ಜನಾರ್ಧನ ರೆಡ್ಡಿ ಮನೆ ಮೇಲೆ ಸಿಸಿಬಿ ಪೊಲೀಸ್ ದಾಳಿ

ಸಿಸಿಬಿ ಪೊಲೀಸ್ ಅಧಿಕಾರಿ ಮಂಜುನಾಥ ಚೌಧರಿ ನೇತೃತ್ವದ ತಂಡ ಬಳ್ಳಾರಿಯ ಹವಂಬಾವಿಯಲ್ಲಿರುವ ಜನಾರ್ಧನ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

Last Updated : Nov 8, 2018, 10:48 AM IST
ಜನಾರ್ಧನ ರೆಡ್ಡಿ ಮನೆ ಮೇಲೆ ಸಿಸಿಬಿ ಪೊಲೀಸ್ ದಾಳಿ title=

ಬಳ್ಳಾರಿ: ಇಡಿ ಪ್ರಕರಣ ಮುಚ್ಚಿ ಹಾಕಲು ಡೀಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಚಿವ ಜಿ.ಜನಾರ್ಧನ ರೆಡ್ಡಿಯ ಬಳ್ಳಾರಿ ನಿವಾಸದ ಮೇಲೆ ಸಿಸಿಬಿ ಪೊಲೀಸರು ಗುರುವಾರ ಬೆಳಿಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. 

ಸಿಸಿಬಿ ಪೊಲೀಸ್ ಅಧಿಕಾರಿ ಮಂಜುನಾಥ ಚೌಧರಿ ನೇತೃತ್ವದ ತಂಡ ಬಳ್ಳಾರಿಯ ಹವಂಬಾವಿಯಲ್ಲಿರುವ ಜನಾರ್ಧನ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿ, ಮಾವ ಪರಮೇಶ್ವರ್ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಿದರು. ಪೊಲೀಸ್ ದಾಳಿ ನಡೆಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿದ ಶಾಸಕ ಶ್ರೀರಾಮುಲು ಜನಾರ್ಧನ್ ರೆಡ್ಡಿ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದಾರೆ. 

ವಂಚಕ ಅಂಬಿಡೆಂಟ್‌ ಸಂಸ್ಥೆಯೊಂದಿಗೆ ಜನಾರ್ದನ ರೆಡ್ಡಿ 18 ಕೋಟಿ ರೂಪಾಯಿ ಹಣ ವರ್ಗಾವಣೆಗಾಗಿ ಅಂಬಿಕಾ ಜ್ಯುವೆಲ್ಲರ್ಸ್‌ ಮಾಲೀಕ ರಮೇಶ್‌ ಕೊಠಾರಿ ಎಂಬಾತನೊಂದಿಗೆ ಡೀಲ್‌ ಮಾಡಿದ್ದು, ಬಳ್ಳಾರಿಯ ತಾಜ್‌ಮಹಲ್‌ ಜ್ಯುವೆಲ್ಲರಿ ಮಾಲೀಕ ರಮೇಶ್‌ ಬಳ್ಳಾರಿಗೆ 57 ಕೆಜಿ ಚಿನ್ನದ ಗಟ್ಟಿ ರೂಪದಲ್ಲಿ ನೀಡಿದ್ದು ಅದನ್ನು ರೆಡ್ಡಿ ಆಪ್ತ ಅಲಿಖಾನ್‌ಗೆ ಕೊಟ್ಟಿರುವುದಾಗಿ ಇಡಿ ತನಿಖೆ ವೇಳೆ ತಿಳಿದು ಬಂದಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಜನಾರ್ಧನ ರೆಡ್ಡಿ ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ರೆಡ್ಡಿ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದಾರೆ. 
 

Trending News