200 ಯೂನಿಟ್ ಉಚಿತ ವಿದ್ಯುತ್,‌ 13 ಸಾವಿರ ಕೋಟಿ ಆರ್ಥಿಕ ಹೊರೆ: ಕೆಜೆ ಜಾರ್ಜ್

ಬೆಂಗಳೂರು: ಗೃಹ ಜ್ಯೋತಿ ಯೋಜನೆ ಜಾರಿಗೆ ಒಟ್ಟು 13 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದರು. ಬೆಸ್ಕಾಂ ಕಚೇರಿಯಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೃಹ ಜ್ಯೋತಿ ಯೋಜನೆ ಜಾರಿಗೆ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ. 200 ಯೂನಿಟ್ ವರಗೆ ಉಚಿತ ನೀಡಲಾಗುತ್ತದೆ.

Written by - Savita M B | Last Updated : Jun 7, 2023, 02:24 PM IST
  • ಉಚಿತವಾಗಿ ವಿದ್ಯುತ್ ನೀಡಲಾಗುತ್ತದೆ
  • ಜೂನ್ 15 ರಿಂದ ಯೋಜನೆಯನ್ನು ಜಾರಿ ಮಾಡುತ್ತೇವೆ.
  • ಹಕರು ಸರಾಸರಿ ಬಿಲ್ ಗಿಂತ ಹೆಚ್ಚು ಉಪಯೋಗ ಮಾಡಿದರೆ ಹೆಚ್ಚುವರಿ ಬಳಕೆಗೆ ಬಿಲ್ ಕಟ್ಟಬೇಕಿದೆ ಎಂದರು.
200 ಯೂನಿಟ್ ಉಚಿತ ವಿದ್ಯುತ್,‌ 13 ಸಾವಿರ ಕೋಟಿ ಆರ್ಥಿಕ ಹೊರೆ: ಕೆಜೆ ಜಾರ್ಜ್  title=

Congress Guarantee : ಗೃಹ ಬಳಕೆ ಬಳಕೆದಾರರು ಸರಾಸರಿ ಒಂದು ವರ್ಷ ಬಳಕೆ ಮಾಡಿದ ವಿದ್ಯುತ್ ಅಂಕಿ ಅಂಶಗಳನ್ನು ಪಡೆದುಕೊಂಡು ಉಚಿತವಾಗಿ ವಿದ್ಯುತ್ ನೀಡಲಾಗುತ್ತದೆ ಎಂದರು. ಜೂನ್ 15 ರಿಂದ ಯೋಜನೆಯನ್ನು ಜಾರಿ ಮಾಡುತ್ತೇವೆ. ಗ್ರಾಹಕರು ಸರಾಸರಿ ಬಿಲ್ ಗಿಂತ ಹೆಚ್ಚು ಉಪಯೋಗ ಮಾಡಿದರೆ ಹೆಚ್ಚುವರಿ ಬಳಕೆಗೆ ಬಿಲ್ ಕಟ್ಟಬೇಕಿದೆ ಎಂದರು.

ರಾಜ್ಯದಲ್ಲಿ ಒಟ್ಟು  2. 16 ಕೋಟಿ ಗ್ರಾಹಕರು ಇದ್ದಾರೆ, ಈ ಪೈಕಿ 200 ಯೂನಿಟ್ ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರು 2.14 ಕೋಟಿ ಇದ್ದಾರೆ. ಈ ಗ್ರಾಹಕರು ಸರಾಸರಿ  53 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಾರೆ.‌ ಎರಡು ಲಕ್ಷ ಜನರು 200 ಯೂನಿಟ್ ಹೆಚ್ಚು ಬಳಕೆ ಮಾಡುತ್ತಾರೆ ಎಂದು‌ ತಿಳಿಸಿದರು. ಉಚಿತ ಯೋಜನೆ ಅಡಿಯಲ್ಲಿ ಗ್ರಾಹಕರು ನಿಗದಿತ ಶುಲ್ಕವನ್ನು ಕಟ್ಟುವ ಹಾಗಿಲ್ಲ.  ಅದರೆ ಸರಾಸರಿ ಬಳಕೆಗಿಂತ ಹೆಚ್ಚುವರಿ ಬಳಕೆ ಮಾಡಿದರೆ ಅಂತಹ ಗ್ರಾಹಕರು  ನಿಗದಿತ ಶುಲ್ಕ ಕಟ್ಟಬೇಕಿದೆ ಎಂದು‌ ತಿಳಿಸಿದರು.

ಇದನ್ನೂ ಓದಿ-Crime News : ಪಾರ್ಟಿ ಕೊಡಿಸಿದವನಿಗೆ ಥ್ಯಾಂಕ್ಸ್‌ ಬದಲಾಗಿ, ತಲೆ ಬುರುಡೆಯನ್ನೇ ಬಿಚ್ಚಿದ್ದ ಸ್ನೇಹಿತರು!

ಅರ್ಜಿ ಸಲ್ಲಿಕೆ ಹೇಗೆ
ಸೇವಾಸಿಂಧು ಪೋರ್ಟಲ್ ನಲ್ಲಿ ಗೃಹ  ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಂಪ್ಯೂಟರ್, ಮೊಬೈಲ್ ನಿಂದ ಆಕ್ಸಸ್ ಪಡೆಯಬಹುದಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್ ಗಳಲ್ಲಿ ಅವಕಾಶ.  ಜೂನ್‌ 15 ರಿಂದ ಪ್ರಾರಂಭ ಮಾಡುತ್ತೇವೆ. ಸರ್ವರ್ ಸಮಸ್ಯೆ ಆಗದಂತೆಯೂ ಕ್ರಮ ಕೈಗೊಳ್ಳಲಾಗುವುದು.

ಬಾಡಿಗೆದಾರರು ಸೌಲಭ್ಯ ಹೇಗೆ ಪಡೆಯುವುದು?
ಬಾಡಿಗೆದಾರರು ಆಧಾರ್ ಹಾಗೂ ಆರ್ ಆರ್ ಕೊಡಬೇಕು ಅಥವಾ  ಲೀಜ್ ಅಗ್ರಿಮೆಂಟ್, ಓಟರ್ ಐಡಿ ಅಥವಾ ಕರಾರು ಪತ್ರವನ್ನು ಕೊಡಬೇಕು. ನಾವು ಬಾಡಿಗೆ ಮನೆಯಲ್ಲಿ ಇದ್ದೇವೆ ಎಂಬ ಬಗ್ಗೆ ದಾಖಲೆ‌ ಕೊಡಬೇಕಿದೆ.

ಇದನ್ನೂ ಓದಿ-Crime News : ಪಾರ್ಟಿ ಕೊಡಿಸಿದವನಿಗೆ ಥ್ಯಾಂಕ್ಸ್‌ ಬದಲಾಗಿ, ತಲೆ ಬುರುಡೆಯನ್ನೇ ಬಿಚ್ಚಿದ್ದ ಸ್ನೇಹಿತರು!

ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಯಾವಾಗ? 
ಜೂನ್ 15 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಅರ್ಜಿ ಸಲ್ಲಿಕೆಗೆ ಜುಲೈ 5 ಕೊನೆಯ ದಿನವಾಗಿದೆ. ಹೊಸ ಮನೆ ನಿರ್ಮಾಣ ಮಾಡಿದವರು ಹಾಗೂ ಬಾಡಿಗೆದಾರ ಹೊಸತಾಗಿ ಬಂದರೆ ಅಂತಹ ಗ್ರಾಹಕರಿಗೆ ಈ ಯೋಜನೆ ಅನ್ವಯ ಆಗುತ್ತಾ? ಎಂಬ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News