Ayodhya Water Metro: ಅಯೋಧ್ಯೆಯಲ್ಲಿ ಸಂಚರಿಸಲಿದೆ ವಾಟರ್ ಮೆಟ್ರೋ, ಇದಕ್ಕೆ ಸೌರಶಕ್ತಿಯೇ ಇಂಧನ

Ayodhya Water Metro: ಸರಯು ನದಿಯಲ್ಲಿ ಚಲಿಸಲಿರುವ ಈ ವಾಟರ್ ಮೆಟ್ರೋದಲ್ಲಿ ಒಮ್ಮೆಗೆ 50 ಜಂರು ಕುಳಿತುಕೊಳ್ಳಬಹುದು. ವಿಶೇಷವೆಂದರೆ ಈ ವಾಟರ್ ಮೆಟ್ರೋ ಚಲಾಯಿಸಲು ಸೌರಶಕ್ತಿಯೇ ಇಂಧನ.  ಗುಪ್ತರ್ ಘಾಟ್‌ನಿಂದ ರಾಮ್ ಕಿ ಪೈಡಿವರೆಗೆ ಚಲಿಸುವ ಈ ವಾಟರ್ ಮೆಟ್ರೋದ ವಿಶೇಷತೆಗಳೇನು? ಇದರಲ್ಲಿ ಏನೆಲ್ಲಾ ಸೌಲಭ್ಯಗಳು ಲಭ್ಯವಾಗಲಿವೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ. 

Written by - Yashaswini V | Last Updated : Dec 14, 2023, 08:09 AM IST
  • ಇದೀಗ ಅಯೋಧ್ಯೆಯಲ್ಲಿ (ಸರಯು ನದಿಯಲ್ಲಿ) ಸಂಚರಿಸಲು ಸಜ್ಜಾಗಿರುವ ಈ ವಾಟರ್ ಮೆಟ್ರೋದಲ್ಲಿ ಒಮ್ಮೆಗೆ 50 ಪ್ರಯಾಣಿಕರು ಸಂಚರಿಸಲು ಸಾಧ್ಯವಾಗುತ್ತದೆ.
  • ಗುಪ್ತರ್ ಘಾಟ್‌ನಿಂದ ರಾಮ್ ಕಿ ಪೈಡಿವರೆಗೆ ಚಲಿಸುವ ಈ ವಾಟರ್ ಮೆಟ್ರೋದಿಂದ ಅಯೋಧ್ಯೆಯ ಜನರಿಗೆ ಅಥವಾ ಅಯೋಧ್ಯೆಗೆ ಬರುವ ಭಕ್ತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
  • ಇದರೊಂದಿಗೆ ಸರಯೂ ಘಾಟ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಲಿದೆ
Ayodhya Water Metro: ಅಯೋಧ್ಯೆಯಲ್ಲಿ ಸಂಚರಿಸಲಿದೆ ವಾಟರ್ ಮೆಟ್ರೋ, ಇದಕ್ಕೆ ಸೌರಶಕ್ತಿಯೇ ಇಂಧನ  title=

Ayodhya Water Metro: ಕೋಟ್ಯಾಂತರ ಭಕ್ತರ ಬಹುವರ್ಷಗಳ ನಿರೀಕ್ಷೆಯ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಹೊಸ ವರ್ಷದಲ್ಲಿ 2024ರ ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಾಲಾ ಆಸೀನರಾಗಲಿದ್ದಾರೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರರಾಗಿ ಕಾಯುತ್ತಿದ್ದಾರೆ. ವಿಶೇಷವೆಂದರೆ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಲು ಬಯಸುವ ಭಕ್ತಾದಿಗಳಿಗೆ ಶ್ರೀರಾಮ ಮಂದಿರ ಮಾತ್ರವಲ್ಲ, ಅಯೋಧ್ಯೆಯಲ್ಲಿ ಇನ್ನೂ ಹಲವು ಅತ್ಯಾಕರ್ಷಕ ಯೋಜನೆಗಳು ಕೈಬೀಸಿ ಕರೆಯಲಿವೆ. 

ವಾಸ್ತವವಾಗಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಜೊತೆಗೆ ನೂರಾರು ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಅದರಲ್ಲಿ ಒಂದು ಈ ವಾಟರ್ ಮೆಟ್ರೋ. ಹೌದು,  ಸರಯು ನದಿಯಲ್ಲಿ ಸಂಚರಿಸುವ ಈ ವಾಟರ್ ಮೆಟ್ರೋವನ್ನು ಜನವರಿ 22ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 

ಪ್ರಸ್ತುತ ಭಾರತದ ದಕ್ಷಿಣದ ರಾಜ್ಯವಾದ ಕೇರಳದ ಕೊಚ್ಚಿಯಲ್ಲಿ ಮಾತ್ರ ಸಂಚರಿಸುತ್ತಿರುವ ವಾಟರ್ ಮೆಟ್ರೋ ಜನವರಿ ತಿಂಗಳಿನಿಂದ ಅಯೋಧ್ಯೆಯಲ್ಲಿಯೂ ಸಂಚರಿಸಲಿದೆ. ಇದರ ಪ್ರಮುಖ ವಿಶೇಷತೆ ಎಂದರೆ ಈ ವಾಟರ್ ಮೆಟ್ರೋ ಸಂಚರಿಸಲು ಸೌರಶಕ್ತಿಯೇ ಇದಕ್ಕೆ ಇಂಧನ. 

ಇದನ್ನೂ ಓದಿ- Article 370 SC Verdict: ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಗಮನಾರ್ಹವಾಗಿ, ಕೊಚ್ಚಿಯು 76 ಕಿಲೋಮೀಟರ್‌ಗಳಷ್ಟು ನೀರಿನ ಮೆಟ್ರೋ ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲೆಂದು 2023ರ ಏಪ್ರಿಲ್ 25ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಏಷ್ಯಾದ ಮೊದಲ ವಾಟರ್ ಮೆಟ್ರೋವನ್ನು ಕೇರಳದ ಕೊಚ್ಚಿಯಲ್ಲಿ ಉದ್ಘಾಟಿಸಿದರು. ಈ ವಾಟರ್ ಮೆಟ್ರೋ ಪ್ರತಿದಿನ 34 ಸಾವಿರ ಪ್ರಯಾಣಿಕರೊಂದಿಗೆ 76 ಕಿಲೋಮೀಟರ್ ಪ್ರಯಾಣಿಸುತ್ತದೆ. 

ಇದೀಗ ಅಯೋಧ್ಯೆಯಲ್ಲಿ (ಸರಯು ನದಿಯಲ್ಲಿ) ಸಂಚರಿಸಲು ಸಜ್ಜಾಗಿರುವ ಈ ವಾಟರ್ ಮೆಟ್ರೋದಲ್ಲಿ ಒಮ್ಮೆಗೆ 50 ಪ್ರಯಾಣಿಕರು ಸಂಚರಿಸಲು ಸಾಧ್ಯವಾಗುತ್ತದೆ. ಗುಪ್ತರ್ ಘಾಟ್‌ನಿಂದ ರಾಮ್ ಕಿ ಪೈಡಿವರೆಗೆ ಚಲಿಸುವ ಈ ವಾಟರ್ ಮೆಟ್ರೋದಿಂದ ಅಯೋಧ್ಯೆಯ ಜನರಿಗೆ ಅಥವಾ ಅಯೋಧ್ಯೆಗೆ ಬರುವ ಭಕ್ತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಇದರೊಂದಿಗೆ  ಸರಯೂ ಘಾಟ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 

ಪ್ರಸ್ತುತ, ಪ್ರವಾಸಿಗರು ಮತ್ತು ರಾಮ ಭಕ್ತರು ಅಯೋಧ್ಯೆಯಲ್ಲಿ ಜಟಾಯು ವಿಹಾರ ಸೇವೆಯನ್ನು ಆನಂದಿಸುತ್ತಿದ್ದಾರೆ.  ಮುಂದಿನ ದಿನಗಳಲ್ಲಿ ರಾಮ್ ಕಿ ಪೈಡಿಯಿಂದ ಗುಪ್ತರ್ ಘಾಟ್‌ಗೆ ಹೋಗಲು ಬಯಸುವ ಪ್ರವಾಸಿಗರಿಗೆ ಈ ವಾಟರ್ ಮೆಟ್ರೋ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ಇದನ್ನೂ ಓದಿ- ಟ್ಯಾಕ್ಸಿ ಡ್ರೈವರ್‌ ಹಾಗೂ ಮಹಿಳೆಯ ಗಲಾಟೆಯ ವಿಡಿಯೋ ವೈರಲ್:‌ 5 ರೂ. ಹೆಚ್ಚು ಡಿಮ್ಯಾಂಡ್‌ ಮಾಡಿದ ಕಾರ್‌ ಚಾಲಕ!

ಅಯೋಧ್ಯೆಗೆ ಬರುವ ಭಕ್ತಾದಿಗಳಿಗೆ ಈ ವಾಟರ್ ಮೆಟ್ರೋ ಹೇಗೆ ಪ್ರಯೋಜನಕಾರಿ ಆಗಿದೆ? 
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಟ್ರಾಫಿಕ್ ಜಾಮ್ ಮತ್ತು ಪಾರ್ಕಿಂಗ್ ಸಮಸ್ಯೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  ಆದರೆ ವಾಟರ್ ಮೆಟ್ರೋ ಪ್ರಯಾಣಿಕರಿಗೆ ಅಯೋಧ್ಯೆಯ ಘಾಟ್‌ಗಳ ಸೌಂದರ್ಯವನ್ನು ಪರಿಚಯಿಸುವುದಲ್ಲದೆ  ರೈಲು ಅಥವಾ ರಸ್ತೆ ಸಾರಿಗೆಗಿಂತ ವಾಟರ್ ಮೆಟ್ರೋ ಹೆಚ್ಚು ಆರ್ಥಿಕವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News