ಮೋದಿಜಿ 9 ವರ್ಷಗಳ ದೂರದೃಷ್ಟಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿ: ಬಿಜೆಪಿ

PM Modi In USA: ಪ್ರಸ್ತುತ ಭೇಟಿಯ ವೇಳೆ ಉಭಯ ರಾಷ್ಟ್ರಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಲಿವೆ.  ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು 15 ಪ್ರಿಡೇಟರ್‌ (ಎಂಕ್ಯೂ9) ಡ್ರೋಣ್‌ಗಳನ್ನು ಅಮೆರಿಕ ಭಾರತಕ್ಕೆ ಸರಬರಾಜು ಮಾಡಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Jun 21, 2023, 06:16 PM IST
  • ಮೋದಿಜಿಯ 9 ವರ್ಷಗಳ ಕ್ಷಮತೆ, ದಕ್ಷತೆ & ದೂರದೃಷ್ಟಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿಸಿದೆ
  • ಭಾರತದ ಜೊತೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳುವುದು ಒಬಾಮಾರಿಂದ ಬೈಡನ್‌ವರೆಗೆ ಹೆಚ್ಚುಗಾರಿಕೆಯಾಗಿದೆ
  • ಅಮೆರಿಕ ಸರ್ಕಾರ ಮಾತ್ರವಲ್ಲ, ಗಣ್ಯರು ಹಾಗೂ ಹೂಡಿಕೆದಾರರು ಮೋದಿಜಿ ಜೊತೆ ಭೇಟಿಯಾಗಲು ಉತ್ಸುಕರಾಗಿದ್ದಾರೆ
ಮೋದಿಜಿ 9 ವರ್ಷಗಳ ದೂರದೃಷ್ಟಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿ: ಬಿಜೆಪಿ   title=
ಅಮೆರಿಕದಲ್ಲಿ ‘ನಮೋ’

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಜಿಯವರ 9 ನಿರಂತರ ವರ್ಷಗಳ ಕ್ಷಮತೆ, ದಕ್ಷತೆ ಹಾಗೂ ದೂರದೃಷ್ಟಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿಸಿದೆ ಎಂದು ಬಿಜೆಪಿ ಹೇಳಿದೆ. ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿರುವ ಹಿನ್ನೆಲೆ ಬಿಜೆಪಿ ಬುಧವಾರ ಸರಣಿ ಟ್ವೀಟ್ ಮಾಡಿದೆ.

‘ಭಾರತೀಯರು ಅಮೆರಿಕ ವೀಸಾ ಪಡೆದು ಅಲ್ಲಿಗೆ ಹೋಗುವುದಲ್ಲ, ಭಾರತೀಯರನ್ನು ಅಮೆರಿಕವೇ ವೀಸಾ ನೀಡಿ ಬರಮಾಡಿಕೊಳ್ಳುವ ಮಟ್ಟಕ್ಕೆ ನಾವು ದೇಶವನ್ನು ಕೊಂಡೊಯ್ಯಬೇಕು ಎಂಬ ಇಂಗಿತವನ್ನು ಮೋದಿಯವರು ಪ್ರಧಾನಿ ಆಗುವ ಮೊದಲು 2014ರಲ್ಲೇ ವ್ಯಕ್ತಪಡಿಸಿದ್ದರು. ಈಗ ಮೋದಿಜಿಯವರ 9 ನಿರಂತರ ವರ್ಷಗಳ ಕ್ಷಮತೆ, ದಕ್ಷತೆ ಹಾಗೂ ದೂರದೃಷ್ಟಿಯ ಪರಿಣಾಮ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿಸಿದೆ ಎಂಬುದಕ್ಕೆ ಅವರ ಈ ಬಾರಿಯ ಅಮೆರಿಕ ಪ್ರವಾಸವೇ ಸಾಕ್ಷಿ. ಭಾರತದ ಜೊತೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳುವುದು ಒಬಾಮಾ ಅವರಿಂದ ಬೈಡನ್‌ವರೆಗೆ ಎಲ್ಲಾ ಅಮೆರಿಕ ಅಧ್ಯಕ್ಷರಿಗೆ ಹೆಚ್ಚುಗಾರಿಕೆಯಾಗಿದೆ. ಅಮೆರಿಕ ಸರ್ಕಾರ ಮಾತ್ರವಲ್ಲ, ಖಾಸಗಿ ವಲಯದ ಗಣ್ಯರು, ಹೂಡಿಕೆದಾರರು ಹಾಗೂ ಚಿಂತಕರು ಕೂಡ ಮೋದಿಜಿ ಜೊತೆ ಭೇಟಿಯಾಗಲು ಉತ್ಸುಕರಾಗಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Photo Gallery: ಸುವರ್ಣ ವಿಧಾನಸೌಧ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ

‘ಪ್ರಸ್ತುತ ಭೇಟಿಯ ವೇಳೆ ಉಭಯ ರಾಷ್ಟ್ರಗಳು ಹಲವು ಒಪ್ಪಂದಗಳಿಗೆ ಸಹಿ ಹಾಕಲಿವೆ.  ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು 15 ಪ್ರಿಡೇಟರ್‌ (ಎಂಕ್ಯೂ9) ಡ್ರೋಣ್‌ಗಳನ್ನು ಅಮೆರಿಕ ಭಾರತಕ್ಕೆ ಸರಬರಾಜು ಮಾಡಲಿದೆ. ಇದು ಒಂದು ಬಾರಿಯ ವ್ಯವಹಾರವಾಗಿರದೆ ಪ್ರಿಡೇಟರ್‌ ತಯಾರಿಸುವ ಕಂಪನಿ ಭಾರತದ ಭಾರತ್‌ ಫೋರ್ಜ್‌ ಜೊತೆಗೆ ಬಿಡಿಭಾಗ ತಯಾರಿಯ ಒಪ್ಪಂದವನ್ನೂ ಮಾಡಿಕೊಂಡಿದೆ. ಇದರಿಂದಾಗಿ ಭವಿಷ್ಯದಲ್ಲಿ ಭಾರತದಲ್ಲೇ ಡ್ರೋಣ್‌ ತಯಾರಿಗೆ ವೇಗ ಸಿಗಲಿದೆ’ ಎಂದು ಬಿಜೆಪಿ ಹೇಳಿದೆ.

‘ವೈಮಾನಿಕ ಎಂಜಿನ್‌ ತಯಾರಿಸುವ ಜನರಲ್‌ ಇಲೆಕ್ಟ್ರಿಕ್‌ ಕಂಪನಿ ಭಾರತದ ಎಚ್‌ಎಎಲ್‌ ಜೊತೆ ಯುದ್ಧ ವಿಮಾನ ಎಂಜಿನ್ ತಯಾರಿ ತಂತ್ರಜ್ಞಾನವನ್ನು ಹಂಚಿಕೊಂಡು ಮೇಕ್‌ ಇನ್‌ ಇಂಡಿಯಾಕ್ಕೆ ಉತ್ತೇಜನ ನೀಡಲಿದೆ. ಈಗಾಗಲೇ ತೇಜಸ್‌ನಂಥ ಅತ್ಯುತ್ತಮ ಯುದ್ಧ ವಿಮಾನ ತಯಾರಿಸುತ್ತಿರುವ ಎಲ್‌ಎಎಲ್‌ ಇನ್ನು ಮುಂದೆ ಜೆಟ್‌ ಎಂಜಿನ್ನನ್ನೂ ತಯಾರಿಸಲಿದೆ. ಜೊತೆಗೆ ರಕ್ಷಣಾ ವಿಭಾಗವೂ ಸೇರಿದಂತೆ ಎಲ್ಲಾ ಇಲೆಕ್ಟ್ರಾನಿಕ್‌ ಉಪಕರಣಗಳಿಗೆ ಬೇಕಾಗುವ ಸೆಮಿಕಂಡಕ್ಟರ್‌ (ಕಂಪ್ಯೂಟರ್‌ ಚಿಪ್) ತಯಾರಿ ಬಗ್ಗೆ ವಿವಿಧ ಹಂತಗಳ ಒಪ್ಪಂದಗಳು ಈ ಬಾರಿ ನಡೆಯಲಿವೆ. ಇದು ಭಾರತದ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವುದಲ್ಲದೆ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಹಕಾರಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಅಕ್ಕಿ ಗ್ಯಾರಂಟಿ ಬಗ್ಗೆ ದಿನಕ್ಕೊಂದು ನೆಪ: ಕಾಂಗ್ರೆಸ್ ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

‘ಇವೆಲ್ಲದರಿಂದ ಭಾರತದ ಕೈಗಾರಿಕಾ ಹಾಗೂ ಆರ್ಥಿಕ ಬೆಳವಣಿಗೆ ಸಾಧ್ಯ ಎಂಬುದು ಒಂದು ಕಡೆಯಾದರೆ ಭಾರತ, ಭಾರತೀಯತೆ ಮತ್ತು ಭಾರತದ ಸಂಸ್ಕೃತಿಗೆ ಜಾಗತಿಕ ಮಟ್ಟದಲ್ಲಿ ಗೌರವ ಸಿಗುತ್ತಿದೆ. ಭಾರತದ ಸಂಸ್ಕೃತಿ ಮತ್ತು ವಿಜ್ಞಾನವಾದ ಯೋಗವನ್ನು ಇಂದು ಅಮೆರಿಕವೂ ಆರಾಧಿಸುತ್ತಿದೆ. ವಿಶ್ವಸಂಸ್ಥೆಯಲ್ಲಿಯೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇಂದು ಮೋದಿಯವರದ್ದೇ ಮುಂದಾಳತ್ವ. ಭಾರತೀಯತೆಗೆ ವಿಶ್ವಮನ್ನಣೆ ತಂದು ಕೊಟ್ಟ ನಾಯಕ ನಮ್ಮ ಮೋದಿಜಿ’ ಎಂದು ಬಿಜೆಪಿ ಹೇಳಿಕೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News