ಹಾನಗಲ್ ಪ್ರಕರಣವನ್ನು ದುಡ್ಡು ಕೊಟ್ಟು ಮುಚ್ಚಿಹಾಕಲು ಯತ್ನ : ಬಸವರಾಜ ಬೊಮ್ಮಾಯಿ

Haveri gang rape : ತನಿಖೆ ನೆಪದಲ್ಲಿ ಸಂತ್ರಸ್ಥೆಯನ್ನು ಶಿರಸಿಗೆ ಕರದೊಯ್ಯಲಾಗುತ್ತಿದೆ. ಬಿಜೆಪಿ ಮಹಿಳಾ ನಿಯೋಗ ಅಲ್ಲಿಗೆ ಭೇಟಿ ಕೊಡುತ್ತಿದೆ ಅಂತ ಈ ರೀತಿ ಮಾಡುತ್ತಿದ್ದಾರೆ. ಇದೆಲ್ಲ ರಾಜಕಾರಣವನ್ನು ಕಾಂಗ್ರೆಸ್‌ನವರು ಮಾಡುತ್ತಾರೆ. ಅವರಿಂದ ನಾವೇನು ಜಾಸ್ತಿ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Written by - Prashobh Devanahalli | Edited by - Krishna N K | Last Updated : Jan 14, 2024, 02:38 PM IST
  • ಹಾನಗಲ್‌ನಲ್ಲಿ ನಡೆದ ನೈತಿಕ ಪೊಲಿಸ್ ಗಿರಿ ಪ್ರಕರಣ
  • ಸಂತ್ರಸ್ಥರಿಗೆ ಹಣ ಕೊಟ್ಟು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ
  • ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ
ಹಾನಗಲ್ ಪ್ರಕರಣವನ್ನು ದುಡ್ಡು ಕೊಟ್ಟು ಮುಚ್ಚಿಹಾಕಲು ಯತ್ನ : ಬಸವರಾಜ ಬೊಮ್ಮಾಯಿ title=

ಹುಬ್ಬಳ್ಳಿ : ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ನೈತಿಕ ಪೊಲಿಸ್ ಗಿರಿ ಪ್ರಕರಣವನ್ನು ಸಂತ್ರಸ್ಥರಿಗೆ ಹಣ ಕೊಟ್ಟು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾನಗಲ್ ಪ್ರಕರಣವನ್ನು ಅಲ್ಲಿನ ಪೊಲೀಸರು ಸಂತ್ರಸ್ತರಿಗೆ ದುಡ್ಡು ಕೊಟ್ಟು ಆಮಿಷವೊಡ್ಡಿ ಮುಚ್ಚಿ ಹಾಕಲು ಯತ್ನಿಸಿದ್ದರು. ತನಿಖೆಗೆ ಎಸ್.ಐ.ಟಿ ರಚನೆ ಮಾಡಿ. ಸಿಎಂ ಸಿದ್ದರಾಮಯ್ಯ ನಾಳೆ ಹಾವೇರಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿಯಾದರೂ ಎಸ್ಐಟಿ ತನಿಖೆಗೆ ಘೋಷಿಸುತ್ತಾರೆ ಅಂತ ನಿರೀಕ್ಷೆ ಮಾಡುತ್ತೇನೆ ಎಂದರು. 

ಇದನ್ನೂ ಓದಿ: ಸ್ಯಾಂಡಲ್ ವುಡ್ 'ರಾಕ್ಷಸ'ನಾದ ಪ್ರಜ್ವಲ್ ದೇವರಾಜ್

ತನಿಖೆ ನೆಪದಲ್ಲಿ ಸಂತ್ರಸ್ಥೆಯನ್ನು ಶಿರಸಿಗೆ ಕರದೊಯ್ಯಲಾಗುತ್ತಿದೆ. ಬಿಜೆಪಿ ಮಹಿಳಾ ನಿಯೋಗ ಅಲ್ಲಿಗೆ ಭೇಟಿ ಕೊಡುತ್ತಿದೆ ಅಂತ ಈ ರೀತಿ ಮಾಡುತ್ತಿದ್ದಾರೆ. ಇದೆಲ್ಲ ರಾಜಕಾರಣವನ್ನು ಕಾಂಗ್ರೆಸ್ ನವರು ಮಾಡುತ್ತಾರೆ. ಅವರಿಂದ ನಾವೇನು ಜಾಸ್ತಿ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದರು.

ಇನ್ನು ರಾಮ ಮಂದಿರ ವಿಚಾರದಲ್ಲಿ ಸಿಎಂ ಯೂಟರ್ನ್ ಹೊಡೆದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯಗೆ ತಡವಾಗಿಯಾದರೂ ಬುದ್ಧಿ ಬಂದಿದೆ. ಅವರ ಹೆಸರಲ್ಲಿಯೇ ರಾಮ ಇದ್ದಾನೆ. ಅಧಿಕಾರದ ರಾಜಕಾರಣಕ್ಕಾಗಿ ತಮ್ಮ ಹೆಸರಿನಲ್ಲಿರುವ ರಾಮನನ್ನೇ ಅವರು ಕಡೆಗಣಿಸಿದರು.

ಇದನ್ನೂ ಓದಿ:Krithi Shetty : ಬ್ಲೂ ಕಲರ್‌ ವ್ಹಾವ್‌..! ಸೀರೆಯಲ್ಲಿ ಮುದ್ದು ಗೊಂಬೆ ಕೃತಿ

ಕೊನೆಗೂ ಅವರಿಗೆ ಜ್ಞಾನೋದಯವಾಗಿದೆ. ಜನವರಿ 22ರ ನಂತರ ಅಯೋಧ್ಯೆಗೆ ಹೋಗುವುದಾಗಿ ಹೇಳಿದರು. ನಂತರ ಈಗ ಹೋಗಲ್ಲ ಅಂತಿದ್ದಾರೆ. ಅವರ ಆತ್ಮಸಾಕ್ಷಿ ಹೋಗಬೇಕಂತಿದೆ. ಆದರೆ ಹೈಕಮಾಂಡ್ ಬೇಡವೆನ್ನುತ್ತಿದೆ. ಸಿದ್ದರಾಮಯ್ಯ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಗೊಂದಲಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News