ʼ13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತಂದೀರಿ..ʼ

13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತಂದೀರಿ, ನಿಮಗೆ ನಾಚಿಕೆ ಆಗ್ಬೇಕು, 13 ಜನರಲ್ಲಿ 12 ಜನರು ಮಂತ್ರಿಗಳಾಗಿದ್ದಾರೆ. ಇವತ್ತು ಜಾರಕಿಹೊಳಿ ಸಿಡಿ ತಗೊಂಡು ಹೋಮ್‌ ಮಿನಿಸ್ಟರ್‌ ಹತ್ತಿರ ಹೋಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಿಜೆಪಿ ವಿರುದ್ಧ ಗುಡುಗಿದರು.

Written by - Krishna N K | Last Updated : Feb 5, 2023, 03:20 PM IST
  • 13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತಂದೀರಿ.
  • ಇವತ್ತು ಜಾರಕಿಹೊಳಿ ಸಿಡಿ ತಗೊಂಡು ಹೋಮ್‌ ಮಿನಿಸ್ಟರ್‌ ಹತ್ತಿರ ಹೋಗಿದ್ದಾರೆ.
  • ಬಿಜೆಪಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಗುಡುಗು.
ʼ13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತಂದೀರಿ..ʼ title=

ಹುಬ್ಬಳ್ಳಿ : 13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತಂದೀರಿ, ನಿಮಗೆ ನಾಚಿಕೆ ಆಗ್ಬೇಕು, 13 ಜನರಲ್ಲಿ 12 ಜನರು ಮಂತ್ರಿಗಳಾಗಿದ್ದಾರೆ. ಇವತ್ತು ಜಾರಕಿಹೊಳಿ ಸಿಡಿ ತಗೊಂಡು ಹೋಮ್‌ ಮಿನಿಸ್ಟರ್‌ ಹತ್ತಿರ ಹೋಗಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಿಜೆಪಿ ವಿರುದ್ಧ ಗುಡುಗಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ನಾನು ಹೆಚ್ಚು ಓಡಾಡ್ತೀದಿನಿ. ಒಡೆದು ಹೋಳಾದಂತಹ ಜೆಡಿಎಸ್ ಕೂಡಿಸೋ ಪ್ರಯತ್ನ ‌ಮಾಡ್ತೀದಿನಿ. ಇವತ್ತು ಬೇರೆ ಬೇರೆ ಪಕ್ಷದಿಂದ ಸಜ್ಜನರು ನಮ್ಮ ಪಕ್ಷ ಸೇರತೀದಾರೆ. ಬಿಜೆಪಿಯಲ್ಲಿರೋ ಎ ಮಂಜು ಜೆಡಿಎಸ್ ಸೇರಿದ್ದಾರೆ.
ಅವರೇ ಅಭ್ಯರ್ಥಿಯಾಗಲಿದ್ದಾರೆ. ಮೊದಲ ಪಟ್ಟಿಯಲ್ಲಿ ಕೆಲ ಬದಲಾವಣೆ ಆಗತ್ತೆ. ಶೀಘ್ರದಲ್ಲೇ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ; ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR!

ಅಲ್ಲದೆ, ಹಳ್ಳಿ ಹಳ್ಳಿಗೂ ಕುಮಾರಸ್ವಾಮಿ ತಲುಪಿದ್ದಾರೆ. ನಾವು ಕರೆತಂದ ಜನರ ಮುಂದೆ ಭಾಷಣ ಮಾಡ್ತಿಲ್ಲ, ತಾವಾಗಿಯೇ ಬಂದ ಜನರ ಮುಂದೆ ಮಾತನಾಡುತ್ತಿದ್ದೇವೆ. ಬೆಳಗಾವಿಯಲ್ಲೂ ಅನೇಕ ಜನ ಸೇರ್ಪಡೆ ಆಗ್ತಾರೆ. ನಮಗೆ ಹಿಂದೆ ಅಭ್ಯರ್ಥಿ ಇಲ್ಲ ಅಂದ್ರು, ಶೆಟ್ಟರ್ ಅವರು ಸ್ಪರ್ದೆ ಮಾಡೋ ಕ್ಷೇತ್ರದಲ್ಲಿ ಆರು ಜನ ಟಿಕೆಟ್ ಕೇಳ್ತೀದಾರೆ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.

13 ಜನರನ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತಂದೀರಿ :  ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಇಬ್ರಾಹಿಂ ಅವರು, ನಿಮಗೆ ನಾಚಿಕೆ ಆಗಬೇಕು  13 ಜನರ್ನು ಮಂಚದ ಮೇಲೆ ಮಲಗಿಸಿ ಸರ್ಕಾರ ತಂದೀರಿ. ಮತ್ತೇ ಇವತ್ತು ಜಾರಕಿಹೊಳಿ ಸಿಡಿ ತಗೊಂಡು ಹೋಮ್ ಮಿನಿಸ್ಟರ್ ಹತ್ರ ಹೋಗಿದ್ದಾರೆ. ನನ್ನ ಮಗ ಸಿಡಿ ಅಂದ್ರೆ ಏನ್ ಅಂತಾ ಕೇಳ್ತೀದಾರೆ ಅಂತ ಅನ್ಸಾರಿ ಹೇಳುತ್ತಿದ್ದಾರೆ ಎಂದರು.

ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳಲ್ಲಿ ರಾಮ್ ಚರಣ್ ಬ್ಯುಸಿ, ದಿನೇ ದಿನೇ ಹೆಚ್ಚಾಗ್ತಿದೆ ಮೆಗಾ ಪವರ್ ಸ್ಟಾರ್ ಕ್ರೇಜ್!

ಕಟೀಲು ಪೀಟಲು ಬಾರಸಿ ಹೇಳ್ತಾನೆ ರೋಡ್ ಅಭಿವೃದ್ಧಿ ಬೇಡ ಬೇಡಾ ಲವ್ ಜಿಹಾದ್ ಬಗ್ಗೆ ಮಾತಾಡ್ತಾನೆ. 12 ಜನರ ಸಿಡಿನೇ ಲವ್ ಜಿಹಾದ್ ನಾ ಎಂದು ಇಬ್ರಾಹಿಂ ಪ್ರಶ್ನೆ ಮಾಡಿದರು. ಇವತ್ತು ಜಾರಕಿಹೊಳಿ ವಿಷಕನ್ಯೆ ಬಗ್ಗೆ ಮಾತಾಡ್ತಾರೆ, ಏನ ಇದೇಲ್ಲಾ.. ಬೊಮ್ಮಾಯಿ ಇಂತಹ ಪಾಪಿಗಳನ್ನ ಕಟ್ಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಸದಾನಂದಗೌಡ ಸೇರಿ 12 ಜನರ ಕ್ಯಾಸೆಟ್ ಹೊರಗೆ ಹಾಕಬೇಕು. ಇಲ್ಲದಿದ್ದರೆ ನೀವು ರಾಜೀನಾಮೆ ಕೊಟ್ಟು ಹೊರಗೆ ಬರಬೇಕು ಎಂದು ಒತ್ತಾಯಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News