ಕಾಳಿ ಮಾತೆ ವಿವಾದದ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ

"ಮಾತೆ ಕಾಳಿ ಆರಾಧನೆ ಶ್ರೀರಾಮಕೃಷ್ಣ ಪರಮಹಂಸ ಮಿಷನ್‌ನ ಜಾಗೃತಿ ಸಂಪ್ರದಾಯವಾಗಿದೆ. ರಾಮಕೃಷ್ಣ ಪರಮಹಂಸರಂತಹ ವ್ಯಕ್ತಿಗಳ ಆಧ್ಯಾತ್ಮಿಕ ಅಭ್ಯಾಸದ ಮೂಲಕ ವ್ಯಕ್ತವಾಗಿದೆ. ಸ್ವಾಮಿ ರಾಮಕೃಷ್ಣ ಪರಮಹಂಸರು ಮಾತೆ ಕಾಳಿಯ ದರ್ಶನವನ್ನು ಪಡೆದಿದ್ದರು. ಅವರು ತಮ್ಮ ಇಡೀ ಜೀವನವನ್ನು ಕಾಳಿಯ ಪಾದದಲ್ಲಿ ಅರ್ಪಿಸಿದ್ದರು. ಈ ಇಡೀ ಜಗತ್ತು, ಚರ ಮತ್ತು ಸ್ಥಿರ, ಎಲ್ಲವೂ ತಾಯಿಯ ಚೇತನದಲ್ಲಿ ವ್ಯಾಪಿಸಲ್ಪಟ್ಟಿದೆ" ಎಂದು ಹೇಳಿದ್ದಾರೆ.   

Written by - Bhavishya Shetty | Last Updated : Jul 10, 2022, 04:04 PM IST
  • "ಮಾತೆ ಕಾಳಿ ಆರಾಧನೆ ಶ್ರೀರಾಮಕೃಷ್ಣ ಪರಮಹಂಸ ಮಿಷನ್‌ನ ಜಾಗೃತಿ ಸಂಪ್ರದಾಯವಾಗಿದೆ"
  • "ಈ ಇಡೀ ಜಗತ್ತು, ಚರ ಮತ್ತು ಸ್ಥಿರ, ಎಲ್ಲವೂ ತಾಯಿಯ ಚೇತನದಲ್ಲಿ ವ್ಯಾಪಿಸಲ್ಪಟ್ಟಿದೆ"
  • ಕಾಳಿ ಮಾತೆ ವಿವಾದದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
ಕಾಳಿ ಮಾತೆ ವಿವಾದದ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ title=
Prime Minister Modi

ನಟಿ, ನಿರ್ದೇಶಕಿ ಲೀನಾ ಮಣಿಮೇಕಲೈ ಚಿತ್ರಿಸಿರುವ ವಿವಾದಾತ್ಮಕ ಕಾಳಿ ದೇವತೆ ಪೋಸ್ಟರ್​ ಬಗ್ಗೆ ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಈ ಬಗ್ಗೆ ಕೆನಡಾದ ಅಗಾ ಖಾನ್​ ಮ್ಯೂಸಿಯಂ ಹಿಂದೂ ಬಾಂಧವರಲ್ಲಿ ಕ್ಷಮೆ ಕೋರಿತ್ತು. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಕೊನೆಗೂ ಮೌನ ಮುರಿದಿದ್ದಾರೆ. 

ಇದನ್ನೂ ಓದಿ: BSNL vs Jio Airtel: ಬಿಎಸ್‌ಎನ್‌ಎಲ್‌ನ ಅಗ್ಗದ, ಅತ್ಯುತ್ತಮ ಯೋಜನೆ ನಿಮಗಾಗಿ!

"ಮಾತೆ ಕಾಳಿ ಆರಾಧನೆ ಶ್ರೀರಾಮಕೃಷ್ಣ ಪರಮಹಂಸ ಮಿಷನ್‌ನ ಜಾಗೃತಿ ಸಂಪ್ರದಾಯವಾಗಿದೆ. ರಾಮಕೃಷ್ಣ ಪರಮಹಂಸರಂತಹ ವ್ಯಕ್ತಿಗಳ ಆಧ್ಯಾತ್ಮಿಕ ಅಭ್ಯಾಸದ ಮೂಲಕ ವ್ಯಕ್ತವಾಗಿದೆ. ಸ್ವಾಮಿ ರಾಮಕೃಷ್ಣ ಪರಮಹಂಸರು ಮಾತೆ ಕಾಳಿಯ ದರ್ಶನವನ್ನು ಪಡೆದಿದ್ದರು. ಅವರು ತಮ್ಮ ಇಡೀ ಜೀವನವನ್ನು ಕಾಳಿಯ ಪಾದದಲ್ಲಿ ಅರ್ಪಿಸಿದ್ದರು. ಈ ಇಡೀ ಜಗತ್ತು, ಚರ ಮತ್ತು ಸ್ಥಿರ, ಎಲ್ಲವೂ ತಾಯಿಯ ಚೇತನದಲ್ಲಿ ವ್ಯಾಪಿಸಲ್ಪಟ್ಟಿದೆ" ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ ಹೇಳಿದ್ದೇನು?
"ಈ ಚೇತನವನ್ನು ಮತ್ತು ಶಕ್ತಿಯ ಕಿರಣವನ್ನು ಸ್ವಾಮಿ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ರೂಪದಲ್ಲಿ ಬೆಳಗಿಸಿದರು. ವಿವೇಕಾನಂದರು ಅನುಭವಿಸಿದ ಮತ್ತು ಹೊಂದಿದ್ದ ಆಧ್ಯಾತ್ಮಿಕ ದರ್ಶನಗಳು ಅವರೊಳಗೆ ಅಸಾಧಾರಣ ಶಕ್ತಿಯನ್ನು ತುಂಬಿದವು. ಸ್ವಾಮಿ ವಿವೇಕಾನಂದರು ಧೀಮಂತ ವ್ಯಕ್ತಿತ್ವ, ಅಗಾಧ ಪಾತ್ರವನ್ನು ಹೊಂದಿದ್ದವರು. ಆದರೆ ಜಗನ್ಮಾತೆ ಕಾಳಿಯ ಸ್ಮರಣೆಯಲ್ಲಿ, ಆಕೆಯ ಭಕ್ತಿಯಲ್ಲಿ ಅವರು ಚಿಕ್ಕ ಮಗುವಿನಂತೆ ರೋಮಾಂಚನಗೊಳ್ಳುತ್ತಿದ್ದರು. ಅಂತಹ ಭಕ್ತಿಯ ಶಾಂತತೆ ಮತ್ತು ಆರಾಧನೆಯ ಶಕ್ತಿಯು ಸ್ವಾಮಿ ಆತ್ಮಸ್ಥಾನಂದರಲ್ಲಿಯೂ ಕಂಡುಬಂದಿದೆ" ಎಂದರು. 

"ಕೊನೆಯ ಕ್ಷಣದವರೆಗೂ ಸ್ವಾಮಿ ಆತ್ಮಸ್ಥಾನಂದರ ಆಶೀರ್ವಾದ ನನ್ನ ಮೇಲಿತ್ತು.  ಅವರು ಪ್ರಜ್ಞಾಪೂರ್ವಕವಾಗಿ ಇಂದಿಗೂ ನನ್ನನ್ನು ಆಶೀರ್ವದಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ" ಅಂತ ಪ್ರಧಾನಿ ಮೋದಿ ಹೇಳಿದರು. 

"ಆತ್ಮದ ಸೇವೆಯಲ್ಲಿ ದೇವರ ಸೇವೆಯನ್ನು ನೋಡುವುದು, ಆತ್ಮದಲ್ಲಿ ಶಿವನನ್ನು ಕಾಣುವುದು ಸನ್ಯಾಸಿಗೆ ಅತ್ಯುನ್ನತವಾಗಿದೆ. ಸ್ವಾಮಿ ವಿವೇಕಾನಂದ ಅವರು ಈ ಮಹಾನ್ ಸಂತ ಸಂಪ್ರದಾಯ, ಸನ್ಯಾಸ ಸಂಪ್ರದಾಯವನ್ನು ಅದರ ಆಧುನಿಕ ರೂಪದಲ್ಲಿ ರೂಪಿಸಿದರು" ಎಂದರು. 

ಇದನ್ನೂ ಓದಿ: ನೀವು  ₹10 ಲಕ್ಷ ಗಳಿಸಿದರೂ ತೆರಿಗೆ ಪಾವತಿಸಬೇಕಾಗಿಲ್ಲ, ITR ಸಲ್ಲಿಸುವ ಮೊದಲು ಈ ಲೆಕ್ಕಾಚಾರ ನೋಡಿ!

ಸ್ವಾಮಿ ಆತ್ಮಸ್ಥಾನಂದರ ನೂರನೇ ಜಯಂತ್ಯುತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಹೇಳಿಕೆಗಳನ್ನು ನೀಡಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News