ಬಿಜೆಪಿ ಅವಲೋಕನ ಸಭೆಯಲ್ಲಿ ಸೋಲಿಗೆ ಕಾರಣರಾದ ಜೋಷಿ, ಸಂತೋಷ್ ಏಕಿಲ್ಲ: ಕಾಂಗ್ರೆಸ್ ಪ್ರಶ್ನೆ

BJP Review Meeting: ‘ವಲಸಿಗ vs ಮೂಲ" ಎಂಬ ಒಳಬೇಗುದಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತುಪ್ಪ ಸುರಿದಿದ್ದಾರೆ. ವಲಸೆ ಬಂದವರಿಂದಲೇ ಶಿಸ್ತು ಮಾಯವಾಗಿದೆ ಎಂಬ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೀರಾ ಅಥವಾ ಈಶ್ವರಪ್ಪರನ್ನೇ ಬಾಯಿ ಮುಚ್ಚಿಸುತ್ತೀರಾ ಬಿಜೆಪಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Jun 26, 2023, 04:55 PM IST
  • "ವಲಸಿಗ vs ಮೂಲ" ಎಂಬ ಒಳಬೇಗುದಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತುಪ್ಪ ಸುರಿದಿದ್ದಾರೆ
  • ನಾಯಕನಿಲ್ಲದ ಬಿಜೆಪಿ, ನಾವಿಕನಿಲ್ಲದ ಹಡಗಿನಂತಾಗಿ ಮುಳುಗಿದೆ, ನೆಲ ಕಚ್ಚುವುದೊಂದೇ ಬಾಕಿ!
  • ಬಿಜೆಪಿ ಸಭೆಯಲ್ಲಿ ಸೋಲಿಗೆ ಕಾರಣರಾದ ಸಂತೋಷ್ ಮತ್ತು ಜೋಶಿ ಏಕೆ ಭಾಗವಹಿಸಿಲ್ಲ?
ಬಿಜೆಪಿ ಅವಲೋಕನ ಸಭೆಯಲ್ಲಿ ಸೋಲಿಗೆ ಕಾರಣರಾದ ಜೋಷಿ, ಸಂತೋಷ್ ಏಕಿಲ್ಲ: ಕಾಂಗ್ರೆಸ್ ಪ್ರಶ್ನೆ title=
ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ

ಬೆಂಗಳೂರು: ಬಾಂಬೆ ಟೀಮ್ ಈಗ ಬಿಜೆಪಿಯಲ್ಲಿ ಅನಾಥರ ಟೀಮ್ ಆಗಿದೆ! ಎಂದು ಕಾಂಗ್ರೆಸ್ ಟೀಕಿಸಿದೆ. #BJPvsBJP ಹ್ಯಾಶ್‍ಟ್ಯಾಗ್ ಬಳಸಿ ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರ ಒಳಜಗಳದ ಬಗ್ಗೆ ವ್ಯಂಗ್ಯವಾಡಿದೆ.

‘"ವಲಸಿಗ vs ಮೂಲ" ಎಂಬ ಒಳಬೇಗುದಿಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತುಪ್ಪ ಸುರಿದಿದ್ದಾರೆ. ವಲಸೆ ಬಂದವರಿಂದಲೇ ಶಿಸ್ತು ಮಾಯವಾಗಿದೆ ಎಂಬ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೀರಾ ಅಥವಾ ಈಶ್ವರಪ್ಪರನ್ನೇ ಬಾಯಿ ಮುಚ್ಚಿಸುತ್ತೀರಾ ಬಿಜೆಪಿ? ನಾಯಕನಿಲ್ಲದ ಬಿಜೆಪಿ, ನಾವಿಕನಿಲ್ಲದ ಹಡಗಿನಂತಾಗಿ ಮುಳುಗಿದೆ, ನೆಲ ಕಚ್ಚುವುದೊಂದೇ ಬಾಕಿ!’ ಎಂದು ಕುಟುಕಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಗೃಹ ಜ್ಯೋತಿಗೆ ಭರ್ಜರಿ ಪ್ರತಿಕ್ರಿಯೆ

‘ಬಿಜೆಪಿಯಲ್ಲಿ ಈಗ ಸೋಲಿನ ಆತ್ಮಾವಲೋಕನದ ಹೆಸರಲ್ಲಿ ಸಂತೋಷ ಕೂಟ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಕೂಟದ ನಡುವೆ ಒಬ್ಬರನ್ನೊಬ್ಬರು ಸೋಲಿಸುವ ಅವಲೋಕನ ನಡೆಯುತ್ತಿದೆ! ಈ ಸೋಲಿನ ಅವಲೋಕನಾ ಸಭೆಗಳಿಗೆ ಪ್ರಹ್ಲಾದ್ ಜೋಶಿ, ಬಿ.ಎಲ್.ಸಂತೋಷ್ ಅವರುಗಳು ಭಾಗವಹಿಸದೆ, ತಮ್ಮ ಶಿಷ್ಯಪಡೆಯನ್ನು ಮುಂದೆ ಬಿಟ್ಟಿರುವುದೇಕೆ ಬಿಜೆಪಿ? ಹೀನಾಯ ಸೋಲಿಗೆ ಅವರಿಬ್ಬರೇ ಕಾರಣರಲ್ಲವೇ, ಅವರೇ ಇಲ್ಲದಿದ್ದರೆ ಹೇಗೆ!?’ ಎಂದು ಪ್ರಶ್ನಿಸಿದೆ.

‘ಬಿಜೆಪಿಯ ಒಂದು ಬಣ ಹೊಂದಾಣಿಕೆ ರಾಜಕೀಯದಿಂದ ನಮಗೆ ಸೋಲಾಯಿತು ಎನ್ನುತ್ತಿದೆ. ಮತ್ತೊಂದು ಬಣ ಕಾಂಗ್ರೆಸ್ ಗ್ಯಾರಂಟಿಗಳಿಂದ ನಮಗೆ ಸೋಲಾಯ್ತು ಎನ್ನುತ್ತಿದೆ. ಎರಡೂ ಬಣದವರು ಸತ್ಯ ಹೇಳಲು, ಒಪ್ಪಿಕೊಳ್ಳಲು ತಯಾರಿಲ್ಲ. 40% ಕಮಿಷನ್ ಭ್ರಷ್ಟಾಚಾರದಿಂದ, ದುರಾಡಳಿತದಿಂದ, ಜನಪರ ಚಿಂತನೆಗಳು ಇಲ್ಲದಿರುವುದರಿಂದ, ಹಗರಣಗಳಿಂದ ಸೋಲಾಗಿದ್ದನ್ನು ಒಪ್ಪಿಕೊಳ್ಳದಿದ್ದರೆ ಬಿಜೆಪಿಯದ್ದು ಆತ್ಮಾವಲೋಕನ ಆಗುವುದಿಲ್ಲ, ಆತ್ಮ ವಂಚಕತನ ಆಗುತ್ತದೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಇದನ್ನೂ ಓದಿ: "ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ನವರು ಎಲ್ಲ ಹೋರಾಟಗಳಿಗೂ ಸಿದ್ಧರಾಗಬೇಕಿದೆ"

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News