂಭವಿಸಿತ್ತು. ರೈಲು ಸೇತುವೆ ದಾಟುವಾಗ ಬಗ್ಮತಿ ನದಿಗೆ ಬಿದ್ದ ಪರಿಣಾಮ ಸರಿಸುಮಾರು 750 ಅಧಿಕ ಜನರು ಜಲ ಸಮಾಧಿಯಾಗಿದ್ದರು. ಜೂನ್ 6 ರಂದು ಸಂಜೆ ಮಾನ್ಸಿಯಿಂದ ಪ್ಯಾಸೆಂಜರ್ ರೈಲು ಸಹರ್ಸಾ ಕಡೆಗೆ ಹೋಗುತ್ತಿತ್ತು. ರೈಲು ಬಾಗಮತಿ ನದಿಯ ಸೇತುವೆ ಸಂಖ್ಯೆ 51 ರಿಂದ ಮುಂದಕ್ಕೆ ಚಲಿಸುತ್ತಿತ್ತು, ಆದರೆ ರೈಲು ರಭಸದಿಂದ ಹರಿಯುತ್ತಿದ್ದ ಬಾಗ್ಮತಿ ನದಿಗೆ ಬಿದ್ದಿತು. 

ದುರಂತ 2 : 20 ಆಗಷ್ಟು 1995 ಪುರುಷೋತ್ತಮ್ ರೈಲು ದುರಂತ ಸಂಭವಿಸಿತ್ತು. ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲು ಫಿರೋಜಾಬಾದ್ ಬಳಿ ನಿಂತಿದ್ದ ಕಾಳಿಂದಿ ಎಕ್ಸ್‌ಪ್ರೆಸ್‌ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಸರಿಸುಮಾರು 305 ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದರು. 

ಇದನ್ನೂ ಓದಿ:Odisha train accident : ಒಡಿಶಾ ಮೂರು ರೈಲುಗಳ ಭೀಕರ ಅಪಘಾತ..! ಫೋಟೋಸ್‌ ನೋಡಿ

ದುರಂತ 3 : 26 ನವೆಂಬರ್ 1998 ಜಮ್ಮು ತಾವಿ-ಸೀಲ್ದಾಹ್ ಎಕ್ಸ್‌ಪ್ರೆಸ್ ದುರಂತ ಸಂಭವಿಸಿತ್ತು. ಪಂಜಾಬ್‌ನ ಖನ್ನಾದಲ್ಲಿ ರೈಲು ಅಪಘಾತ ನಡೆದ ಭೀಕರ ಅಪಘಾತದಲ್ಲಿ, ಸರಿಸುಮಾರು 212 ಜನರು ಸಾವನ್ನಪ್ಪಿದರು. 

ದುರಂತ 4  : 2 ಆಗಸ್ಟ್ 1999 ರಂದು ನಡೆದ ಗೈಸಲ್ ರೈಲು ದುರಂತ ಭಾರತದಲ್ಲಿ ನಡೆದ ಭೀಕರ ರೈಲು ದುರಂತಗಳಲ್ಲಿ ಒಂದು. ಉತ್ತರ ಫ್ರಾಂಟಿಯರ್ ರೈಲ್ವೆಯ ಕತಿಹಾರ್ ವಿಭಾಗದ ಗೈಸಾಲ್ ನಿಲ್ದಾಣದಲ್ಲಿ ಬ್ರಹ್ಮಪುತ್ರ ಮೇಲ್ ರೈಲು ಅವಧ್ ಅಸ್ಸಾಂ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಸರಿಸುಮಾರು 285ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಲಿಯಾದವರಲ್ಲಿ ಹಲವರು ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯಾಗಿದ್ದರು.

ಇದನ್ನೂ ಓದಿ: Odisha Train Accident : ಹಲವು ರೈಲುಗಳು ರದ್ದು, ಮಾರ್ಗ ಬದಲಾವಣೆ.!. ಸಂಪೂರ್ಣ ಮಾಹಿತಿ ಇಲ್ಲಿದೆ

ದುರಂತ 5 : ನವೆಂಬರ್ 20, 2016 ಕಾನ್ಪುರದ ಪುಖ್ರಾಯನ್‌ನಲ್ಲಿ ಇಂದೋರ್-ರಾಜೇಂದ್ರ ನಗರ ಎಕ್ಸ್‌ಪ್ರೆಸ್‌ನ ರೈಲ್ವ ಅಫಘಾತ ನಡೆದಿತ್ತು. ಈ ಅವಘಡದಲ್ಲಿ ಸರಿಸುಮಾರು 152 ಜನರು ಸಾವನ್ನಪ್ಪಿದರು, 260 ಮಂದಿ ಗಾಯಗೊಂಡಿದ್ದರು.

ದುರಂತ 6 : 9 ಸೆಪ್ಟೆಂಬರ್ 2002 ಹೌರಾ ರಾಜಧಾನಿ ಎಕ್ಸ್‌ಪ್ರೆಸ್ ರೈಲು ದುರಂತ ಸಂಭವಿಸಿತ್ತು. ರಫಿಗಂಜ್‌ನ ಧಾವೆ ನದಿ ಸೇತುವೆ ಮೇಲೆ ಹಳಿತಪ್ಪಿ ಅಫಘಾತವಾಗಿತ್ತು. ಈ ದರಂತದಲ್ಲಿ ಸರಿಸುಮಾರು 140ಕ್ಕೂ ಹೆಚ್ಚು ಜನರು ಸಾವನ್ನಪಿದ್ದರು. 

ಇದನ್ನೂ ಓದಿ: Odisha Train Accident: ಒಡಿಶಾದಲ್ಲಿ ಭೀಕರ ರೈಲು ದುರಂತ: ಸಾವಿನ ಸಂಖ್ಯೆ 233ಕ್ಕೆ ಏರಿಕೆ- 900ಕ್ಕೂ ಹೆಚ್ಚು ಮಂದಿಗೆ ಗಾಯ!

ದುರಂತ 7 : 23 ಡಿಸೆಂಬರ್ 1964 ಪಂಬನ್-ಧನುಷ್ಕೋಡಿ ಪ್ಯಾಸೆಂಜರ್ ರೈಲು ದುರಂತ ನಡೆದಿತ್ತು. ರಾಮೇಶ್ವರಂ ಸೈಕ್ಲೋನ್‌ನಿಂದ ರೈಲು ಕೊಚ್ಚಿಹೋಗಿತ್ತು. ಈ ಘಟನೆಯಲ್ಲಿ ಸರಿಸುಮಾರು 126 ಪ್ರಯಾಣಿಕರು ಮೃತಪಟ್ಟಿದ್ದರು.

ದುರಂತ 8 : ಮೇ 28 2010ರಂದು ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ದುರಂತ ಸಂಭವಿಸಿತ್ತು. ಮುಂಬೈಗೆ ಹೊರಟಿದ್ದ ರೈಲು ಜಾರ್‌ಗ್ರಾಮ್ ಬಳಿ ಹಳಿತಪ್ಪಿ ಮುಂದೆ ಬರುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಸರಿ ಸುಮಾರು 148 ಪ್ರಯಾಣಿಕರ ಸಾವನ್ನಪ್ಪಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News