Crime News : ಪಾರ್ಟಿ ಕೊಡಿಸಿದವನಿಗೆ ಥ್ಯಾಂಕ್ಸ್‌ ಬದಲಾಗಿ, ತಲೆ ಬುರುಡೆಯನ್ನೇ ಬಿಚ್ಚಿದ್ದ ಸ್ನೇಹಿತರು!

Bengaluru Crime News: ಒಬ್ಬ ವ್ಯಕ್ತಿಗೆ ಗಂಡು ಮಗುವಾದ ಖುಷಿಗೆ ಸ್ನೇಹಿತರಿಗೆ ಪಾರ್ಟಿ ಆರೆಂಜ್‌ ಮಾಡಿದ್ದನು. ಪಾರ್ಟಿ ಸ್ವೀಕರಿಸಿದ ಸ್ನೇಹಿತರು ತಮ್ಮ ಗೆಳೆಯನಿಗೆ ಥ್ಯಾಂಕ್ಸ್‌ ಹೇಳುವ ಬದಲಾಗಿ ಆತನ ತಲೆ ಬುರುಡೆಯನ್ನೇ ಬಿಚ್ಚಿರುವ ಪ್ರಸಂಗ ನಡೆದಿದೆ. 

Written by - Zee Kannada News Desk | Last Updated : Jun 7, 2023, 01:42 PM IST
  • ಪಾರ್ಟಿ ಕೊಡಿಸಿದವನಿಗೆ ಬಿಯರ್‌ ಬಾಟಲ್ನಿಂದ ಹಲ್ಲೆ ನಡೆಸಿದ ಸ್ನೇಹಿತರು
  • ಥ್ಯಾಂಕ್ಸ್‌ ಬದಲಾಗಿ, ತಲೆ ಬುರುಡೆಯನ್ನೇ ಓಪನ್
  • ತಲೆ ಬುರುಡೆಯನ್ನೇ ಬಿಚ್ಚಿರುವ ಪ್ರಸಂಗ ಸಿಲಿಕಾನ್ ಸಿಟಿಯಲ್ಲಿ ಘಟನೆ ನಡೆದಿದೆ
Crime News : ಪಾರ್ಟಿ ಕೊಡಿಸಿದವನಿಗೆ ಥ್ಯಾಂಕ್ಸ್‌ ಬದಲಾಗಿ, ತಲೆ ಬುರುಡೆಯನ್ನೇ ಬಿಚ್ಚಿದ್ದ ಸ್ನೇಹಿತರು! title=

ಬೆಂಗಳೂರು: ಒಬ್ಬ ವ್ಯಕ್ತಿಗೆ ಗಂಡು ಮಗುವಾದ ಖುಷಿಗೆ ಸ್ನೇಹಿತರಿಗೆ ಪಾರ್ಟಿ ಆರೆಂಜ್‌ ಮಾಡಿದ್ದನು. ಪಾರ್ಟಿ ಸ್ವೀಕರಿಸಿದ ಸ್ನೇಹಿತರು ತಮ್ಮ ಗೆಳೆಯನಿಗೆ ಥ್ಯಾಂಕ್ಸ್‌ ಹೇಳುವ ಬದಲಾಗಿ ಆತನ ತಲೆ ಬುರುಡೆಯನ್ನೇ ಬಿಚ್ಚಿರುವ ಪ್ರಸಂಗ ಸಿಲಿಕಾನ್ ಸಿಟಿಯ ಅಮೃತಹಳ್ಳಿ ಬಳಿ ಇರುವ ಈಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದೆ.

ಇತ್ತೀಚೇಗೆ ಎಲ್ಲವೂ ಬದಲಾಣೆ ಅಂಚಿನಲ್ಲಿದೆ, ಫ್ರೇಂಡ್‌ಶಿಪ್‌ ಎಂದರೆ ಅದೊಂದು ಕಾಲದಲ್ಲಿ ಉತ್ತಮ ಸಂಬಂಧ ಎಂದರೆ ಗೆಳೆತನವೇ ಆಗಿತ್ತು. ಆದರೆ ಈ ಪ್ರಸಂಗದಲ್ಲಿ ಸಂಭ್ರಮ ಬದಲಾಗಿ ರಕ್ತಪಾತ ಆಗಿದೆ. 

ಇದನ್ನೂ ಓದಿ: ಶಾಲಾ ಶಿಕ್ಷಕನಿಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಅವಾಚ್ಯ ಶಬ್ದಗಳಿಂದ ನಿಂದನೆ; ಕಾನ್‌ಸ್ಟೆಬಲ್‌ ವಿರುದ್ಧ ಕ್ರಮ!

ಹೌದು,

ರಂಗನಾಥ್ ಎಂಬುವನು ಸ್ವಿಗ್ಗಿ ಡೆಲಿವರಿ ಬಾಯ್  ಆಗಿ ಕೆಲಸ ಮಾಡಿಕೊಂಡಿದ್ದನು. ಈತನ ಮಡದಿಗೆ ಕೆಲವು ದಿನಗಳ ಹಿಂದೆ ಗಂಡು ಮಗು ಜನಿಸಿದ್ದರಿಂದ ಖುಷಿಯಲ್ಲಿ ಸ್ನೇತರೆಲ್ಲಾರಿಗೂ ಪಾರ್ಟಿಗಾಗಿ ಮನೆಗೆ ಕೆರಸಿಕೊಂಡಿದ್ದನು.

ಆದರೆ ವೇಳೆ ಕುಡಿದ ಮತ್ತಲ್ಲಿ ಸ್ನೇಹಿತರು ಹಾಗೂ ರಂಗನಾಥ್ ನಡುವೆ ರಾಜಕೀಯ ಮಾತುಗಳು ಆರಂಭವಾಗಿ, ಪಾರ್ಟಿಯಲ್ಲಿ ರಂಗನಾಥ್‍ ಕಾಂಗ್ರೆಸ್‌ ಪರ ಮಾತನಾಡಿದ್ದಾನೆ.  ಆತನ ಸ್ನೇಹಿರಾದ  ಮನೋಜ್, ಮಧುಸೂದ್, ಪ್ರಸಾದ್‍ ಬಿಜೆಪಿ ಪರ ಮಾತಾನಾಡಿದ್ದಾರೆ.

ಇದನ್ನೂ ಓದಿ: Guarantees Implement: ಜುಲೈ 1 ರಿಂದ ಬಿಪಿಎಲ್​ ಮತ್ತು ಅಂತ್ಯೋದಯ ಕಾರ್ಡ್​ದಾರರಿಗೆ ‘ಅನ್ನಭಾಗ್ಯ’ - ಸಿಎಂ ಸಿದ್ದರಾಮಯ್ಯ

ಮಾತು ಅತೀರೇಖ ವಾಗಿದ್ದರಿಂದ ಕಾಂಗ್ರೆಸ್ ಪರ ಮಾತನಾಡುತ್ತಿದ್ದ ರಂಗನಾಥ್‍ಗೆ ಸ್ನೇಹಿತರು ಪಕ್ಕದಲ್ಲಿದ ಬಿಯರ್‌ ಬಾಟಲ್ನಿಂದ ತಲೆಗೆ ಹೊಡೆದಿದ್ದಾರೆ. ತಲೆ ಪೆಟ್ಟು ಬಿದ್ದ ಪರಿಣಾಮ ರಂಗನಾಥ್‍ ತೀವ್ರ ರಕ್ತಪಾತವಾಗಿದೆ. 

ಸದ್ಯ ರಂಗನಾಥ್‍ ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣ ಸಂಬಂಧ  ಹಲ್ಲೆ ಸಂಬಂಧ  ಮಧುಸೂಧನ್, ಮನೋಜ್ ಕುಮಾರ್ ಮತ್ತು ಬಿ ಪ್ರಸಾದ್ ಎಂಬುವವರನ್ನು ವಶಕ್ಕೆ ಪಡೆದು ಐಪಿಸಿ 324 ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News