ಕಾಂಗ್ರೆಸ್ ಉಚಿತ ಭರವಸೆ: ನಾವು ಬಿಲ್ ಕಟ್ಟಲ್ಲವೆಂದು ಬೆಸ್ಕಾಂ ಮೀಟರ್ ರೀಡರ್ ಗೆ ಗ್ರಾಮಸ್ಥರ ಆವಾಜ್!

Karnataka Elections 2023: ಕಾಂಗ್ರೆಸ್‌ ಪಕ್ಷವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿಮನೆಗೆ ತಿಂಗಳಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುತ್ತೇವೆಂದು ಘೋಷಿಸಲಾಗಿತ್ತು.

Written by - Puttaraj K Alur | Last Updated : May 15, 2023, 06:00 PM IST
  • ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ, ನಾವು ವಿದ್ಯುತ್ ಬಿಲ್ ಪಾವತಿಸಲ್ಲ
  • ವಿದ್ಯುತ್ ಬಿಲ್ ಸಂಗ್ರಹಕ್ಕೆ ತೆರಳಿದ್ದ ಬೆಸ್ಕಾಂ ಮೀಟರ್ ರೀಡರ್‍ಗೆ ಗ್ರಾಮಸ್ಥರು ಅವಾಜ್
  • ವಿದ್ಯುತ್ ಬಿಲ್ ಪಾವತಿಸುವುದಿಲ್ಲವೆಂದ ಚಿತ್ರದುರ್ಗದ ಜಾಲಿಕಟ್ಟೆ ಗ್ರಾಮಸ್ಥರು
ಕಾಂಗ್ರೆಸ್ ಉಚಿತ ಭರವಸೆ: ನಾವು ಬಿಲ್ ಕಟ್ಟಲ್ಲವೆಂದು ಬೆಸ್ಕಾಂ ಮೀಟರ್ ರೀಡರ್ ಗೆ ಗ್ರಾಮಸ್ಥರ ಆವಾಜ್!   title=
'ನಾವು ವಿದ್ಯುತ್ ಬಿಲ್ ಪಾವತಿಸಲ್ಲ'

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತವೆಂದ ಹೇಳಿದ್ದಾರೆ, ಹೀಗಾಗಿ ನಾವು ವಿದ್ಯುತ್ ಬಿಲ್ ಪಾವತಿಸುವುದಿಲ್ಲವೆಂದು ಚಿತ್ರದುರ್ಗದ ಜಾಲಿಕಟ್ಟೆ ಗ್ರಾಮಸ್ಥರು ಹೇಳಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಜಾಲಿಕಟ್ಟೆ ಗ್ರಾಮಕ್ಕೆ ಸೋಮವಾರ ಎಪ್ರಿಲ್ ತಿಂಗಳ ವಿದ್ಯುತ್ ಬಿಲ್ ಸಂಗ್ರಹಕ್ಕೆ ತೆರಳಿದ್ದ ಬೆಸ್ಕಾಂ ಮೀಟರ್ ರೀಡರ್‍ಗೆ ಗ್ರಾಮಸ್ಥರು ಅವಾಜ್ ಹಾಕಿದ್ದಾರೆ. ವಿದ್ಯುತ್ ಬಿಲ್ ಪಾವತಿಸಲು ನಿರಾಕರಿಸಿರುವ ಜನರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: Karnataka Elections 2023: ಬಿಜೆಪಿ ಸೋಲಿಗೆ ನಳೀನ್, ಸಂತೋಷ್ ಹೊಣೆಗಾರರಲ್ಲ- ವಿಜಯೇಂದ್ರ

ನಾವು ಹಣ ಪಾವತಿಸುವುದಿಲ್ಲವೆಂದು ಹೇಳಿದ ಜನರಿಗೆ ವಿದ್ಯುತ್ ಪ್ರತಿನಿಧಿಗೆ ಅವಾಜ್ ಹಾಕಿದ್ದಾರೆ. ಸರ್ಕಾರದ ಆದೇಶ ಅಧಿಕೃತವಾಗಿ ಜಾರಿಗೆ ಬರುವವರೆಗೂ ಹಣ ಪಾವತಿಸಬೇಕೆಂದು ತಿಳಿಸಿದ್ದಾರೆ. ಮಾತಿಗೆ ಜಗ್ಗದ ಗ್ರಾಮಸ್ಥರು ಆದೇಶದ ಬಗ್ಗೆ ಕಾಂಗ್ರೆಸ್ ಪಕ್ಷದವರನ್ನು ಕೇಳಿ. ನಮ್ಮ ಗ್ರಾಮದಲ್ಲಿ ಯಾರು ಈ ತಿಂಗಳಿನಿಂದ ಹಣ ಪಾವತಿಸುವುದಿಲ್ಲ ಅಂತಾ ಖಂಡತುಂಡವಾಗಿ ಹೇಳಿದ್ದಾರೆ.

200 ಯೂನಿಟ್‌ವರೆಗೆ ಉಚಿತ ವಿದ್ಯುತ್‌

ಇದು ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಯಾತ್ರೆ ವೇಳೆ ಘೋಷಿಸಿದ ಮೊದಲ ಗ್ಯಾರಂಟಿಯಾಗಿದೆ. ಕಾಂಗ್ರೆಸ್‌ ಪಕ್ಷವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿಮನೆಗೆ ತಿಂಗಳಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುತ್ತೇವೆಂದು ಘೋಷಿಸಲಾಗಿತ್ತು. ಇದಕ್ಕೆ ಗೃಹಜ್ಯೋತಿ ಯೋಜನೆ ಎಂದು ಹೆಸರಿಸಲಾಗಿತ್ತು. ಹೀಗಾಗಿ ಕಾಂಗ್ರೆಸ್ ಘೋಷಿಸಿದಂತೆ ಉಚಿತ ವಿದ್ಯುತ್ ನೀಡಲಿ, ನಾವ್ಯಾಕೆ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News