ಆ್ಯಂಕರ್‌ಗಳೇ ಇಲ್ಲದ ದೇಶದ ಪ್ರಪ್ರಥಮ ನ್ಯೂಸ್ ಚಾನೆಲ್ Zee ಹಿಂದೂಸ್ಥಾನ್: ರಾಜ್ಯಸಭಾ ಸಂಸದ ಡಾ. ಸುಭಾಶ್ ಚಂದ್ರ

Zee ಹಿಂದೂಸ್ಥಾನ್ ರಿಲಾಂಚ್ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸಂಸದ ಡಾ. ಸುಭಾಶ್ ಚಂದ್ರ, ಸಾರ್ವಜನಿಕರು ಸುದ್ದಿಗಳನ್ನು ತಿಳಿಯಲು ಬಯಸುತ್ತಾರೆಯೇ ಹೊರತು ವೀಕ್ಷಿಸಲು ಅಲ್ಲ ಎಂದು ಹೇಳಿದರು.

Last Updated : Dec 13, 2018, 04:33 PM IST
ಆ್ಯಂಕರ್‌ಗಳೇ ಇಲ್ಲದ ದೇಶದ ಪ್ರಪ್ರಥಮ ನ್ಯೂಸ್ ಚಾನೆಲ್ Zee ಹಿಂದೂಸ್ಥಾನ್: ರಾಜ್ಯಸಭಾ ಸಂಸದ ಡಾ. ಸುಭಾಶ್ ಚಂದ್ರ title=

ನವದೆಹಲಿ: ಝೀ ಮಾಧ್ಯಮ ಸಮೂಹ ತನ್ನ ಜನಪ್ರಿಯ ರಾಷ್ಟ್ರೀಯ ನ್ಯೂಸ್ ಚಾನಲ್ Zee ಹಿಂದೂಸ್ಥಾನ್ ಅನ್ನು ಪುನರಾರಂಭಿಸಿದೆ. ಈ ಚಾನಲ್ ಹೊಸ ರೂಪದಲ್ಲಿ ಭಾರತದ ಸುದ್ಧಿ ಜಗತ್ತಿನಲ್ಲಿ ಒಂದು ಕ್ರಾಂತಿಯನ್ನು ತರಲಿದೆ. Zee ಹಿಂದೂಸ್ಥಾನ್ ಆ್ಯಂಕರ್‌ಗಳೇ ಇಲ್ಲದ ಭಾರತದ ಪ್ರಥಮ ನ್ಯೂಸ್ ಚಾನಲ್ ಆಗಲಿದೆ. Zee ಹಿಂದೂಸ್ಥಾನ್ ರಿಲಾಂಚ್ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸಂಸದ ಡಾ. ಸುಭಾಶ್ ಚಂದ್ರ, ಝೀ ಸಮೂಹದಲ್ಲಿ 13 ಸುದ್ದಿ ವಾಹಿನಿಗಳಿವೆ. ಈ ಚಾನಲ್ ಗಳು ವಿವಿಧ ಭಾಷೆಗಳಲ್ಲಿ ವಿಭಿನ್ನ ಪ್ರಾಂತ್ಯಗಳನ್ನು ಪ್ರತಿನಿಧಿಸುತ್ತವೆ. ಆದರೆ ಸುದ್ದಿಯನ್ನು ಮಾತ್ರ ತೋರಿಸುವಂತಹ ಚಾನಲ್ ಏಕಿಲ್ಲ ಎಂದು ನಾವು ಯೋಚಿಸುತ್ತಿದ್ದೆವು. Zee ಹಿಂದೂಸ್ಥಾನ್ ಈಗ ಈ ಮಾದರಿಯಲ್ಲಿ ಒನ್ ನೇಷನ್, ಒನ್ ನ್ಯೂಸ್ ಥೀಮ್ ನಲ್ಲಿ ಕೆಲಸ ಮಾಡುತ್ತ  ಭಾರತದಾದ್ಯಂತ ಸಂಪರ್ಕ ಕಲ್ಪಿಸಲಿದೆ ಎಂದು ಅವರು ಹೇಳಿದರು.

ಮಾಧ್ಯಮ ಜಗತ್ತಿನಲ್ಲಿ ಬದಲಾವಣೆಯಾಗಲಿದೆ ಎಂದು ಘೋಷಿಸಿದ ಡಾ. ಸುಭಾಷ್ ಚಂದ್ರ, ಈಗ ಆ್ಯಂಕರ್‌ಗಳ ಮುಖವನ್ನು ನೋಡಲಾಗುತ್ತಿದೆ. ಪ್ರಣವ್ ರಾಯ್, ವಿನೋದ್ ದುವಾ, ರಜತ್ ಶರ್ಮಾ ಮತ್ತು ಸುಧೀರ್ ಚೌಧರಿಯಂತಹ ಆ್ಯಂಕರ್‌ಗಳ ಮುಖವು ನಮ್ಮ ಮುಂದೆ ಬರುತ್ತದೆ. ಆದರೆ ಆ್ಯಂಕರ್ ಎಷ್ಟು ನಿಷ್ಪಕ್ಷಪಾತವಾಗಿರಲಿದ್ದಾರೆ ಎಂಬುದು ಮುಖ್ಯವಾಗುತ್ತದೆ. ನಿಷ್ಪಕ್ಷವಾಗಿ ಸುದ್ದಿಯನ್ನು ಪ್ರಸ್ತುತಪಡಿಸಲು ಏನು ಮಾಡಬಹುದು ಎಂದು ಯೋಚಿಸುತ್ತಿರುವಾಗ ಆ್ಯಂಕರ್ ರೋಲ್ ಅನ್ನು ರದ್ದುಪಡಿಸಿ ಸುದ್ದಿಗೆ ಮಹತ್ವ ನೀಡಲು ನಿರ್ಧರಿಸಿದೆವು. 

ಈಗ ಕ್ಯಾಮರಾಗಳು ನೇರವಾಗಿ ನಿಮಗೆ ಸುದ್ದಿ ತೋರಿಸಲಿವೆ. ಕ್ಯಾಮೆರಾಗಳು ನಿಷ್ಪಕ್ಷಪಾತವಾಗಿವೆ. ವೀಕ್ಷಕರು ಸ್ಪಷ್ಟವಾಗಿ ಸಂಗತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ. ಅದಕ್ಕಾಗಿ ಹಿಂಬದಿಯಲ್ಲಿ ಧ್ವನಿ ಕೇಳಿಸಲಿದೆ. ಇದಕ್ಕಾಗಿ ಆ್ಯಂಕರ್‌ಗಳೇ ಇಲ್ಲದ ದೇಶದ ಪ್ರಥಮ ಚಾನೆಲ್ Zee ಹಿಂದೂಸ್ಥಾನ್ ನಿಮ್ಮ ಮುಂದೆ ಬರಲಿದೆ. ಈ ಚಾನೆಲ್ ಪ್ರೇಕ್ಷಕರ ಸತ್ಯ ತಿಳಿದುಕೊಳ್ಳುವ ಬಯಕೆಯನ್ನು ಪೂರೈಸಲಿದೆ ಎಂದು  ರಾಜ್ಯಸಭಾ ಸಂಸದ ಡಾ. ಸುಭಾಶ್ ಚಂದ್ರ ಹೇಳಿದರು.

ಚಾನೆಲ್ ರೀಲಾಂಚ್ ಜೊತೆಯಲ್ಲೇ ಮತ್ತೊಂದು ದೊಡ್ಡ ಘೋಷಣೆ ಹೊರಡಿಸಿದ ಡಾ. ಚಂದ್ರ, ದೇಶದಲ್ಲಿ ಇಂಗ್ಲಿಷ್ನಲ್ಲಿ ಯೋಚಿಸುವ ಮತ್ತು ಮಾತನಾಡುವ ಬೌದ್ಧಿಕ ವರ್ಗ ಹೆಚ್ಚಾಗಿದೆ. ಆದರೆ ಭಾರತ 72 ವರ್ಷಗಳ ಹಿಂದೆ ಉದಯಿಸಿದೆ ಎಂದು ಜನರು ಮರೆಯುತ್ತಾರೆ. ಭಾರತವು 6,000 ವರ್ಷಗಳ ಅದ್ಭುತವಾದ ಇತಿಹಾಸ ಹೊಂದಿದೆ. ಪುಸ್ತಕಗಳಲ್ಲಿ ಕಂಡುಬರುವ ಭಾರತದ ವೈಭವಪೂರ್ಣ ಇತಿಹಾಸದ ಸುವರ್ಣ ಪುಟಗಳನ್ನು ಈ ಚಾನಲ್ ನಿಮ್ಮ ಮುಂದೆ ತರಲಿದೆ. ಇದರ ಬಗ್ಗೆ ಯುವ ಪೀಳಿಗೆಯೂ ಹೆಮ್ಮೆ ಪಡಲಿದೆ. ಏಕೆಂದರೆ ಈ ಪೀಳಿಗೆ ಆ ಅದ್ಭುತವಾದ ಇತಿಹಾಸದಿಂದ ಕಡಿತಗೊಂಡಿದೆ. ಈ ಚಾನಲ್ ವೀಕ್ಷಿಸುವ ಪೀಳಿಗೆ ಅದ್ಭುತವಾದ ಇತಿಹಾಸವನ್ನು ನೆನಪಿಟ್ಟುಕೊಳ್ಳಲಿದೆ ಎಂದರು.

Zee ಹಿಂದೂಸ್ಥಾನ್ ಯುವ ಪೀಳಿಗೆ ಮತ್ತು ಇತಿಹಾಸದ ನಡುವೆ ಸೇತುವೆ ನಿರ್ಮಿಸಲಿದೆ. ನಮ್ಮ ಪ್ರಾಚೀನ ಜ್ಞಾನ-ವಿಜ್ಞಾನ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು, ಅದ್ಭುತ ಇತಿಹಾಸವನ್ನು ನೆನಪಿಸಲಿದೆ. ದೇಶವನ್ನು ವಿಶ್ವಗುರು ಆಗಿಸುವ ಕಲ್ಪನೆ ಹೊಂದಿರುವವರಿಗೆ Zee ಹಿಂದೂಸ್ಥಾನ್ ನೋಡಿ ಇದನ್ನೂ ಮಾಡಲು ಸಾಧ್ಯ ಎಂದೆನಿಸುತ್ತದೆ ಎಂದು ಅವರು ಹೇಳಿದರು.

'ಏಕ್ ಸೂತ್ರ ಮೇ ಬಡಾ ಹಿಂದೂಸ್ಥಾನ್' ಮತ್ತು 'ಆ್ಯಂಕರ್ ನಹಿ ಅಬ್ ಖಬರ್ ಬೋಲೆಂಗೆ' ಎಂಬ ವ್ಯಾಖ್ಯಾನದೊಂದಿಗೆ ಚಾನಲ್ ನಲ್ಲಿ ಬಹಳಷ್ಟು ತಿಳಿಯಲು ಅವಕಾಶವಿದೆ. ಸುದ್ದಿ ಬುಲೆಟಿನ್ ಸಮಯವನ್ನು ಅರ್ಧ ಘಂಟೆಯಿಂದ 10 ನಿಮಿಷಕ್ಕೆ ಕಡಿಮೆ ಮಾಡಲಾಗಿದೆ ಎಂದು ಅವರು ಹೇಳಿದರು. ಚಾನಲ್ ನಲ್ಲಿ ಎಲ್ಲದರ ಬಗೆಗಿನ ಮಾಹಿತಿ ಮತ್ತು ಭಾರತೀಯ ಸನ್ನಿವೇಶದ ಮಾಹಿತಿ ಸಿಗಲಿದೆ ಎಂದು ಡಾ. ಸುಭಾಶ್ ಚಂದ್ರ ಹೇಳಿದರು. ಈ ವಿಧದ ಚಾನಲ್ ನಿಂದ ಪ್ರತಿಯೊಬ್ಬರೂ ತಮಿಳ್, ಮಹಾರಾಷ್ಟ್ರ, ಗುಜರಾತ್ ಎಲ್ಲಕ್ಕೂ ಮಿಗಿಲಾಗಿ ಭಾರತೀಯರಾಗಿ ಯೋಚಿಸುತ್ತಾರೆ.

ಈ ಕ್ರಾಂತಿಕಾರಿ ಪ್ರಯೋಗವನ್ನು ವೀಕ್ಷಿಸುವಂತೆ ಮತ್ತು ಪ್ರತಿಕ್ರಿಯೆ ನೀಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿರುವ ಡಾ.ಚಂದ್ರ, ವಾಹಿನಿಯಲ್ಲಿ ಏನಾದರೂ ಕೊರತೆಯಿದ್ದರೆ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವಂತೆ ಒತ್ತಾಯಿಸಿದ್ದಾರೆ.

ಇದಕ್ಕೂ ಮೊದಲು ಝೀ ಮಿಡಿಯಾ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾದ ಅಶೋಕ್ ವೆಂಕಟರಮಣಿ ಮಾತನಾಡಿ, Zee ಹಿಂದೂಸ್ಥಾನ್ ಗೆ ಅಭಿನಂದಿಸಿದರು. ಸುದ್ದಿ ವಾಹಿನಿಗಳಲ್ಲಿ ವೀಕ್ಷಣೆ ಹೆಚ್ಚಾಗುತ್ತಿದೆ ಮತ್ತು ಸುದ್ದಿ ಕಡಿಮೆಯಾಗುತ್ತಿದೆ. ಆದರೆ ಜನರಿಗೆ ವೀಕ್ಷಣೆಗಿಂತ ಹೆಚ್ಚಾಗಿ ಸುದ್ದಿಯ ಅಗತ್ಯವಿದೆ. ಸುದ್ದಿಯನ್ನು ನೋಡಿದ ನಂತರ ಜನರು ತಾವೇ ನಿರ್ಧಾರ ಕೈಗೊಳ್ಳುತ್ತಾರೆ. ಅವರ ಮೇಲೆ ಯಾವುದೇ ಆಲೋಚನೆಗಳನ್ನೂ ಹೇರುವ ಅಗತ್ಯವಿಲ್ಲ ಎಂದು ಹೇಳಿದರು. ಬಳಿಕ ಮಾತನಾಡಿದ Zee ಹಿಂದೂಸ್ಥಾನ್ ಮುಖ್ಯ ಸಂಪಾದಕ ಪುರುಷೋತ್ತಮ್ ವೈಷ್ಣವ್, ಚಾನಲ್ ನಿಂದ ವೀಕ್ಷಣೆಯ ಐಡಿಯಾಲಜಿಯನ್ನು ತೆಗೆದು ಭಾರತವನ್ನು ಮರುಸ್ಥಾಪಿಸೋಣ ಎಂದು ಹೇಳಿದರು.

Trending News