ಬೆಂಗಳೂರು: ಕರ್ನಾಟಕಕ್ಕೆ ಕಾಂಗ್ರೆಸ್ ಅಂತಿಮ ಸೂತ್ರ ನೀಡಿದ್ದು, ಇದಾದ ಬಳಿಕ ಮುಖ್ಯಮಂತ್ರಿ ಯಾರೆಂಬ ಸಸ್ಪೆನ್ಸ್ ಬಹುತೇಕ ಅಂತ್ಯಗೊಂಡಿದೆ. ಮೂಲಗಳ ಪ್ರಕಾರ ಸಿದ್ದರಾಮಯ್ಯನವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಡಿಕೆಶಿ 2024ರವರೆಗೆ ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೆ. ಇದಲ್ಲದೆ ಅವರಿಗೆ ಪ್ರಮುಖ ಖಾತೆಯನ್ನು ಸಹ ನೀಡಲಾಗುತ್ತದೆ. ಮೂಲಗಳ ಪ್ರಕಾರ ಮೇ 18ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಈ ನಡುವೆ ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿರುವ ಖಾಸಗಿ ಹೋಟೆಲ್ ಹೊರಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬೆಂಬಲಿಗರು ತಮ್ಮ ನಾಯಕರ ಪರ ಘೋಷಣೆಗಳನ್ನು ಕೂಗಿದ್ದಾರೆ. ಇದು ಇಬ್ಬರು ನಾಯಕರ ಅಭಿಮಾನಿಗಳ ನಡುವಿನ ಜಟಾಪಟಿಗೆ ಕಾರಣವಾಗಿತ್ತು. ಡಿಕೆಶಿ ಪರ ಅಭಿಮಾನಿಗಳು ಡಿಕೆ ಡಿಕೆ ಎಂದು ಕೂಗಿದರೆ, ಸಿದ್ದರಾಮಯ್ಯರ ಅಭಿಮಾನಿಗಳು ಸಿದ್ದು ಸಿದ್ದು ಎಂದು ಘೋಷಣೆ ಕೂಗುತ್ತಿದ್ದರು.
ಇದನ್ನೂ ಓದಿ: ಭಾವನಾತ್ಮಕ ಮತಯಾಚನೆ ಮತ್ತು ಧ್ರುವೀಕರಣ: ಕರ್ನಾಟಕದಲ್ಲಿ ತಿರುಮಂತ್ರವಾಯಿತೇ ಬಿಜೆಪಿಯ ಗೆಲುವಿನ ತಂತ್ರ?
ಡಿ.ಕೆ.ಶಿವಕುಮಾರ್ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂಬುದು ಅವರ ಬೆಂಬಲಿಗರ ಆಗ್ರಹವಾಗಿದೆ. ಡಿಕೆಶಿಗೆ 70-75 ಶಾಸಕರ ಬೆಂಬಲವಿದೆ ಎಂದು ಮೂಲಗಳು ಹೇಳಿವೆ. ಅಷ್ಟೇ ಅಲ್ಲ ಬಂಡಾಯದ ಸೂಚನೆಯನ್ನೂ ನೀಡಿದ್ದಾರೆ. 2024ರ ದೃಷ್ಟಿಯಿಂದ ಒಬಿಸಿ ಕುರುಬ ಸಮುದಾಯದಿಂದ ಬರುವ ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು, ಒಕ್ಕಲಿಗ ಸಮುದಾಯದ ಡಿಕೆಶಿ ಉಪ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್ ನಿರ್ಧರಿಸಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ ಯಾವುದೇ ಹಿರಿಯ ನಾಯಕರನ್ನು ಅಸಮಾಧಾನಗೊಳಿಸಲು ಬಯಸುವುದಿಲ್ಲ. ಸಿದ್ದರಾಮಯ್ಯಗೆ ಸಾಕಷ್ಟು ಜನಪ್ರಿಯತೆ ಇರಬಹುದು, ಆದರೆ ಡಿಕೆಶಿಗೆ ಹೆಚ್ಚು ಶಾಸಕರ ಬೆಂಬಲವಿದೆ.
ಡಿಕೆಶಿ ಬಳಿ 70 ರಿಂದ 75 ಶಾಸಕರಿದ್ದಾರೆ ಎನ್ನಲಾಗುತ್ತಿದೆ. ಇದೀಗ ಕಾಂಗ್ರೆಸ್ ಡಿಕೆಶಿ ಅವರ ವಿರುದ್ಧ ಇಡಿ ಪ್ರಕರಣಗಳಿರುವುದರಿಂದ 2024ರವರೆಗೆ ತನ್ನ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಕೇಳುತ್ತಿದೆ. ಡಿಕೆಶಿಗೆ ಮುಂದೆ ಬಿಜೆಪಿ ಸಮಸ್ಯೆ ಮಾಡಬಹುದು ಎಂಬ ಅಂದಾಜಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಕಾಂಗ್ರೆಸ್ನಲ್ಲಿ ಸಿಎಂ ಯಾಗುತ್ತಾರೆ ಅನ್ನೋದು ಇನ್ನೂ ಅಧಿಕೃತವಾಗಿಲ್ಲ. ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಯಾರು ಸಿಎಂ ಅನ್ನೋದನ್ನು ಘೋಷಿಸಬೇಕಿದೆ. ಸಿದ್ದರಾಮಯ್ಯ vs ಡಿಕೆಶಿ ನಡುವಿನ ಈ ಕದನದಲ್ಲಿ ಯಾರಿಗೆ ಸಿಎಂ ಪಟ್ಟ ಸಿಗುತ್ತದೋ ಕಾದು ನೋಡಬೇಕಿದೆ.
ಇದನ್ನೂ ಓದಿ: Karnataka Elections 2023: ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬೆಂಬಲಿಗರ ಪಟ್ಟು..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.