Congress : ಕಾಂಗ್ರೆಸ್‌ಗೆ ಬಿಗ್ ಶಾಕ್ : ಮತ್ತಿಬ್ಬರು ಹಿರಿಯ ನಾಯಕರು ರಾಜೀನಾಮೆ!

ಕಮಲೇಶ್ ರಾಮನ್ ಅವರು ಮಹಾನಗರ ಪಾಲಿಕೆ ಅಧ್ಯಕ್ಷರಿಂದ ರಾಜ್ಯ ಉಪಾಧ್ಯಕ್ಷರ ವರೆಗೆ ಕಾಂಗ್ರೆಸ್‌ ಪಕ್ಷದ ಮಹಿಳಾ ವಿಭಾಗದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಇಬ್ಬರೂ ನಾಯಕರ ನಿರ್ಗಮನ ಉತ್ತರಾಖಂಡ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದೆ.

Written by - Channabasava A Kashinakunti | Last Updated : Jul 11, 2022, 03:51 PM IST
  • ಉತ್ತರಾಖಂಡ ಕಾಂಗ್ರೆಸ್‌ಗೆ ಭಾರಿ ಹೊಡೆತ
  • ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟ
  • ಗೋವಾದಲ್ಲಿ 5 ಶಾಸಕರು ನಾಪತ್ತೆ
Congress : ಕಾಂಗ್ರೆಸ್‌ಗೆ ಬಿಗ್ ಶಾಕ್ : ಮತ್ತಿಬ್ಬರು ಹಿರಿಯ ನಾಯಕರು ರಾಜೀನಾಮೆ! title=

Uttarakhand Congress : ಗೋವಾ ನಂತರ ಉತ್ತರಾಖಂಡದಲ್ಲೂ ಕಾಂಗ್ರೆಸ್‌ಗೆ ಇಂದು ಭಾರಿ ಹಿನ್ನಡೆಯಾಗಿದೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟದಿಂದಾಗಿ ಇಬ್ಬರು ನಾಯಕರು ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದ್ದಾರೆ. ಉತ್ತರಾಖಂಡ ಕಾಂಗ್ರೆಸ್ ಹಿರಿಯ ನಾಯಕರಾದ ಆರ್‌ಪಿ ರಟೂರಿ ಮತ್ತು ಕಮಲೇಶ್ ರಾಮನ್ ಕೈಗೆ ಗುಡ್ ಬೈ ಹೇಳಿ ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಡಾ.ಆರ್.ಪಿ.ರಾತುರಿ ಕಳೆದ ನಾಲ್ಕು ದಶಕಗಳಿಂದ ಡೆಹ್ರಾಡೂನ್‌ನಲ್ಲಿ ಕಾಂಗ್ರೆಸ್‌ಗಾಗಿ ಕೆಲಸ ಮಾಡಿದ್ದಾರೆ. ಕಮಲೇಶ್ ರಾಮನ್ ಅವರು ಮಹಾನಗರ ಪಾಲಿಕೆ ಅಧ್ಯಕ್ಷರಿಂದ ರಾಜ್ಯ ಉಪಾಧ್ಯಕ್ಷರ ವರೆಗೆ ಕಾಂಗ್ರೆಸ್‌ ಪಕ್ಷದ ಮಹಿಳಾ ವಿಭಾಗದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಇಬ್ಬರೂ ನಾಯಕರ ನಿರ್ಗಮನ ಉತ್ತರಾಖಂಡ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದೆ.

ಉತ್ತರಾಖಂಡ ಕಾಂಗ್ರೆಸ್‌ಗೆ ಭಾರಿ ಹೊಡೆತ

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟವನ್ನು ಉಲ್ಲೇಖಿಸಿ ಆರ್‌ಪಿ ರಟೂರಿ ಮತ್ತು ಕಮಲೇಶ್ ರಾಮನ್ ಅವರು ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಇದರಿಂದ ರಾಜ್ಯ ಕಾಂಗ್ರೆಸ್ ನ ನೂತನ ಅಧ್ಯಕ್ಷ ಕರಣ್ ಮೆಹ್ರಾ ಅವರಿಗೆ ಭಾರಿ ಹಿನ್ನಡೆಯಾಗಿದೆ.

ಇದನ್ನೂ ಓದಿ : AAI Recruitment 2022 : AAI ನಲ್ಲಿ ವಿವಿಧಗಳ ಹುದ್ದೆಗಳಿಗೆ ಅರ್ಜಿ : ಸಂಪೂರ್ಣ ಮಾಹಿತಿಗೆ ಇಲ್ಲಿ ಪರಿಶೀಲಿಸಿ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ರಾಜ್ಯದಲ್ಲಿ ನೂತನ ರಾಜ್ಯಾಧ್ಯಕ್ಷರ ಸ್ತನವನ್ನು ಕರಣ್ ಮೆಹ್ರಾಗೆ ವಹಿಸಲಾಗಿತ್ತು. ಪಕ್ಷವು ಕರಣ್ ಮೆಹ್ರಾಗೆ ಯುವ ಮುಖವಾಗಿ ಜವಾಬ್ದಾರಿಯನ್ನು ನೀಡಿತು, ದೊಡ್ಡ ಸವಾಲನ್ನು ಕೊನೆಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿತು, ಆದರೆ ರಾಜ್ಯದಲ್ಲಿ ಪಕ್ಷದೊಳಗೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳು ಅವರ ಕಾರ್ಯನಿರ್ವಹಣೆಯ ಮೇಲೆ ತುಂಬಾ ಪರಿಣಾಮ ಬೀರುತ್ತಿವೆ.

ಗೋವಾದಲ್ಲಿ 5 ಶಾಸಕರು ನಾಪತ್ತೆ

ಗೋವಾದಲ್ಲಿ ಕಾಂಗ್ರೆಸ್ ನ 5 ಶಾಸಕರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಇಂದು ಬೆಳಗಿನ ಜಾವದವರೆಗೂ ಪಕ್ಷದ 11 ಶಾಸಕರಲ್ಲಿ ಈ ಐವರು ಇದ್ದರು, ಸಧ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು  ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ಈ ಐವರು ಶಾಸಕರು ಮೈಕೆಲ್ ಲೋಬೋ, ದಿಗಂಬರ್ ಕಾಮತ್, ಕೇದಾರ್ ನಾಯ್ಕ್, ರಾಜೇಶ್ ಫಲ್ದೇಸಾಯಿ ಮತ್ತು ದೇಲಾಯ್ಲಾ ಲೋಬೋ.
ಕಾಂಗ್ರೆಸ್‌ನಲ್ಲಿ ಒಡಕು ಮೂಡಿಸಲು ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್ ಬಿಜೆಪಿಯೊಂದಿಗೆ ಪಿತೂರಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಭಾನುವಾರ ಆರೋಪಿಸಿದ್ದಾರೆ.

ಇದನ್ನೂ ಓದಿ : Viral Video: ಜೋರು ಮಳೆಯಲ್ಲಿಯೇ ರಸ್ತೆ ಕಾಮಗಾರಿ, ನಾಲ್ವರಿಗೆ ಅಮಾನತು ಶಿಕ್ಷೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News