Sourav Ganguly : ಸೌರವ್‌ಗೆ ಅನ್ಯಾಯವಾಗಿದೆ : ಗಂಗೂಲಿ ಬೆಂಬಲಕ್ಕೆ ನಿಂತ ಸಿಎಂ ಮಮತಾ!

ಬಂಗಾಳ ಕ್ರಿಕೆಟ್ ಮಂಡಳಿ ಚುನಾವಣೆಯಲ್ಲಿ ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅವರು ಬಂಗಾಳ ಕ್ರಿಕೆಟ್ ಮಂಡಳಿ (CAB) ಅಧ್ಯಕ್ಷ ಹುದ್ದೆಗೆ ಮರಳಲು ಬಯಸಿದ್ದಾರೆ ಎಂದು ಹೇಳಿದ್ದಾರೆ.

Written by - Channabasava A Kashinakunti | Last Updated : Oct 17, 2022, 04:26 PM IST
  • ಸೌರವ್ ಗಂಗೂಲಿ ಬೆಂಬಲಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
  • ಅಧ್ಯಕ್ಷರಾಗಿ ಬಿಸಿಸಿಐನಲ್ಲಿ ಉತ್ತಮ ಆಡಳಿತಗಾರರಾಗಿದ್ದರು
  • ಬಿಸಿಸಿಐ ಜತೆ ಮಾತನಾಡುವಂತೆ ಒತ್ತಾಯ
Sourav Ganguly : ಸೌರವ್‌ಗೆ ಅನ್ಯಾಯವಾಗಿದೆ : ಗಂಗೂಲಿ ಬೆಂಬಲಕ್ಕೆ ನಿಂತ ಸಿಎಂ ಮಮತಾ! title=

Mamata Banerjee : ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಬೆಂಬಲಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿಂತಿದ್ದಾರೆ. ಈ ಬಗ್ಗೆ ಮಾತನಾಡಿದ ಗಂಗೂಲಿ, ಸೌರವ್ ಗಂಗೂಲಿ ಬಗ್ಗೆ ಜಗತ್ತು ಹೆಮ್ಮೆ ಪಡುತ್ತಿದೆ. ಅವರು ಆಟಗಾರರಾಗಿ ತಮ್ಮನ್ನು ತಾವು ಸಾಬೀತುಪಡಿಸಿದ್ದರು ಮತ್ತು ಅಧ್ಯಕ್ಷರಾಗಿ ಬಿಸಿಸಿಐನಲ್ಲಿ ಉತ್ತಮ ಆಡಳಿತಗಾರರಾಗಿದ್ದರು. ಬಂಗಾಳ ಕ್ರಿಕೆಟ್ ಮಂಡಳಿ ಚುನಾವಣೆಯಲ್ಲಿ ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅವರು ಬಂಗಾಳ ಕ್ರಿಕೆಟ್ ಮಂಡಳಿ (CAB) ಅಧ್ಯಕ್ಷ ಹುದ್ದೆಗೆ ಮರಳಲು ಬಯಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಮಮತಾ ಮನವಿ

ಈ ಕುರಿತು ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿ ಮಾಡಿದ್ದಾರೆ. ಸೌರವ್ ಮತ್ತು ಅಮಿತ್ ಶಾ ಅವರ ಮಗನಿಗೆ ಮೂರು ವರ್ಷಗಳ ಅವಧಿಯನ್ನು ನೀಡಲಾಗಿದೆ. ಆದರೆ ಅಮಿತ್ ಶಾ ಅವರ ಪುತ್ರನ ಅಧಿಕಾರಾವಧಿ ಮುಗಿದಿಲ್ಲ, ಆದರೆ ಸೌರವ್ ಅವರ ಅವಧಿ ಮುಗಿದಿರುವುದು ನನಗೆ ಆಶ್ಚರ್ಯ ತಂದಿದೆ. ಅಮಿತ್ ಶಾ ಪುತ್ರನಿಂದ ನನಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಸೌರವ್ ಅವರನ್ನು ಈ ರೀತಿ ಏಕೆ ತೆಗೆದುಹಾಕಲಾಯಿತು? ಅವರಿಗೆ ಅನ್ಯಾಯವಾಗಿದೆ. ನೀವು ಮಾತ್ರ ಇದನ್ನು ಸರಿದೂಗಿಸಬಹುದು ಎಂದು ಪ್ರಧಾನಿ ಮೋದಿಯಾರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : Diwali Gift : ದೀಪಾವಳಿಗೆ ಉದ್ಯೋಗಿಗಳಿಗೆ ಬೈಕ್ ಮತ್ತು ಕಾರು ಗಿಫ್ಟ್ ನೀಡಿದ ಮಾಲೀಕ

ಬಿಸಿಸಿಐ ಜತೆ ಮಾತನಾಡುವಂತೆ ಒತ್ತಾಯ

ಸೌರವ್ ಗಂಗೂಲಿ ಅವರನ್ನು ಚುನಾವಣೆಯಲ್ಲಿ ಕಣಕ್ಕಿಳಿಸಲು ಬಿಸಿಸಿಐ ಜತೆ ಮಾತನಾಡುವಂತೆ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ಸೌರವ್ ಐಸಿಸಿಗೆ ಹೋಗಲು ಅರ್ಹರು. ಸೌರವ್‌ಗೆ ಐಸಿಸಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಪ್ರಧಾನಿಗೆ ಮನವಿ. ಸೌರವ್ ಅವರನ್ನು ಏಕೆ ನಿರಾಕರಿಸಲಾಯಿತು? ಅವನ ತಪ್ಪೇನು? ದೇಶ ಮತ್ತು ಜಗತ್ತಿನ ಎಲ್ಲರಿಗೂ ಗೊತ್ತು. ಅವರನ್ನು ಹೇಗೆ ನಿರಾಕರಿಸಲಾಗಿದೆ ಎಂಬುದನ್ನು ನೋಡಿ ನನಗೆ ಆಘಾತವಾಗಿದೆ. ಇದನ್ನು ರಾಜಕೀಯವಾಗಿ ಮತ್ತು ಸೇಡಿನಿಂದ ತೆಗೆದುಕೊಳ್ಳಬೇಡಿ. ಅವರು ರಾಜಕಾರಣಿಯಲ್ಲ. ಅವರಿಗಾಗಿ ಮತ್ತು ಕ್ರಿಕೆಟ್‌ಗಾಗಿ ನಿರ್ಧಾರ ತೆಗೆದುಕೊಳ್ಳಿ ಎಂದು ಪ್ರಧಾನಿಯವರನ್ನ ಒತ್ತಾಯಿಸಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನ ತ್ಯಜಿಸಿದ ಬಳಿಕ ಮೌನ ಮುರಿದ ಗಂಗೂಲಿ

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಮೌನ ಮುರಿದ ಸೌರವ್ ಗಂಗೂಲಿ, ಕೊನೆಯಲ್ಲಿ ಎಲ್ಲರೂ ಹತಾಶೆಯನ್ನು ಎದುರಿಸಬೇಕಾಗುತ್ತದೆ ಎಂದು ಇತ್ತೀಚೆಗೆ ಹೇಳಿದ್ದರು. ಯಾರೂ ಜೀವನ ಪರ್ಯಂತ ಅಧ್ಯಕ್ಷರಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದರು. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹತಾಶೆಯನ್ನು ಎದುರಿಸಬೇಕಾಗುತ್ತದೆ. ನೀವು ತ್ವರಿತ ಯಶಸ್ಸನ್ನು ನೋಡಿದಾಗ ಅದು ಎಂದಿಗೂ ಸಂಭವಿಸುವುದಿಲ್ಲ. ನೆನಪಿರಲಿ, ಯಾರೂ ರಾತ್ರೋರಾತ್ರಿ ನರೇಂದ್ರ ಮೋದಿ ಅಥವಾ ಸಚಿನ್ ತೆಂಡೂಲ್ಕರ್ ಅಥವಾ ಅಂಬಾನಿ ಆಗುವುದಿಲ್ಲ ಎಂದು ಗುಡುಗಿದ್ದಾರೆ.

ಇದನ್ನೂ ಓದಿ : DENGUE Alert! ಚಿಂತೆ ಹೆಚ್ಚಿಸಲಿದೆಯಾ ಅಕ್ಟೋಬರ್ ತಿಂಗಳು? ನಾವೇನು ಮುಂಜಾಗ್ರತೆ ವಹಿಸಬೇಕು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News