ಸಿದ್ದರಾಮಯ್ಯ ನೀವು ಎಲ್ಲೇ ಹೋದರೂ ಜನರು ತಿರಸ್ಕರಿಸುವುದು ನಿಶ್ಚಿತ: ಬಿಜೆಪಿ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಂದ ಹಿಡಿದು ಎಲ್ಲ ನಾಯಕರನ್ನು ಏಕವಚನದಲ್ಲಿ ಮಾತನಾಡಿಸುವ ಸಿದ್ದರಾಮಯ್ಯ ಅವರಿಗೆ ರಾಜಕೀಯ ಶಿಷ್ಟಾಚಾರವೇ ತಿಳಿದಿಲ್ಲ.

Written by - Zee Kannada News Desk | Last Updated : Feb 20, 2022, 06:37 AM IST
  • ಸಿದ್ದರಾಮಯ್ಯ ನೀವು ಎಲ್ಲೇ ಹೋದರೂ ಜನರು ತಿರಸ್ಕರಿಸುವುದು ನಿಶ್ಚಿತವೆಂದು ಕುಟುಕಿದ ಬಿಜೆಪಿ
  • ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಬಗ್ಗೆ ಸ್ಪಷ್ಟತೆಯೇ ಇಲ್ಲದ ನಿಮಗೆ ಹೋರಾಟವೇಕೆ?
  • ಎಲ್ಲ ನಾಯಕರನ್ನು ಏಕವಚನದಲ್ಲಿ ಮಾತನಾಡಿಸುವ ಸಿದ್ದರಾಮಯ್ಯರಿಗೆ ರಾಜಕೀಯ ಶಿಷ್ಟಾಚಾರವೇ ತಿಳಿದಿಲ್ಲ
ಸಿದ್ದರಾಮಯ್ಯ ನೀವು ಎಲ್ಲೇ ಹೋದರೂ ಜನರು ತಿರಸ್ಕರಿಸುವುದು ನಿಶ್ಚಿತ: ಬಿಜೆಪಿ    title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ

ಬೆಂಗಳೂರು: ನೀವು ಎಲ್ಲೇ ಹೋದರೂ ಜನರು ತಿರಸ್ಕರಿಸುವುದು ನಿಶ್ಚಿತವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ಗೆ ಬಿಜೆಪಿ ಕುಟುಕಿದೆ. #ಜನವಿರೋಧಿಕಾಂಗ್ರೆಸ್‌ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ(BJP) ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: HD Kumarswamy : '14 ತಿಂಗಳ ಅಧಿಕಾರದಲ್ಲಿ ನಾನು ಪ್ರಥಮ ದರ್ಜೆ ಸಹಾಯಕನಾಗಿದ್ದೆ, ಸಿಎಂ ಆಗಿರಲಿಲ್ಲ'

‘ಕಲಾಪ ಮೊಟಕುಗೊಳಿಸಿದರೆ ಜನರ ಬಳಿ ಹೋಗುತ್ತೇವೆಂದು ಬೆದರಿಕೆ ಹಾಕುತ್ತಿರುವ ಸಿದ್ದರಾಮಯ್ಯ(Siddaramaiah)ನವರೇ ನೀವು ಯಾವ ಕ್ಷೇತ್ರದ ಜನರ ಬಳಿ ಹೋಗುತ್ತೀರಿ? ಮುಂದಿನ ಚುನಾವಣೆ(Assembly Elections)ಯಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಬಗ್ಗೆ ಸ್ಪಷ್ಟತೆಯೇ ಇಲ್ಲದ ನಿಮಗೆ ಹೋರಾಟವೇಕೆ? ನೀವು ಎಲ್ಲೇ ಹೋದರೂ ಜನರು ತಿರಸ್ಕರಿಸುವುದು ನಿಶ್ಚಿತ’ ಅಂತಾ ಟೀಕಿಸಿದೆ.

‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa)ರಿಂದ ಹಿಡಿದು ಎಲ್ಲ ನಾಯಕರನ್ನು ಏಕವಚನದಲ್ಲಿ ಮಾತನಾಡಿಸುವ ಸಿದ್ದರಾಮಯ್ಯ ಅವರಿಗೆ ರಾಜಕೀಯ ಶಿಷ್ಟಾಚಾರವೇ ತಿಳಿದಿಲ್ಲ. ತುಚ್ಛವಾಗಿ ಮಾತನಾಡಿ ನಂತರ ನಾನು ಗ್ರಾಮೀಣ ಪ್ರದೇಶದವ ಎಂಬ ಗುರಾಣಿ ಹಿಡಿಯುವ ಸಿದ್ದರಾಮಯ್ಯ ಅವರನ್ನು ಜನ ಹೋದಲೆಲ್ಲ ತಿರಸ್ಕರಿಸುತ್ತಿದ್ದಾರೆ’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಗೌರವ, ಸಿದ್ದರಾಮಯ್ಯ ಪಾಠ ಮಾಡುವುದು ಅಗತ್ಯವಿಲ್ಲ -ಹೆಚ್.ಡಿ.ಕುಮಾರಸ್ವಾಮಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News